Viral News: ಪ್ರೀತಿಸಿ ಮದುವೆಯಾದ ಗಂಡ | ಮೊದಲ ರಾತ್ರಿ ಹೆಂಡತಿಯಿಂದ ಬಂತು ಶಾಕಿಂಗ್ ನ್ಯೂಸ್
ಪ್ರೀತಿ ಕುರುಡು ಎಂಬ ಮಾತಿನಂತೆ.. ಜಾತಿಯ ಗಡಿರೇಖೆಯನ್ನು ದಾಟಿ, ಅದೆಷ್ಟೊ ಮಂದಿ ಪ್ರೀತಿಸಿ ಮದುವೆಯಾದ ಪ್ರಕರಣಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಮದುವೆ ಎಂಬ ಸುಮಧುರ ಬಾಂಧವ್ಯಕ್ಕೆ ಜಾತಿ ಎಂಬ ಚೌಕಟ್ಟು ಅಡ್ಡಿಯಾದ ನಿದರ್ಶನ ಕೂಡ ಇವೆ. ಪ್ರೀತಿ ಪ್ರೇಮ.. ಎಂದು ಪ್ರೇಮದ ಬಲೆಯಲ್ಲಿ ಬಿದ್ದು ಮನೆಯವರ ವಿರೋಧದ ನಡುವೆಯೆ ವಿವಾಹವಾಗಿ ಮನೆಯವರಿಂದಲೇ ಸಾವಿನ ಕದ ತಟ್ಟಿದ ಪ್ರಕರಣ ಕೂಡ ಇದೆ.
ಮದುವೆ ಎಂಬ ಸುಂದರ ಬೆಸುಗೆಗೆ ಮುನ್ನುಡಿ ಬರೆಯುವಾಗ ನೂರಾರು ಕನಸುಗಳ ಜೊತೆಗೆ ಬೆಸೆದುಕೊಂಡು ಹಸೆಮಣೆ ಏರುವ ಜೋಡಿಗೆ ಮದುವೆ ಜೀವನದ ಮುಖ್ಯ ಘಟ್ಟವಾಗಿ ಪರಿಣಮಿಸುತ್ತದೆ. ಅದರಲ್ಲೂ ಕೂಡ ಪ್ರೀತಿಸಿ ಮದುವೆ ಆಗುವುದಾದರೆ ಅದರ ಸಂಭ್ರಮವೇ ಬೇರೆ. ಏಕೆಂದರೆ ಈ ಸೌಭಾಗ್ಯ ಎಲ್ಲರಿಗೂ ಕೂಡಿ ಬರದು.
ಇಂತಹದೊಂದು ಘಟನೆ ಇದೀಗ ಹರಿದ್ವಾರದಿಂದ ಬೆಳಕಿಗೆ ಬಂದಿದೆ. ಮದುವೆಯಾದ ಬಳಿಕ ಒಂದಿಲ್ಲೊಂದು ವಿಚಾರಕ್ಕೆ ತಗಾದೆ ತೆಗೆಯೋದು ಸಾಮಾನ್ಯ. ಪ್ರೇಮವಿವಾಹದ ಬಳಿಕ ಪತಿ-ಪತ್ನಿ ಜಗಳದ ಜೊತೆಗೆ ವಿವಾಹೇತರ ಸಂಬಂಧ ಇನ್ನಿತರ ಕಾರಣಗಳಿಂದ ದಾಂಪತ್ಯ ಮುರಿದು ಬೀಳೋದು ನಾವು ನೋಡಿರುತ್ತೇವೆ. ಇದೆ ರೀತಿಯ ಬೆಳಕಿಗೆ ಬಂದಿದೆ.
ಮದುವೆಯಾದ ಬಳಿಕ ಅದೆಷ್ಟೋ ಘಟನೆಗಳು ಗಂಡ ಹೆಂಡತಿಯರ ನಡುವೆ ಮನಸ್ತಾಪವಾಗಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ದರ್ಗಾಪುರದ ಸುಖಲಾಲ್ ಎಂಬ 30 ವರ್ಷದ ಯುವಕ ಹರಿಯಾಣದ ಯುವತಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹ ಬೆಳೆದು ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಪ್ರೀತಿಯ ಸಾಕ್ಷಿಯಾಗಿ ಮದುವೆಯಾಗಲು ತೀರ್ಮಾನ ಮಾಡಿದ್ದಾರೆ. ಇವರಿಬ್ಬರೂ ಮನೆಯವರ ಅನುಮತಿ ಪಡೆದ ಲಕ್ಸಾರ್ನ ರಾಧಾಕೃಷ್ಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.
