SBI Latest News: ಸ್ಟೇಟ್ ಬ್ಯಾಂಕ್ನ ಗ್ರಾಹಕರೇ ಇಲ್ಲಿದೆ ನಿಮಗೊಂದು ಮಹತ್ವದ ಮಾಹಿತಿ
ಭಾರತದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೋಟ್ಯಾಂತರ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಹೇಳಿ ಕೇಳಿ ಇದು ಡಿಜಿಟಲ್ ಯುಗ.. ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿಯೆ ಎಲ್ಲ ವ್ಯವಹಾರ ವಹಿವಾಟು ನಡೆಸಬಹುದಾಗಿದ್ದು, ಕೆಲಸದ ನಡುವೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಶಾಪಿಂಗ್ ಮಾಡಬಹುದು. ಈಗ ಕ್ಷಣ ಮಾತ್ರದಲ್ಲಿಯೇ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿ ಕೊಟ್ಟಿವೆ. ನೀವು SBI ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಮುಖ್ಯ ಮಾಹಿತಿ ನೀಡಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೋಟಿಗಟ್ಟಲೆ ಗ್ರಾಹಕರಿಗಾಗಿ ಮಹತ್ವದ ಮಾಹಿತಿಯನ್ನು ನೀಡಿದ್ದು,ಗ್ರಾಹಕರಿಗೆ ನೆರವಾಗುವ ನಿಟ್ಟಿನಲ್ಲಿ ಬ್ಯಾಂಕ್ ಕೆಲವು ನಂಬರ್ಗಳನ್ನು ಹಂಚಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಂಚಿಕೊಂಡಿರುವ ಮಾಹಿತಿಯ ಅನುಸಾರ, ಇನ್ನು ಮುಂದೆ ಬ್ಯಾಂಕ್ ಗ್ರಾಹಕರು ಕೆಲವು ಮಾಹಿತಿಗಳನ್ನು ಪಡೆಯಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಇದಕ್ಕಾಗಿ ಎಸ್ಬಿಐ ಹೊಸ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದೆ. ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮೂಲಕ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದು, ಸಹಾಯವಾಣಿಗೆ ಸಂಬಂಧಿಸಿದ ಎರಡು ಸಂಖ್ಯೆಗಳನ್ನು ಹಂಚಿಕೊಂಡಿದೆ. ಈ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ನೀವು ಬ್ಯಾಂಕಿನ ಹಲವು ವಿಶೇಷ ಸೌಲಭ್ಯಗಳ ಅನುಕೂಲ ಪಡೆದುಕೊಳ್ಳಬಹುದು. ನೀವು ಮನೆಯಲ್ಲಿ ಕುಳಿತು 1800 1234 ಮತ್ತು 1800 2100 ಗೆ ಕರೆ ಮಾಡುವ ಮೂಲಕ ಬ್ಯಾಂಕ್ನ ಎಲ್ಲಾ ಸೌಲಭ್ಯಗಳ ಲಾಭವನ್ನು ಪಡೆಯಬಹುದಾಗಿದೆ.
ಎಸ್ಬಿಐ ಹೊಸ ಟೋಲ್ ಫ್ರೀ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಗ್ರಾಹಕರು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ಚೆಕ್ ಬುಕ್ ಸ್ಥಿತಿಯನ್ನು ಪರಿಶೀಲಿಸಬಹುದು ಜೊತೆಗೆ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಟಿಡಿಎಸ್ ವಿವರಗಳ ಪರಿಶೀಲನೆ, ಎಟಿಎಂ ಕಾರ್ಡ್ ನಿರ್ಬಂಧಿಸಿ ಮತ್ತು ರವಾನೆ ಸ್ಥಿತಿಯನ್ನು ಪರಿಶೀಲಿಸಬಹುದು. ಖಾತೆಯ ಕೊನೆಯ 5 ವಹಿವಾಟುಗಳ ಬಗ್ಗೆ ಮಾಹಿತಿ ಪಡೆಯಬಹುದು ಜೊತೆಗೆ ಹಳೆಯ ಕಾರ್ಡ್ ಅನ್ನು ನಿರ್ಬಂಧಿಸಿದ ನಂತರ ಹೊಸ ಎಟಿಎಂ ಕಾರ್ಡ್ ಗಾಗಿ ಮನವಿ ಕೂಡ ಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಸೇವೆಯು 24*7 ದೊರೆಯಲಿದ್ದು, ಹಬ್ಬ ಹರಿದಿನಗಳಲ್ಲಿ ಗ್ರಾಹಕರ ಸೌಲಭ್ಯಗಳನ್ನು ಮನಗಂಡು ಬ್ಯಾಂಕ್ ಈ ಹೊಸ ಸಂಖ್ಯೆಗಳನ್ನು ಆರಂಭಿಸಿದ್ದು ರಜಾದಿನಗಳಲ್ಲಿಯೂ ಗ್ರಾಹಕರು ಬ್ಯಾಂಕಿನ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.