BSNL ಗ್ರಾಹಕರೇ ನಿಮಗೊಂದು ಬೇಸರದ ಸುದ್ದಿ
ಟೆಲಿಕಾಂ ಕಂಪನಿಗಳಲ್ಲಿ ಜಿಯೋ, ಏರ್ಟೆಲ್, ವೊಡಫೋನ್ ಐಡಿಯಾ ಈ ರೀತಿಯ ಹಲವಾರು ಖಾಸಗಿ ಕಂಪನಿಗಳಿವೆ. ಆದರೆ ಇವೆಲ್ಲದಕ್ಕೆ ಪೈಪೋಟಿ ನೀಡುವಂತಹ ಸರ್ಕಾರಿ ಕಂಪನಿಯೆಂದರೆ ಬಿಎಸ್‌ಎನ್‌ಎಲ್ ಕಂಪನಿ . ಇದು ಒಂದು ಸರ್ಕಾರಿ ಕಂಪನಿಯಾಗಿದ್ದು. ಎಷ್ಟೇ ಹೊಸ ಕಂಪನಿಗಳು ಮಾರುಕಟ್ಟೆಗೆ ಕಾಲಿಟ್ಟರು ಈ ಕಂಪನಿಯ ಗ್ರಾಹಕರು ಹಾಗೇ ಇದ್ದಾರೆ. ಇದರ ರೀಚಾರ್ಜ್ ಬೆಲೆಗಳು ಕೂಡ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿರುವುದರಿಂದ ಇದು ಇನ್ನಷ್ಟು ಜನಪ್ರಿಯತೆಯನ್ನು ಪಡೆದಿದೆ. ಟೆಲಿಕಾಂ ಕಂಪನಿಗಳು ತನ್ನ ರೀಚಾರ್ಜ್ ಆಫರ್ಸ್ ಮೂಲಕವೇ ಗ್ರಾಹಕರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.
ಆದರೆ ಪ್ರಸ್ತುತ ಹೊಸ ವರ್ಷದಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ದೊಡ್ಡ ಹೊಡೆತ ನೀಡಿದೆ. ಅದರಂತೆ ಪ್ರಮುಖ ಮೂರು ರೀಚಾರ್ಜ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳನ್ನು ಬಿಎಸ್‌ಎನ್‌ಎಲ್ ಇದ್ದಕ್ಕಿದ್ದಂತೆ ನಿಲ್ಲಿಸಿದೆ. ಹಾಗೆಯೇ ಈ ಯೋಜನೆಗಳನ್ನು 1 ಜನವರಿ 2023 ರಿಂದ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದ್ದು, ಇನ್ಮುಂದೆ ಲಭ್ಯವಿರುವುದಿಲ್ಲ ಎನ್ನುವ ಮಾಹಿತಿ ನೀಡಲಾಗಿದೆ.
ಈಗಾಗಲೇ ಬಿಎಸ್‌ಎನ್‌ಎಲ್‌ನ ಅಗ್ಗದ ದರದ ಬ್ರಾಡ್‌ಬ್ಯಾಂಡ್ ರೀಚಾರ್ಜ್ ಪ್ಲ್ಯಾನ್‌ಗಳಾದ 275 ರೂ. ನ ಎರಡು ರೀಚಾರ್ಜ್ ಯೋಜನೆ ಹಗೂ 775 ರೂ. ನ ರೀಚಾರ್ಜ್ ಪ್ಲ್ಯಾನ್‌ಗಳನ್ನು ಕೈಬಿಡಲಾಗಿದೆ. ಇವು ಸೀಮಿತ ಅವಧಿಯ ಕೊಡುಗೆಯಾಗಿವೆ ಎಂದು ತಿಳಿಸುವ ಮೂಲಕ ಕಳೆದ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಗ್ರಾಹಕರಿಗೆ ಪರಿಚಯಿಸಲಾಗಿತ್ತು. ಆದರೆ, ಜನವರಿ 1, 2023 ರಿಂದ ಈ ರೀಚಾರ್ಜ್ ಪ್ಲ್ಯಾನ್ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.
ಮುಖ್ಯವಾಗಿ ಬಿಎಸ್‌ಎನ್‌ಎಲ್‌ನ 275 ರೂ. ಯೋಜನೆಯಾದ ಬಿಎಸ್‌ಎನ್‌ಎಲ್‌ನ 275 ರೂ. ನಲ್ಲಿ ಎರಡು ರೀತಿಯ ಪ್ಲ್ಯಾನ್‌ಗಳಿದ್ದು, ಇದರಲ್ಲಿ ಬಳಕೆದಾರರು ಒಟ್ಟಾರೆ ಒಂದು ತಿಂಗಳಲ್ಲಿ 3.3 TB ಡೇಟಾವನ್ನು ನೀಡಲಾಗುತ್ತಿತ್ತು. ಹಾಗೆಯೇ ಈ ಪ್ಲ್ಯಾನ್‌ನಲ್ಲಿ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು 60Mbps ವೇಗದಲ್ಲಿ ಒದಗಿಸಲಾಗುತ್ತಿತ್ತು. ಆದರೆ, ಈ ಎರಡೂ ಯೋಜನೆಗಳಲ್ಲಿ ಯಾವುದೇ ಓಟಿಟಿ ಪ್ರಯೋಜನವನ್ನು ನೀಡಲಾಗುತ್ತಿರಲಿಲ್ಲ. ಆದರೂ ಸಹ ಈ ಪ್ಲ್ಯಾನ್‌ಗಳು ಹೆಚ್ಚು ಜನಪ್ರಿಯಗೊಂಡಿದ್ದವು.
