Amul, KMF : ಅಮುಲ್, ಕೆಎಂಎಫ್‌ ಆದಾಯ ಎಷ್ಟು?

ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ವಿಲೀನ ಮಾಡುವ ಕುರಿತಂತೆ ಹೇಳಿಕೆ ನೀಡಿದ್ದು ಈ ಬಗ್ಗೆ ಜನರಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

ಬ್ಯಾಂಕ್‌ಗಳಿಂದ ಹಿಡಿದು ಹಲವಾರು ಸಂಸ್ಥೆಗಳು ಪ್ರಮುಖವಾಗಿ ಗುಜರಾತ್ ಸಂಸ್ಥೆಗಳೊಂದಿಗೆ ವಿಲೀನವಾಗಿರುವುದರಿಂದ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವೆ ವಿಲೀನ ಆಗಲಿದೆ ‘ ಎಂಬ ಗೃಹ ಸಚಿವರ ಉಲ್ಲೇಖ ಮಾಡಿದ್ದರೂ ಕೂಡ ಸದ್ಯ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಅಲ್ಲಗಳೆದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಕೆಎಂಎಫ್ ವಹಿವಾಟು ಹೀಗಿದೆ:
ಹಣಕಾಸು ವರ್ಷ 2022ರಲ್ಲಿ ಕರ್ನಾಟಕ ಹಾಲು ಒಕ್ಕೂಟದ ಆದಾಯವು 4924.5 ಕೋಟಿ ರೂಪಾಯಿ ಆಗಿದ್ದು, ಕೆಎಂಎಫ್‌ನ ವಾರ್ಷಿಕ ವಹಿವಾಟು 19784 ಕೋಟಿ ರೂಪಾಯಿ ತಲುಪಿದೆ. 2020ರಲ್ಲಿ ಆದಾಯವು 4725.6 ಕೋಟಿ ರೂಪಾಯಿ ಆಗಿತ್ತು. ಆದರೆ 2021ರಲ್ಲಿ ಆದಾಯವು ಕೊಂಚ ಏರಿಕೆಯಾಗಿ, 5356.2 ಕೋಟಿ ರೂಪಾಯಿಗೆ ತಲುಪಿತ್ತು. ಆದರೆ 2022ರಲ್ಲಿ ಆದಾಯ ಕುಂಠಿತ ಕಂಡಿದೆ. ಆದರೆ ಭಾರತದ ಎರಡನೇ ಅತೀ ದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾಗಿ ಉಳಿದುಕೊಂಡಿದೆ.

ಪ್ರಸ್ತುತ ಕೆಎಂಫ್‌ ಸಂಸ್ಥೆಯು ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಲೊಕೇಟ್‌ ಹಾಗೂ ಮತ್ತು ಸಿಹಿತಿಂಡಿ (ಕಾಜು ಕಟ್ಲಿ, ಬೇಸನ್ ಲಡ್ಡೂ, ಮೈಸೂರು ಪಾಕ್, ಪೇಡಾ, ಇತ್ಯಾದಿ) ಮಾರಾಟ ಮಾಡುತ್ತಿರುವುದು ಗೊತ್ತಿರುವ ವಿಚಾರವೇ!!!. ಇದು ನಂದಿನಿ ಬ್ರ್ಯಾಂಡ್‌ ಹೆಸರಲ್ಲಿ ಖ್ಯಾತಿ ಪಡೆದಿದ್ದು, ಅಮುಲ್‌ ಸಂಸ್ಥೆಯು ಹಾಲಿನ ಪುಡಿ, ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಮಸ್ತಿ ದಾಹಿ, ಮೊಸರು, ಮಜ್ಜಿಗೆ ಚಾಕೊಲೇಟ್, ಐಸ್ ಕ್ರೀಂ,ಶ್ರೀಖಂಡ್, ಪನೀರ್(ತಾಜಾ ಗಿಣ್ಣು), ಗುಲಾಬ್ ಜಾಮೂನುಗಳು ಮುಂತಾದವುಗಳನ್ನು ಮಾರಾಟ ಮಾಡಲಾಗುತ್ತದೆ.

ಕೆಎಂಎಫ್‌ ಅಡಿ 17014 ನೋಂದಾಯಿತ ಸಂಘಗಳಿದ್ದು, 15043 ಸಂಘಗಳು ಸಕ್ರಿಯವಾಗಿವೆ. 4143 ಮಹಿಳಾ ಸಂಘಗಳು ಕಾರ್ಯಾಚರಣೆಯಲ್ಲಿವೆ. ಅಮುಲ್‌ ಅಡಿಯಲ್ಲಿ 13, 141 ಗ್ರಾಮೀಣ ಡೈರಿ ಸಹಕಾರ ಸಂಘಗಳನ್ನು ಹೊಂದಿದೆ.

ಅದೇ ರೀತಿ, ದೇಶದಲ್ಲಿ ಅಮುಲ್ ಅತೀ ದೊಡ್ಡ ಹಾಲು ಉತ್ಪಾದನ ಒಕ್ಕೂಟವಾಗಿ  ಗುರುತಿಸಿಕೊಂಡಿದೆ.  2021-22ರ ಸಾಲಿನ ಅಮುಲ್ ಗ್ರೂಪ್‌ನ ವಹಿವಾಟು 61,000 ಕೋಟಿ ರೂಪಾಯಿಯಾಗಿದ್ದು, ಈ  ಮುಖೇನ ದೇಶದಲ್ಲಿ ಅತೀ ದೊಡ್ಡ ಹಾಲು ಉತ್ಪಾದನ ಒಕ್ಕೂಟ ಎಂಬ ಸ್ಥಾನವನ್ನು ಭದ್ರ ಪಡಿಸಿಕೊಂಡು ಬಿಟ್ಟಿದೆ. ಪ್ರಸ್ತುತ ಅಮುಲ್ ವಿಶ್ವದ 8ನೇ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ.
2021-2022ರಲ್ಲಿ ಆದಾಯಕ್ಕೆ ಸುಮಾರು 8,000 ಕೋಟಿ ಸೇರ್ಪಡೆಯಾಗಿದ್ದು, ಕೋವಿಡ್ ಬಳಿಕ ರೆಸ್ಟೋರೆಂಟ್, ಕ್ಯಾಟೆರಿಂಗ್ ಎಲ್ಲೆಡೆ  ಬೇಡಿಕೆ ಹೆಚ್ಚಾದಂತೆ ಆದಾಯವು ಅಧಿಕವಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಅಮುಲ್ ಹಾಲು ಉತ್ಪನ್ನಗಳ ವಹಿವಾಟು ಶೇಕಡ 36ರಷ್ಟು  ಹೆಚ್ಚಾಗಿದೆ. ಅಮುಲ್ ಬಟರ್ ವಹಿವಾಟು ಶೇಕಡ 17ರಷ್ಟು, ತುಪ್ಪದ ವಹಿವಾಟು ಶೇಕಡ 19ರಷ್ಟು ಏರಿಕೆಯಾಗಿದೆ.

Leave A Reply

Your email address will not be published.