ರೈತರಿಗೆ ಶಾಕಿಂಗ್ ನ್ಯೂಸ್ ; ಪಹಣಿ ಬೆಲೆ ಹೆಚ್ಚಿಸಿದ ಸರ್ಕಾರ!

ಹೊಸ ವರುಷಕ್ಕೆ ರೈತರಿಗೆ ಸರ್ಕಾರದಿಂದ ಶಾಕಿಂಗ್ ನ್ಯೂಸ್ ದೊರಕಿದ್ದು, ವಿವಿಧ ಸೌಲಭ್ಯಕ್ಕೆ ಅಗತ್ಯವಿರುವ ಪಹಣಿ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ.

 

ಹೌದು. ಸಾಲ, ಆಸ್ತಿ ಮಾರಾಟ, ಸಬ್ಸಿಡಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಹಣಿ ಅಗತ್ಯವಾಗಿದ್ದು, 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಲಾಗಿದೆ.

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಹಣಿಗೆ 5 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈಗ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲಿ ಪಹಣಿ ಪಡೆಯಲು 30 ರೂಪಾಯಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ. ನಾಡಕಚೇರಿ, ತಹಶೀಲ್ದಾರ್ ಕಚೇರಿ, ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ರೈತರು 25 ರೂಪಾಯಿ ನೀಡಿ ಪಹಣಿ ಪಡೆದುಕೊಳ್ಳಬೇಕಿದೆ.

Leave A Reply

Your email address will not be published.