ಮದುವೆಯ ಮೊದಲ ರಾತ್ರಿಯೇ ಯುವಕನಿಗೆ ತನ್ನ ಪತ್ನಿ ತೃತೀಯಲಿಂಗಿ ಎಂಬ ವಿಚಾರ ತಿಳಿದು ಬಂದಿದ್ದು, ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾಳೆ ಎಂಬ ವಿಚಾರ ತಿಳಿದು ಆಘಾತವಾಗಿದೆ. ತನ್ನ ಹೆಂಡತಿಯ ಸತ್ಯವನ್ನು ತಿಳಿದುಕೊಂಡಾಗ ಅವನು ಆಘಾತಕ್ಕೊಳಗಾಗಿದ್ದಾನೆ. ಈ ಬಳಿಕ ಇಬ್ಬರ ನಡುವೆ ಜಗಳ ನಡೆದಿದ್ದು, ಆ ಬಳಿಕ ಪತ್ನಿ ಹಿಸಾರ್ನಲ್ಲಿರುವ ತನ್ನ ಮನೆಗೆ ಮರಳಿದ್ದಾಳೆ.
ಹರಿದ್ವಾರದ ಲಕ್ಸಾರ್ನಲ್ಲಿ ಪತಿ ತನ್ನ ಹೆಂಡತಿಯ ಲಿಂಗದ ಬಗ್ಗೆ ತಿಳಿದ ಬಳಿಕ, ಅವರು ಪೊಲೀಸ್ ಠಾಣೆಗೆ ಧಾವಿಸಿ ದೂರು ದಾಖಲಿಸಿದ್ದಾರೆ. ಆತ ಮದುವೆಯಾಗಿ ಮನೆಗೆ ಕರೆತಂದಿದ್ದ ಯುವತಿ ತೃತೀಯಲಿಂಗಿ ಎಂಬ ವಿಚಾರ ತಿಳಿದು ಬಂದಿದೆ.
ವಿಚ್ಛೇದನಕ್ಕೆ ಪ್ರತಿಯಾಗಿ ಆರುಷಿ ಕುಟುಂಬದವರು ದೊಡ್ಡ ಮೊತ್ತದ ಹಣದ ಬೇಡಿಕೆ ಇಡಲಾಗಿದೆ ಎಂದು ಯುವಕ ಆರೋಪ ಮಾಡಿದ್ದಾರೆ. ಲಕ್ಸಾರ್ನಲ್ಲಿ ದೂರು ದಾಖಲಿಸುವಾಗ, ಯುವಕನು ತನ್ನ ಹೆಂಡತಿ ಆರುಷಿಯ ಹೆಸರು ಮೊದಲು ಆಶು ಮತ್ತು ಅವಳು ಹುಡುಗನಿಂದ ಹುಡುಗಿಯಾಗಿ ಬದಲಾಗಿದ್ದಾಳೆ ಎಂದು ತಿಳಿದು ಬಂದಿದೆ.
ಯುವಕನ ದೂರಿನ ಮೇರೆಗೆ ಆರುಷಿ ಮತ್ತು ಆಕೆಯ ಕುಟುಂಬದ ವಿರುದ್ಧ ಲಕ್ಸಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ವಂಚನೆ ವಿಭಾಗದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊತ್ವಾಲಿ ಪ್ರಭಾರಿ ಇನ್ಸ್ಪೆಕ್ಟರ್ ಅಮರ್ಜಿತ್ ಸಿಂಗ್ ತಿಳಿಸಿದ್ದು, ಸದ್ಯ ಆ ಪ್ರಕರಣದ ತನಿಖೆ ನಡೆಯುತ್ತಿದೆ.