ಮಾರುಕಟ್ಟೆಗೆ ಸ್ಯಾಮ್‌ಸಂಗ್‌ನ ಲ್ಯಾಪ್‌ಟಾಪ್ ಭರ್ಜರಿ ಎಂಟ್ರಿ | ಇದರ ಫೀಚರ್ಸ್ ಹೀಗಿದೆ
ಇತ್ತೀಚಿಗೆ ಲ್ಯಾಪ್ ಟಾಪ್ ಬೇಡಿಕೆ ಸಹ ಹೆಚ್ಚುತ್ತಿದೆ. ಎಲ್ಲವೂ ಈಗ ಆನ್ಲೈನ್ ಮಯ ಆಗಿರುವುದರಿಂದ ಜನರು ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಜನರ ಬೇಡಿಕೆಯಂತೆ ಇದೀಗ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಎಂಬ ಲ್ಯಾಪ್‌ಟಾಪ್ ಅನ್ನು ಕಂಪನಿ ಪರಿಚಯಿಸಿದೆ. ಈ ಲ್ಯಾಪ್‌ಟಾಪ್ ಭಾರತದ ಮಾರುಕಟ್ಟೆಗೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು ಕಡಿಮೆ ಬೆಲೆ ಯಲ್ಲಿ ಖರೀದಿಸಬಹುದಾಗಿದೆ.
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಕಂಪನಿಯಾಗಿರುವ ಸ್ಯಾಮ್‌ಸಂಗ್ ಕಂಪನಿ ಇದೀಗ ಹೊಸ ಪ್ರಯತ್ನಕ್ಕೆ ಕಾಲಿಟ್ಟಿದೆ. ಹೌದು ಸ್ಯಾಮ್‌ಸಂಗ್ ಕಂಪನಿ ಹೊಸ ಲ್ಯಾಪ್‌ಟಾಪ್ ಅನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಸ್ಯಾಮ್‌ಸಂಗ್ ಕಂಪನಿ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ತನ್ನದೇ ಶೈಲಿಯಲ್ಲಿ ಉತ್ಮನ್ನಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ.
ಇದೀಗ ಹೊಸದಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಲ್ಯಾಪ್‌ಟಾಪ್ ಬಗ್ಗೆ ತಿಳಿಯೋಣ ಬನ್ನಿ.
- ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 2 ಪ್ರೋ 360 ಲ್ಯಾಪ್‌ಟಾಪ್ ಈ ಬಾರಿಯ ಹೊಸ ವಿನ್ಯಾಸವನ್ನು ಹೊಂದಿದ ಲ್ಯಾಪ್‌ಟಾಪ್ ಆಗಲಿದೆ. ಇದು 2 ಇನ್ 1 ಲ್ಯಾಪ್‌ಟಾಪ್ ಆಗಿದ್ದು, 13.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಅಮೋಲ್ಡ್ ಡಿಸ್‌ಪ್ಲೇ ಆಗಿದ್ದು, 500 ನಿಟ್ಸ್‌ನಷ್ಟು ಬ್ರೈಟ್‌ನೆಸ್ ಅನ್ನು ಹೊಂದಿದೆ. ಈ ಡಿಸ್‌ಪ್ಲೇಯನ್ನು 360 ಡಿಗ್ರಿಯಷ್ಟು ಫ್ಲಿಪ್ ಮಾಡಬಹುದು. ಅಲ್ಲದೆ ಈ ಲ್ಯಾಪ್‌ಟಾಪ್ ಅನ್ನು ನೀವು ಟ್ಯಾಬ್ಲೆಟ್ ಆಗಿಯೂ ಬಳಸಬಹುದಾಗಿದೆ. ಜೊತೆಗೆ ಇದು ಸ್ಯಾಮ್‌ಸಂಗ್‌ನ ಎಸ್ ಪೆನ್ ಅನ್ನು ಸಹ ಬೆಂಬಲಿಸುತ್ತದೆ ಎಂದು ಹೇಳಲಾಗಿದೆ.
- ಈ ಲ್ಯಾಪ್‌ಟಾಪ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಚಾಲಿತ ರೂಪಾಂತರವು 35 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಯಾಕೆಂದರೆ ಇಂಟೆಲ್ ರೂಪಾಂತರವು ಸಿಂಗಲ್ ಚಾರ್ಜ್‌ನಲ್ಲಿ 21 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಒಳಗೊಂಡಂತೆ ಅನೇಕ ಪೋರ್ಟ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
- ಗ್ಯಾಲಕ್ಸಿ ಬುಕ್2 ಪ್ರೋ 360 ಲ್ಯಾಪ್‌ಟಾಪ್ 1,23,800 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದರ ಇಂಟೆಲ್ ರೂಪಾಂತರವನ್ನು ಭಾರತದಲ್ಲಿ 1,15,990 ರೂ. ಆರಂಭಿಕ ಬೆಲೆಗೆ ಬಿಡುಗಡೆ ಮಾಡಲಾಗಿದೆ. ಇನ್ನು ಹೆಚ್ಚುವರಿ ಬೆಲೆಗೆ, ಬಳಕೆದಾರರು ಅಂತರ್ನಿರ್ಮಿತ 5G ಮತ್ತು Wi-Fi 6E ಬೆಂಬಲದೊಂದಿಗೆ ಉತ್ತಮ ಸಂಪರ್ಕವನ್ನು ಪಡೆದುಕೊಳ್ಳಬಹುದಾಗಿದೆ.