KPSC : ಕನ್ನಡ ಭಾಷಾ ಮೌಖಿಕ ಸಂದರ್ಶನ ದಿನಾಂಕ ಪ್ರಕಟ

Share the Article

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಇದೀಗ 2021 ಪ್ರಥಮ ಅಧಿವೇಶನ ಪರೀಕ್ಷೆಗೆ ಸಂಬಂಧ ಪಟ್ಟಂತೆ ಕನ್ನಡ ಭಾಷಾ ವಿಷಯದ (ವಿಷಯ ಸಂಕೇತ 47 &73 ಅಭ್ಯರ್ಥಿಗಳಿಗೆ ಮಾತ್ರ) ಮೌಖಿಕ ಸಂದರ್ಶನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

2021ನೇ ಸಾಲಿನಲ್ಲಿ ಪ್ರಥಮ ಅಧಿವೇಶನದ ಅನುಸಾರ, ಕನ್ನಡ ಭಾಷಾ ವಿಷಯದ (ವಿಷಯ ಸಂಕೇತ 47 &73 ಅಭ್ಯರ್ಥಿಗಳಿಗೆ ಮಾತ್ರ) ಮೌಖಿಕ ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳಿಗೆ ಜನವರಿ 09 ರಿಂದ 17 ರವರೆಗೆ ಸಂದರ್ಶನ ನಡೆಸಲು ವೇಳಾಪಟ್ಟಿ ನಿಗದಿ ಮಾಡಲಾಗಿದೆ.

ಕೆಪಿಎಸ್‌ಸಿ’ಯು ದಿನಾಂಕ 15-03-2017 ರಂದು ಕರ್ನಾಟಕ ಸರ್ಕಾರದ ಸಚಿವಾಲಯ ಗ್ರಂಥಾಲಯದ ಗ್ರಂಥಾಲಯ ಸಹಾಯಕರು 04 ಉಳಿಕೆ ಮೂಲ ವೃಂದದ ಹುದ್ದೆಗಳ ಭರ್ತಿಗೆ ಸಂಬಂಧ ಪಟ್ಟಂತೆ 2022 ರ ಫೆಬ್ರುವರಿ 17 ರಂದು ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಿತ್ತು. ಇದೀಗ ಇಲಾಖೆಯ ವರದಿಯಂತೆ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಹುದ್ದೆಗಳಿಗೆ ಸೀಮಿತಗೊಳಿಸಿ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ.

ದಿನಾಂಕ 15-03-2017 ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಗ್ರಂಥಾಲಯ ಸಹಾಯಕರು ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದ್ದು,ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇತ್ತೀಚಿನ ಅಪ್ಡೇಟ್  ಚೆಕ್‌ ಮಾಡಬಹುದಾಗಿದೆ. ಕೆಪಿಎಸ್‌ಸಿ’ಯು ಅಧಿಸೂಚಿಸಿದ್ದ ವಿವಿಧ ಗ್ರೂಪ್ ಸಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಡ್ಡಾಯ ಕನ್ನಡ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಮೌಖಿಕ ಸಂದರ್ಶನ ವೇಳಾಪಟ್ಟಿ ಹೀಗಿವೆ:

ಜನವರಿ 09 ಮತ್ತು 10, 2023: ಬೆಂಗಳೂರು

ಜನವರಿ 09 ರಿಂದ 13, 2023:  ಕಲಬುರಗಿ

ಜನವರಿ 09, 2023: ಶಿವಮೊಗ್ಗ, ಮೈಸೂರು

ಜನವರಿ 09 ರಿಂದ 17, 2023: ಬೆಳಗಾವಿ.

ಈ ಮೌಖಿಕ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಸೂಚನಾ ಪತ್ರಗಳನ್ನು ಜನವರಿ 05, 2023 ರಿಂದ ಕೆಪಿಎಸ್‌ಸಿ ವೆಬ್‌ಸೈಟ್‌ http://kpsc.kar.nic.in ಗೆ ತೆರಳಿ ಲಾಗಿನ್‌ ಆಗುವ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.