ಇಂಡಿಯಾ ಏರ್‌ಪೋರ್ಟ್‌ ಅಥಾರಿಟಿ ಅಂಗಸಂಸ್ಥೆಯಲ್ಲಿ ಹುದ್ದೆ | 400 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ

ಇಂಡಿಯಾ ಏರ್‌ಪೋರ್ಟ್‌ ಅಥಾರಿಟಿಯ ಅಂಗಸಂಸ್ಥೆಯಾಗಿರುವ ಕಾರ್ಗೊ ಲಾಜಿಸ್ಟಿಕ್ಸ್‌ ಅಂಡ್ ಅಲೈಡ್ ಸರ್ವೀಸೆಸ್ ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.

 

ನೇಮಕಾತಿ ಪ್ರಾಧಿಕಾರ : ಎಎಐ ಕಾರ್ಗೊ ಲಾಜಿಸ್ಟಿಕ್ಸ್‌ ಅಂಡ್ ಅಲೈಡ್ ಸರ್ವೀಸೆಸ್ ಕಂಪನಿ ಲಿಮಿಟೆಡ್
ಹುದ್ದೆ ಹೆಸರು : ಸೆಕ್ಯೂರಿಟಿ ಸ್ಕ್ರೀನರ್
ಹುದ್ದೆಗಳ ಸಂಖ್ಯೆ : 400
ಉದ್ಯೋಗ ಸ್ಥಳ : ಭಾರತದಾದ್ಯಂತ ಸಂಸ್ಥೆಯ ಘಟಕಗಳು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 26-12-2022
ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 14-01-2023

ಅರ್ಜಿ ಶುಲ್ಕ ರೂ.100. ಎಸ್‌ಸಿ / ಎಸ್‌ಟಿ/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು 2019, 2020, 2021ನೇ ಸಾಲಿನ ಎಸ್‌ಎಸ್‌ಸಿ ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್’ನ ಟೈಯರ್ 1 ಪರೀಕ್ಷೆಯಲ್ಲಿ ಅಥವಾ ಎಸ್‌ಎಸ್‌ಸಿ ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್ ಟೈಯರ್ 1 ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.

ಹುದ್ದೆ ಅವಧಿ : ಸೆಕ್ಯೂರಿಟಿ ಸ್ಕ್ರೀನರ್ ಹುದ್ದೆಗಳನ್ನು 3 ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ವಯಸ್ಸಿನ ಅರ್ಹತೆ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳು ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌, ಸಿಜಿಎಲ್‌ ಟೈಯರ್-1 ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ : ತರಬೇತಿ ಅವಧಿಯಲ್ಲಿ ಮಾಸಿಕ ರೂ.15,000 ನೀಡಲಾಗುತ್ತದೆ. ನಂತರದಲ್ಲಿ ಮಾಸಿಕ ವೇತನ ರೂ.26,000 ವರೆಗೆ ಸಿಗಲಿದೆ. ಜತೆಗೆ ವಿಶೇಷ ಭತ್ಯೆಗಳು ಸಿಗಲಿವೆ.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್‌ ಲಿಂಕ್ ಕ್ಲಿಕ್ ಮಾಡಿ.

Leave A Reply

Your email address will not be published.