ಅದಲ್ಲದೆ 775 ರೂ. ಗಳ ಮತ್ತೊಂದು ಪ್ಲ್ಯಾನ್ ಸಹ ಇನ್ಮುಂದೆ ಬಳಕೆದಾರರಿಗೆ ಲಭ್ಯವಿರುವುದಿಲ್ಲ. ಈ ಯೋಜನೆಯಲ್ಲಿ 3300GB (3.3TB) ಡೇಟಾವನ್ನು 100Mbps ವೇಗದಲ್ಲಿ ನೀಡಲಾಗುತ್ತಿತ್ತು. ಹಾಗೆಯೇ ಓಟಿಟಿ ಪ್ರಯೋಜನ ಮತ್ತು 75 ದಿನಗಳ ಮಾನ್ಯತೆ ಇದರಲ್ಲಿತ್ತು. ಆದರೆ, ಈ ಅಗ್ಗದ ಪ್ಲ್ಯಾನ್‌ಗಳು ಇನ್ಮುಂದೆ ಲಭ್ಯವಾಗದೆ ಇರುವುದು ಹಲವಾರು ಗ್ರಾಹಕರಿಗೆ ಶಾಕಿಂಗ್ ವಿಷಯವಾಗಿದೆ.
ಹಾಗೆಯೇ ಸಾಮಾನ್ಯ ರೀಚಾರ್ಜ್ ಪ್ಲ್ಯಾನ್‌ಗಳಾದ 399 ರೂ. ಯೋಜನೆಯಲ್ಲಿ 1000GB ಡೇಟಾವನ್ನು 30Mbps ವೇಗದಲ್ಲಿ ನೀಡಲಾಗುತ್ತದೆ. ಹಾಗೆಯೇ 449 ರೂ. ರೀಚಾರ್ಜ್ ಪ್ಯಾಕ್‌ನಲ್ಲಿ 30Mbps ವೇಗದ ನೆಟ್ ಸಿಗಲಿದೆ. ಜೊತೆಗೆ ಈ ಯೋಜನೆಯಲ್ಲಿ 3300GB ಡೇಟಾ ಲಭ್ಯವಿದೆ. ಇನ್ನು ಮತ್ತೊಂದು ಪ್ಲ್ಯಾನ್ ಆದ 449ರೂ. ಗಳ ರೀಚಾರ್ಜ್ ಪ್ಲ್ಯಾನ್‌ನಲ್ಲಿ 3300GB ಡೇಟಾ ಆಯ್ಕೆ ನೀಡಲಾಗಿದ್ದು, 40Mbps ನಲ್ಲಿನ ವೇಗದಲ್ಲಿ ಇಂಟರ್ನೆಟ್ ಬಳಕೆ ಮಾಡಬಹುದು. ಹಾಗೆಯೇ ಈ ಪ್ಲ್ಯಾನ್ ಆರು ತಿಂಗಳ ಮಾನ್ಯತೆ ಹೊಂದಿದೆ ಎಂದು ತಿಳಿಸಲಾಗಿದೆ.
ಇನ್ನು ಬಿಎಸ್‌ಎನ್‌ಎಲ್‌ನ ಬ್ರಾಡ್‌ಬ್ಯಾಂಡ್ ಬಗ್ಗೆ ಹೇಳುವುದಾದರೆ 1 ತಿಂಗಳು, 6 ತಿಂಗಳು, 12 ತಿಂಗಳು ಮತ್ತು 24 ತಿಂಗಳುಗಳ ಮಾನ್ಯತೆಯನ್ನು ನೀಡಲಿದ್ದು, ಇದರಲ್ಲಿ ಎಂಟ್ರಿ ಪ್ಲ್ಯಾನ್ ಬೆಲೆ 329 ರೂ. ಗಳಿಂದ ಆರಂಭವಾಗಲಿದ್ದು, 1000GB ಡೇಟಾವನ್ನು 20Mbps ವೇಗದಲ್ಲಿ ನೀಡಲಾಗುತ್ತದೆ. ಹಾಗೆಯೇ, ಸ್ಥಳೀಯ ಮತ್ತು ಎಸ್‌ಟಿಡಿ ಸಂಖ್ಯೆಗಳಲ್ಲಿ ಉಚಿತ ಅನಿಯಮಿತ ಕರೆ ಸೌಲಭ್ಯ ಸಹ ನೀಡಲಾಗುತ್ತದೆ.