Samsung Galaxy F04 ನಾಳೆ ಇಂಡಿಯಾದಲ್ಲಿ ಬಿಡುಗಡೆ : ಬೆಲೆ 8,000 ರೂ.ಗಿಂತ ಕಡಿಮೆ!

ಮೊಬೈಲ್ ಎಂಬ ಮಾಯಾವಿ ಪ್ರತಿಯೊಬ್ಬರ ಕೈಯಲ್ಲೂ ಹರಿದಾಡಿ ಅರೆ ಕ್ಷಣವು ಬಿಟ್ಟಿರಲಾಗದಷ್ಟು ಈ ಸಾಧನದ ಮೋಡಿಗೆ ಜನತೆ ಸಿಲುಕಿದ್ದಾರೆ. ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರ ನಡೆಯುತ್ತಿದ್ದು, ಮೊದಲು ಕೇವಲ ಲ್ಯಾಂಡ್ ಫೋನ್, ಇಲ್ಲವೇ ಬೇಸಿಕ್ ಸೆಟ್ ಮಾತ್ರ ಬಳಕೆಯಾಗುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದ್ದು, ವಿಭಿನ್ನ ವೈಶಿಷ್ಟ್ಯದ ಮೂಲಕ ಹೊಸ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಇದೀಗ ಮೊಬೈಲ್ ಕೊಳ್ಳುವ ಯೋಜನೆ ಹಾಕಿದ್ದವರಿಗೆ ಬಂಪರ್ ಸಿಹಿ ಸುದ್ದಿ ಕಾದಿದೆ.

ದೇಶದಲ್ಲಿ ಬಹುನಿರೀಕ್ಷಿತ Samsung Galaxy F04 ಸ್ಮಾರ್ಟ್‌ಫೋನ್ ಬಿಡುಗಡೆಗೆ ತಯಾರಾಗಿದೆ. ಕಳೆದ ಹಲವು ದಿನಗಳಿಂದ ವದಂತಿಗಳಿಂದಲೇ ಸುದ್ದಿಯಾಗಿದ್ದ ಬಜೆಟ್ ಬೆಲೆಯ ಹೊಸ Samsung Galaxy F04 ಸ್ಮಾರ್ಟ್‌ಫೋನ್ ನಾಳೆ ದೇಶದ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟಿಸಲಾಗಿರುವ ಟೀಸರ್ ಅನುಸಾರ,ದೇಶದಲ್ಲಿ Samsung Galaxy F04 ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 8,000 ರೂ.ಗಿಂತ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ದೇಶದ ಬಜೆಟ್ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುವ ಲಕ್ಷಣಗಳು ಕಂಡುಬರುತ್ತಿವೆ.

ಫ್ಲಿಪ್‌ಕಾರ್ಟ್ ಪ್ರಕಟಿಸಿರುವ ಜಾಹಿರಾತುವಿನಲ್ಲಿ samsung Galaxy F04 ಸ್ಮಾರ್ಟ್‌ಫೋನ್ 8,000 ರೂ.ಗಿಂತ ಕಡಿಮೆ ಬೆಲೆ ಇರುವುದು ಖಚಿತ ಎನ್ನಲಾಗುತ್ತಿದೆ. ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್ ಬೆಲೆಯನ್ನು 7*** ಎಂದು ನಮೂದಿಸಿರುವುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಕೆಲ ಮಾಹಿತಿಗಳ ಅನುಸಾರ, Samsung Galaxy F04 ಸ್ಮಾರ್ಟ್‌ಫೋನ್ ನಾಳೆ ಮಧ್ಯಾಹ್ನ ಲಾಂಚ್ ಆಗಲಿದ್ದು ಓಪಲ್ ಹಸಿರು ಮತ್ತು ಜೇಡ್ ಪರ್ಪಲ್ ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕೆಲ ಮಾದ್ಯಮಗಳು ಹೇಳಿಕೊಂಡಿದೆ.
ದೇಶದಲ್ಲಿ ಹೊಸದಾಗಿ ಬಿಡುಗಡೆಯಾಗಿ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿರುವ ಹೊಸ Samsung Galaxy F04 ಸ್ಮಾರ್ಟ್‌ಫೋನಿನ ಅಧಿಕೃತ ಪೋಸ್ಟರ್‌ನಲ್ಲಿ ಯುನಿಬಾಡಿ ವಿನ್ಯಾಸವನ್ನು ತೋರಿಸಲಾಗಿದೆ.ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ CES 2023 ಈವೆಂಟ್‌ ಗಿಂತಲೂ ಮೊದಲೇ Samsung ಕಂಪನಿಯು ಗೇಮಿಂಗ್ ಮಾನಿಟರ್‌ಗಳ ಬೆಸ್ಪೋಕ್ ಆವೃತ್ತಿಯನ್ನು ಅನಾವರಣ ಮಾಡಿದೆ.

