ಕಡಿಮೆಯಾಗಲಿದೆ ಪೆಟ್ರೋಲ್‌ ಡೀಸೆಲ್‌ ಬೆಲೆ ? ಕೇಂದ್ರದಿಂದ ಮಹತ್ವದ ಮಾಹಿತಿ

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಹೌದು!!!ಕೇಂದ್ರ ಸರ್ಕಾರ ಸಂತಸದ ಸುದ್ದಿಯೊಂದನ್ನು ನೀಡಲು ತೀರ್ಮಾನ ಕೈಗೊಂಡಿದೆ. ಬೆಲೆ ಏರಿಕೆಯ ಬಿಸಿಯಿಂದ ದೊಡ್ಡ ಹೊಡೆತ ಅನುಭವಿಸುತ್ತಿರುವ  ಸಾಮಾನ್ಯ ಜನತೆಗೆ ಇದರಿಂದ ಕೊಂಚ ಸಮಾಧಾನ ಉಂಟಾಗಲಿದೆ ಎನ್ನಲಾಗುತ್ತಿದೆ.

ಪೆಟ್ರೋಲ್-ಡೀಸೆಲ್ ಬೆಲೆಗಳ ಬಗ್ಗೆ ಹೊಸ ಮಾಹಿತಿ  ಹೊರಬಿದ್ದಿದೆ. ಶೀಘ್ರದಲ್ಲೇ ಪೆಟ್ರೋಲ್ ಅಗ್ಗವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೊಸ ವರ್ಷದಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ದೊಡ್ಡ ಪ್ಲಾನ್ ಮಾಡಿದ್ದು ಕಳೆದ ಹಲವು ತಿಂಗಳುಗಳಿಂದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಜೊತೆಗೆ ಹೊಸ ವರ್ಷದಲ್ಲಿ ಬೆಲೆಗಳಲ್ಲಿ ಭಾರಿ ಏರಿಕೆ ಕೂಡ ಕಂಡು ಬಂದಿದ್ದು, ಹೀಗಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಕಚ್ಚಾ ತೈಲದ ಬೆಲೆಗಳಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 85.59 ಡಾಲರ್‌ಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ, ಡಬ್ಲ್ಯುಟಿಐ ಬೆಲೆ ಬ್ಯಾರೆಲ್‌ಗೆ $ 80.11 ಕ್ಕೆ ಏರಿದೆ. ಡೀಸೆಲ್ ರಫ್ತಿನ ಮೇಲಿನ ತೆರಿಗೆಯನ್ನೂ ಸರ್ಕಾರ ಹೆಚ್ಚಿಸಿದ್ದು, 5ರಿಂದ 7.5ಕ್ಕೆ ಏರಿಕೆಯಾಗಿದೆ. ವಿಂಡ್‌ಫಾಲ್ ತೆರಿಗೆಯ ವೆಚ್ಚವು 1.5 ರಿಂದ 4.5 ಕ್ಕೆ ಹೆಚ್ಚಾಗಿದೆ.

ಪೆಟ್ರೋಲಿಯಂ, ಕಚ್ಚಾ ತೈಲ ಮತ್ತು ವಾಯುಯಾನ ಟರ್ಬೈನ್ ಇಂಧನದ ಮೇಲಿನ ವಿಂಡ್ ಫಾಲ್ ಟ್ಯಾಕ್ಸ್ ನಲ್ಲಿ ಭಾರಿ ಏರಿಕೆಯಾಗಿದೆ ಎಂದು ಸರ್ಕಾರದಿಂದ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದ  ಅನುಸಾರ ಇನ್ನು ಮುಂದೆ ಒಂದು ಟನ್ ಕಚ್ಚಾ ತೈಲದ ಮೇಲೆ 1700 ರೂಪಾಯಿ ಬದಲಾಗಿ 2100 ರೂಪಾಯಿ ವಿಂಡ್ ಫಾಲ್ ಟ್ಯಾಕ್ಸ್ ವಿಧಿಸಲಾಗುತ್ತದೆ.

ಈ ಆದೇಶ ಮಂಗಳವಾರದಿಂದಲೇ ಜಾರಿಗೆ ಬಂದಿದೆ ಎನ್ನಲಾಗಿದೆ. ಕಂಪನಿಯು ಕಡಿಮೆ ಶ್ರಮದಿಂದ ಉತ್ತಮ ಲಾಭವನ್ನು ಪಡೆದಾಗ, ಸರ್ಕಾರದಿಂದ ವಿಂಡ್‌ಫಾಲ್ ತೆರಿಗೆಯನ್ನು ವಿಧಿಸಲಾಗುತ್ತದೆ .

Leave A Reply

Your email address will not be published.