ಬಿಜೆಪಿ ಸೇರ್ತಾರಾ ಸುಮಲತಾ ಅಂಬರೀಷ್! ಮಂಡ್ಯದಲ್ಲಿ ಬಿಜೆಪಿ ಹಾಕ್ತಾರಾ ಭದ್ರ ಬುನಾದಿ?

ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ಶುರುವಾದಾಗಿಂದ ಒಬ್ಬರಾದ ಮೇಲೆ ಒಬ್ಬರಂತೆ ರಾಷ್ಟ್ರ ನಾಯಕರುಗಳು ರಾಜ್ಯಕ್ಕೆ ಆಗಮಿಸಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ.

ಇಂದು ಕೂಡ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಲ ನಾಯಕರಾದ ಅಮಿತ್ ಶಾ ಇವರು ಹಳೇ ಮೈಸೂರು ಭಾಗವಾದ ಮಂಡ್ಯಕ್ಕೆ ಆಗಮಿಸಿ ಭರ್ಜರಿಯಾದ ಪ್ರಚಾರ ಕೈಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರುವ ಸುಳಿವನ್ನು ನೀಡಿದ್ದಾರೆ.ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿಯಾದ ಗೆಲುವನ್ನು ಸಾಧಿಸಿದ್ದ ಸುಮಲತಾ ಇವರು ಇಂದಿಗೂ ಕೂಡ ಪಕ್ಷೇತರ ಅಭ್ಯರ್ಥಿಯಾಗಿಯೇ ಉಳಿದಿದ್ದರು. ಆದರೆ ಇಂದು ಸಕ್ಕರೆ ನಾಡಿಗೆ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದೆಲ್ಲೆಡೆ ಅವರಿಗೆ ಸ್ವಾಗತ ಕೋರಿ ಹಾಕಿರುವ ಫ್ಲೆಕ್ಸ್ ಗಳಲ್ಲಿ ಸುಮಲತಾ ಅವರ ಫೋಟೋ ಇರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸುಮಲತಾ ಅವರು ಬಿಜೆಪಿ ಸೇರುತ್ತಾರೆ ಎಂಬುದಕ್ಕೆ ಇದು ಪುಷ್ಟಿ ನೀಡಿದೆಇತ್ತೀಚೆಗೆ ಕೆಲವು ದಿನಗಳ ಹಿಂದೆ ಸುಮಲತಾ ಅವರ ಕೆಲವು ಆಪ್ತರು, ಕಾರ್ಯಕರ್ತರು ಬೆಜೆಪಿಗೆ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಸುಮಲತಾ ಅವರನ್ನು ನೀವು ಬಿಜೆಪಿ ಸೇರುತ್ತೀರಾ ಎಂದದಕ್ಕೆ ಎಲ್ಲವೂ ಕಾರ್ಯಕರ್ತರು, ಜನರ ಮೇಲೆ ನಿರ್ಧಾರ ಆಗುತ್ತದೆ ಎಂದಿದ್ದರೇ ಹೊರತು ಸೇರುವುದಿಲ್ಲ ಎಂದು ಹೇಳಿರಲಿಲ್ಲ. ಆದರೆ ಈ ವಿಚಾರ ಇದೀಗ ಮುನ್ನಲೆಗೆ ಬಂದಿದೆ.ಒಂದು ವೇಳೆ ಸುಮಲತಾ ಏನಾದರೂ ಬಿಜೆಪಿ ಸೇರ್ಪಡೆಯಾದರೆ ಹಳೆಯ ಮೈಸೂರು ಭಾಗದಲ್ಲಿ ಮುಖ್ಯವಾಗಿ ಮಂಡ್ಯ ಪ್ರದೇಶದಲ್ಲಿ ಬಿಜೆಪಿಗೆ ತುಂಬಾನೇ ಲಾಭವಾಗಲಿದೆ. ಯಾಕೆಂದರೆ ಮಂಡ್ಯ ಜೆಡಿಎಸ್ ನ ಭದ್ರಕೋಟೆಯಂತಿದೆ. ಆದರೆ ಸುಮಲತಾ ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಯಾಕೆಂದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಜೆಡಿಎಸ್ ಅಭ್ಯರ್ಥಿಯನ್ನೇ ಸೋಲಿಸಿ ಗೆದ್ದಿದ್ದರು. ಹೀಗಾಗಿ ಸುಮಲತಾ ಸೇರ್ಪಡೆಯಿಂದ ಬಿಜೆಪಿ ಮಂಡ್ಯದಲ್ಲಿ ಭದ್ರವಾಗಿ ನೆಲೆಯೂರಲು ಸಹಕಾರಿಯಾಗುತ್ತದೆ.ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದು ಸುಮಲತಾ ಬಿಜೆಪಿ ಸೇರುವುದು ಅವರ ವೈಯಕ್ತಿಕ ವಿಚಾರವಾಗಿದೆ. ಇದರ ಬಗ್ಗೆ ನಮ್ಮ ಬಳಿ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಪಕ್ಷಕೆ ಅವರು ಬರುವುದಾದರೆ ಸ್ವಾಗತ ಬಯಸುತ್ತೇನೆ ಎಂದಿದ್ದಾರೆ.

Leave A Reply

Your email address will not be published.