ಇ-ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಪ್ರಕಟಿಸಿರುವ ಜಾಹಿರಾತಿನ ಅನುಸಾರ ಈ ಹೊಸ Samsung Galaxy F04 ಸ್ಮಾರ್ಟ್‌ಫೋನಿನಲ್ಲಿ 5,000mAh ಬ್ಯಾಟರಿ, 6.5-ಇಂಚಿನ HD+ ಡಿಸ್‌ಪ್ಲೇ, MediaTek Helio P35 SoC ಪ್ರೊಸೆಸರ್ ಹೊಂದಿರುವುದು ಸಾಧ್ಯವಾಗಿದೆ. ಇದರ ಜೊತೆಗೆ ಔಟ್ ಆಫ್ ಬಾಕ್ಸ್‌ನಲ್ಲಿ ಆಂಡ್ರಾಯ್ಡ್ 12 ನಲ್ಲಿ ಕಾರ್ಯನಿರ್ವಹಿಸಲಿದೆ.

ಇದರ ಮುಂಭಾಗವು ವಾಟರ್‌ಡ್ರಾಪ್ ಶೈಲಿಯ ನಾಚ್ ಶೈಲಿಯಲ್ಲಿ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾಗಳು ಇರುವ ಯುನಿಬಾಡಿ ಶೈಲಿಯಲ್ಲಿ ಪ್ರವೇಶ ಮಟ್ಟದ ಸಾಧನದ ರೀತಿ ವಿನ್ಯಾಸ ಮಾಡಲಾಗಿದೆ .

ಈ ಸ್ಮಾರ್ಟ್‌ಫೋನ್ ಪ್ರವೇಶ ಮಟ್ಟದ ಸಾಧನದಂತೆ ವಿನ್ಯಾಸಗೊಳಿಸಲಾಗುವ ಹಿನ್ನೆಲೆ ಇದು 5G ಬೆಂಬಲ ಹೊಂದಿರದು ಎಂಬ ಮಾತುಗಳು ಕೇಳಿಬರುತ್ತಿವೆ. 7,680×2,160 ರೆಸಲ್ಯೂಶನ್ ಮತ್ತು 32:9 ಆಕಾರ ಅನುಪಾತದ ಈ ಹೊಸ ಮಾನಿಟರ್‌ಗಳ ಬೆಲೆ ಇನ್ನೂ ತಿಳಿದು ಬಂದಿಲ್ಲ.

ಒಡಿಸ್ಸಿ, ವ್ಯೂಫಿನಿಟಿ ಮತ್ತು ಸ್ಮಾರ್ಟ್ ಮಾನಿಟರ್ ಲೈನ್‌ಅಪ್‌ಗಳನ್ನು ಬಿಡುಗಡೆ ಮಾಡಿದ ಬಳಿಕ, “ಕೆಲಸ ಮಾಡಲು, ಆಟವಾಡಲು ಮತ್ತು ಬದುಕಲು” ಮಾನಿಟರ್‌ಗಾಗಿ ಹುಡುಕುತ್ತಿರುವ ಜನರಿಗೆ ಗೇಮಿಂಗ್ ಮಾನಿಟರ್‌ಗಳ ಬೆಸ್ಪೋಕ್ ಆವೃತ್ತಿಯು ದೊರೆಯಲಿದೆ ಎಂದು Samsung ಹೇಳಿದ್ದು, Samsung ಒಡಿಸ್ಸಿ ನಿಯೋ G9 ಗೇಮಿಂಗ್ ಮಾನಿಟರ್ (ಮಾದರಿ ಹೆಸರು: G95NC) ವಿಶಾಲವಾದ ಕ್ಷೇತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಿದೆ.

Leave A Reply

Your email address will not be published.