PAN Card: ನಿಮ್ಮ ಪ್ಯಾನ್​ ಕಾರ್ಡ್ ಅಮಾನ್ಯವಾಗಿದೆಯೇ ಎಂದು ಈ ರೀತಿ ಚೆಕ್​ ಮಾಡಿ!

ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆ ಕೊಡುವ ಪ್ಯಾನ್ ಕಾರ್ಡ್ ನಂಬರ್ ಒಂದು ಶಾಶ್ವತ ಖಾತೆ ಸಂಖ್ಯೆ ಆಗಿದ್ದು, ಭಾರತದ ಪ್ರತಿಯೊಬ್ಬ ನಾಗರಿಕನೂ ಆದಾಯ ತೆರಿಗೆ ಕಟ್ಟುವ ಸಂದರ್ಭದಲ್ಲಿ ಹಾಗೂ ಹಣಕಾಸು ವ್ಯವಹಾರ ನಿರ್ವಹಿಸುವಾಗ ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಕೇವಲ ಆದಾಯ ತೆರಿಗೆ ಪಾವತಿಗೆ ಮಾತ್ರವಲ್ಲದೇ ಹೆಚ್ಚಿನ ಸಂದರ್ಭಗಳಲ್ಲಿ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

 

ನೀವು ಕೂಡ ಪಾನ್ ಕಾರ್ಡ್ ಹೊಂದಿದ್ದೀರಾ? ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬಳಕೆ ಮಾಡುತ್ತಿರುವಿರಾ?? ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಿರಲೇಬೇಕು. ಕೆಲವು ಪ್ಯಾನ್ ಕಾರ್ಡ್‌ಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂಬ ವಿಚಾರ ನಿಮಗೆ ತಿಳಿದಿದೆಯೇ?

ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ತಮ್ಮ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಅನೇಕ ಬಾರಿ ಎಚ್ಚರಿಕೆ ನೀಡಿದೆ. ಅಷ್ಟೆ ಅಲ್ಲದೆ, ಹಲವು ಬಾರಿ ಗಡುವನ್ನು ಕೂಡ ವಿಸ್ತರಣೆ ಮಾಡಲಾಗಿದೆ.ಮಾರ್ಚ್ 31, 2022 ಅಂತಿಮ ಗಡುವು ನೀಡಲಾಗಿತ್ತು. ಆ ಬಳಿಕ ಕೂಡ ಆದಾಯ ತೆರಿಗೆ ಇಲಾಖೆ ರೂ.500 ದಂಡ ಪಾವತಿಸಿ ಪ್ಯಾನ್-ಆಧಾರ್ ಲಿಂಕ್ ಮಾಡಲು ಅವಕಾಶ ನೀಡಿದ್ದು, ಈ ಗಡುವು ಕೂಡ ಜೂನ್ 30ಕ್ಕೆ ಕೊನೆಗೊಂಡಿದೆ.

ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಲಾಗಿದೆ. ಹೌದು!!.. ಕೆಲವು ಪ್ಯಾನ್ ಕಾರ್ಡ್‌ಗಳು ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ. ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್ ಅಮಾನ್ಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಪ್ಯಾನ್-ಆಧಾರ್ ಲಿಂಕ್ ಅನ್ನು ಮಾರ್ಚ್ 31, 2023 ರೊಳಗೆ ಮಾಡಬೇಕಾಗಿದ್ದು, ಅದರ ಬಳಿಕ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದೆ ಇರುವಂತಹ ಪ್ಯಾನ್ ಕಾರ್ಡ್‌ಗಳು ಅಮಾನ್ಯವಾಗುತ್ತವೆ ಎನ್ನಲಾಗಿದೆ. ಹಾಗಾಗಿ, ನೀವು ಈಗ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಇಚ್ಛಿಸಿದರೆ 1,000ರೂ. ದಂಡವನ್ನು ಪಾವತಿಸಬೇಕಾಗುತ್ತದೆ.

ಪ್ರಸ್ತುತ ರೂ.1,000 ದಂಡವನ್ನು ಪಾವತಿಸಬೇಕು ಜೊತೆಗೆ ಪ್ಯಾನ್-ಆಧಾರ್ ಲಿಂಕ್ ಮಾಡಬೇಕಾಗಿದೆ. ಈ ಅವಧಿಯು 31 ಮಾರ್ಚ್ 2023 ರಂದು ಕೊನೆಗೊಳ್ಳಲಿದ್ದು, ಆ ಬಳಿಕ ಆಧಾರ್‌ಗೆ ಲಿಂಕ್ ಮಾಡದ ಎಲ್ಲಾ ಪ್ಯಾನ್ ಕಾರ್ಡ್‌ಗಳು ಪ್ಲಾಸ್ಟಿಕ್ ಕಾರ್ಡ್‌ಗಳಾಗಿ ಉಳಿಯುತ್ತವೆ ಅಲ್ಲದೆ ಅವುಗಳಿಗೆ ಯಾವುದೇ ಮೌಲ್ಯವಿರುವುದಿಲ್ಲ ಎಂಬುದನ್ನು ಗಮನಿಸಬೇಕು.

