ಮಲ ಹೊರುವ ಮಹಿಳೆ ಈಗ ಉಪಮೇಯರ್‌ | ಇತಿಹಾಸ ಸೃಷ್ಟಿಸಿದ ಚುನಾವಣೆ, ಗೆದ್ದು ಬೀಗಿದ ಜಾಡಮಾಲಿ ಮಹಿಳೆ

ಮಹಿಳೆಯರು ಎಲ್ಲಕ್ಕಿಂತ ಎಲ್ಲರಿಗಿಂತ ಯಾವುದಕ್ಕೂ ಕಮ್ಮಿ ಇಲ್ಲ ಎಂಬುದನ್ನು ಇಲ್ಲೊಬ್ಬ ಮಹಿಳೆ ತೋರಿಸಿಕೊಟ್ಟಿದ್ದಾರೆ. ಹೌದು, ಜಾಡಮಾಲಿಯಾಗಿ 40 ವರ್ಷ ಕೆಲಸ ಮಾಡಿದ್ದ ಮಹಿಳೆ ಈಗ ಉಪ ಮೇಯರ್‌ ಪಟ್ಟ ಅಲಂಕರಿಸಿದ್ದಾರೆ. ಈ ಮೂಲಕ ಬಿಹಾರದ ಗಯಾದ ನಗರ ಸಂಸ್ಥೆ ಇತಿಹಾಸ ಸೃಷ್ಟಿಸಿದೆ ಎಂದೇ ಹೇಳಬಹುದು. ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಗಯಾದ ಉಪ ಮೇಯರ್ ಆಗಿ ಚಿಂತಾ ದೇವಿ ಚುನಾಯಿತರಾಗಿದ್ದಾರೆ. ಜಾಡಮಾಲಿಯಾಗಿ ಮನುಷ್ಯರ ಮಲವನ್ನು ತಮ್ಮ ತಲೆಯ ಮೇಲೆ ಹೊತ್ತು ಸ್ವಚ್ಛಗೊಳಿಸುತ್ತಿದ್ದ ಚಿಂತಾ ದೇವಿಯನ್ನು ಆಯ್ಕೆ ಮಾಡಿರುವುದು ಬಹುಶಃ ಇದು ಇಡೀ ಜಗತ್ತಿಗೆ ಸೃಷ್ಟಿಸಿದ ಉದಾಹರಣೆ. ಇದು ಐತಿಹಾಸಿಕ” ಎಂದು ಗಯಾದ ಚುನಾಯಿತ ಮೇಯರ್ ಗಣೇಶ್ ಪಾಸ್ವಾನ್ ಹೇಳಿದ್ದಾರೆ.

ಚಿಂತಾ ದೇವಿ ಅವರು ಪೌರ ಕಾರ್ಮಿಕರಾಗಿ ಜತೆಗೆ ತರಕಾರಿ ವ್ಯಾಪಾರಿಯಾಗಿ ಕೂಡ ಕೆಲಸ ಮಾಡಿದ್ದರು. ಮಾಜಿ ಉಪ ಮೇಯರ್ ಮೋಹನ್ ಶ್ರೀವಾಸ್ತವ ಅವರು ಕೂಡ ಚಿಂತಾ ದೇವಿ ಅವರಿಗೆ ಬೆಂಬಲ ನೀಡಿದ್ದರು. ಚಿಂತಾ ದೇವಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ನಗರದ ಜನತೆ ದೀನರನ್ನು ಬೆಂಬಲಿಸುತ್ತದೆ ಮತ್ತು ಅವರನ್ನು ಸಮಾಜದಲ್ಲಿ ಮುಂದಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

Leave A Reply

Your email address will not be published.