ಆದಾಯ ತೆರಿಗೆ ಕಾಯ್ದೆ-1961 ರ ಪ್ರಕಾರ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳಿಗೆ ಲಿಂಕ್ ಮಾಡಲು ಮಾರ್ಚ್ 31, 2023 ಕೊನೆಯ ದಿನಾಂಕವಾಗಿದ್ದು, ವಿನಾಯಿತಿ ಪಡೆದ ವರ್ಗಕ್ಕೆ ಸೇರದ ಎಲ್ಲರೂ ತಮ್ಮ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಬೇಕಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯ ಇಲ್ಲವೇ ಅಮಾನ್ಯವಾಗಲಿದ್ದು, ಹೀಗಾಗಿ, ವಿಳಂಬ ಮಾಡದೇ ತಕ್ಷಣವೇ ಪ್ಯಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

ಸದ್ಯ ರೂ.1,000 ದಂಡವನ್ನು ಪಾವತಿಸದೆ ಪ್ಯಾನ್-ಆಧಾರ್ ಅನ್ನು ಹೇಗೆ ಲಿಂಕ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ:
ಮೊದಲು onlineservices.tin.egov-nsdl.com/etaxnew/tdsnontds.jsp ವೆಬ್‌ಸೈಟ್ ತೆರೆಯಬೇಕು. ಚಲನ್ ಸಂಖ್ಯೆ./ITNS 280 ಅನ್ನು ಕ್ಲಿಕ್ ಮಾಡಬೇಕು ಬಳಿಕ ಮುಂದುವರೆಯಿರಿ ಕ್ಲಿಕ್ ಮಾಡಬೇಕು. ಆ ಬಳಿಕ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ಮತ್ತು ವ್ಯಕ್ತಿಗಳಿಗೆ ಆದಾಯ ತೆರಿಗೆಯನ್ನು ಆಯ್ಕೆಮಾಡಬೇಕು. ಪಾವತಿ ಪ್ರಕಾರದ ವಿಭಾಗದಲ್ಲಿ ಇತರೆ ರಶೀದಿಗಳ ಮೇಲೆ ಕ್ಲಿಕ್ ಮಾಡಿಕೊಂಡು ಪ್ಯಾನ್ ಕಾರ್ಡ್ ವಿವರಗಳನ್ನು ಆಯ್ಕೆ ಮಾಡಬೇಕು.

ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿಕೊಂಡು ಬಳಿಕ ವಿಳಾಸವನ್ನು ಪೂರ್ಣಗೊಳಿಸಬೇಕು. ನಂತರ ಪಾವತಿಯನ್ನು ಪೂರ್ಣಗೊಳಿಸಬೇಕು. ಪಾವತಿ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ, ನೀವು ಪಾವತಿಸಿದ ದಂಡದ ವಿವರಗಳನ್ನು 4 ರಿಂದ 5 ಕೆಲಸದ ದಿನಗಳಲ್ಲಿ ಆದಾಯ ತೆರಿಗೆ ಇಲಾಖೆಯ ದಾಖಲೆಗಳಲ್ಲಿ ನವೀಕರಿಸಲಾಗುತ್ತದೆ. ಅದರ ನಂತರ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಬೇಕು.

ಈ ಪ್ರಕ್ರಿಯೆಯನ್ನು ಹೇಗೆ ಮಾಡಬೇಕು??
ಮೊದಲು ಮುಖಪುಟ ತೆರೆದು ಬಳಿಕ ಮುಖಪುಟದಲ್ಲಿ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು. ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಮೌಲ್ಯೀಕರಿಸು ಕ್ಲಿಕ್ ಮಾಡಬೇಕು. ನಿಮ್ಮ ಪಾವತಿ ವಿವರಗಳನ್ನು ಪರಿಶೀಲಿಸಲಾಗಿದೆ ಎಂಬ ಸಂದೇಶವು ಕಂಡುಬರುತ್ತದೆ. ಬಳಿಕ ಮುಂದುವರಿಸಿ ಕ್ಲಿಕ್ ಮಾಡಬೇಕು. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರನ್ನು ನಮೂದಿಸಿಕೊಂಡು , ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನೀವು OTP ಪಡೆಯಿರಿ. ನೀವು OTP ಅನ್ನು ನಮೂದಿಸಿ ಮತ್ತು ಮೌಲ್ಯೀಕರಿಸಿದರೆ, ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲಾಗುತ್ತದೆ.

ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿದ್ದು, ಹೀಗಾಗಿ ಮೇಲೆ ತಿಳಿಸಿದ ಮಾಹಿತಿಯನ್ನು ಆಧರಿಸಿ ಆಧಾರ್ ಸಂಖ್ಯೆಯನ್ನು ಪ್ಯಾನ್ ಕಾರ್ಡ್‌ಗಳಿಗೆ ಲಿಂಕ್ ಮಾಡಬಹುದು.

Leave A Reply

Your email address will not be published.