ಎರಡು ವರ್ಷದ ಪುಟ್ಟ ಕಂದನ ಮೇಲೆ ಬಿದ್ದ ತೆಂಗಿನಕಾಯಿ | ಪವಾಡದ ರೀತಿಯಲ್ಲಿ ಬದುಕಿದ ಮಗು, ಹೇಗೆ?

ಈ ಜಗವೇ ಒಂದು ವಿಸ್ಮಯ ನಗರಿ.. ಇಲ್ಲಿ ನಡೆಯುವ ಪವಾಡಗಳು ಕೆಲವೊಮ್ಮೆ ನಮ್ಮನ್ನು ಅಚ್ಚರಿಗೆ ತಳ್ಳುತ್ತವೆ. ನಸೀಬು ಚೆನ್ನಾಗಿದ್ದರೆ ಎಂತಹ ದೊಡ್ಡ ಅವಾಂತರ ಆದರೂ ಕೂಡ ಪಾರಾಗಬಹುದು ಎಂಬುದನ್ನು ರುಜುವಾತು ಮಾಡುವ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಎಷ್ಟೋ ಬಾರಿ ಸಾವಿನ ದವಡೆಯ ಸಮೀಪದಲ್ಲಿ ಇದ್ದರೂ ಕೂಡ ಅಚ್ಚರಿಯ ರೂಪದಲ್ಲಿ ಜವರಾಯನನ್ನು ಕೂಡ ಹಿಮ್ಮೆಟ್ಟಿಸಿದ ಪ್ರಕರಣಗಳ ಬಗ್ಗೆ ನಾವು ಕೇಳಿರುತ್ತೇವೆ. ಇದೇ ರೀತಿಯ ಘಟನೆ (Incident) ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದಮನೆಯಂಗಳದಲ್ಲಿ ಆಡುತ್ತಿದ್ದ (Playing) ಮಗುವಿನ ತಲೆ 20 ಅಡಿ ಎತ್ತರದಿಂದ ತೆಂಗಿನ (Coconut) ಕಾಯಿ ಬಿದ್ದರು ಕೂಡ ಮಗು ಪ್ರಾಣಾಪಾಯದಿಂದ ಪಾರಾದ ರೋಚಕ ಘಟನೆ ವರದಿಯಾಗಿದೆ.

ಮನೆಯ ಅಂಗಳದಲ್ಲಿ ಎರಡು ವರ್ಷದ ಮಗುವೊಂದು ತನ್ನ ಪಾಡಿಗೆ ತಾನು ಆಟವಾಡುತ್ತಿದ್ದ ಸಂದರ್ಭದಲ್ಲಿ 20 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಮರದ ಬುಡದಲ್ಲಿ ಆಡುತ್ತಿದ್ದ ಪುಟ್ಟ ಕಂದಮ್ಮನ ತಲೆಯ ಮೇಲೆ ತೆಂಗಿನಕಾಯಿ ಬಿದ್ದ ಘಟನೆ ನಡೆದಿದೆ. ಆದರೆ ಬಿದ್ದ ತಕ್ಷಣ ಮಗು ನೆಲಕ್ಕೆ ಕುಸಿದು ಬಿದ್ದಿದ್ದು, ಆ ಮಗುವಿನ ಪಕ್ಕದಲ್ಲಿ ಇನ್ನೂ ಇಬ್ಬರು ಪುಟ್ಟ ಮಕ್ಕಳೇ ಇದ್ದರು ಎನ್ನಲಾಗಿದೆ. ಆಟವಾಡುವ ಸಂದರ್ಭ ದೊಡ್ಡವರು ಯಾರು ಕೂಡ ಅಲ್ಲಿ ಇರದ ಕಾರಣ ಮುಂದೇನು ಮಾಡಬೇಕೆಂದು ತೋಚದೇ ಮಕ್ಕಳಿಬ್ಬರು ಗಾಬರಿಗೊಂಡಿದ್ದಾರೆ.

ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಕಂದಮ್ಮ ಪಾರಾಗಿದ್ದು, ತಕ್ಷಣ ಅಲ್ಲೇ ಇದ್ದ ಇನ್ನೊಬ್ಬ ಪುಟ್ಟ ಬಾಲಕಿ ಗಾಬರಿಗೊಂಡು ಅಕ್ಕ ಪಕ್ಕದ ಮನೆಯವರನ್ನು ಕೂಗಿ ಕರೆದಿದ್ದಾಳೆ ಎನ್ನಲಾಗಿದೆ.

ಬಾಲಕಿಯ ಕೂಗು ಕೇಳಿ ತಲೆಯ ಮೇಲೆ ತೆಂಗಿನ ಕಾಯಿ ಬಿದ್ದ ಮಗುವಿನ ಪಾಲಕರು ಮನೆಯಿಂದ ಹೊರಬಂದಿದ್ದು, ಪೋಷಕರು ಆಗಮಿಸಿದಾಗ ಮಗು ದಾರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ಗಮನಿಸಿದಾಗ ಅಲ್ಲಿ ನಡೆದ ಘಟನೆಯನ್ನು ಇನ್ನೊಬ್ಬ ಪುಟ್ಟ ಬಾಲಕಿ ಬಿದ್ದ ಮಗುವಿನ ಪೋಷಕರಿಗೆ ಹೇಳಿದ್ದು , ವಿಚಾರ ತಿಳಿದ ಕೂಡಲೇ ಪಾಲಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಗುವಿನ ತಲೆಗೆ ಗಂಭೀರ ಏಟಾಗಿದ್ದು ಮಗುವಿನ ದೇಹದ ಒಂದು ಭಾಗದ ಸ್ವಾಧೀನವೇ ಇಲ್ಲದಂತಾಗಿತ್ತು. ಮಗು ತನ್ನ ಕೈ ಕಾಲುಗಳನ್ನು ಕೂಡ ಅಲುಗಾಡಿಸಲು ಆಗುತ್ತಿರಲಿಲ್ಲತಕ್ಷಣ ಮಗುವನ್ನು ಮಣಿಪಾಲ ಆಸ್ಪತ್ರೆಯ ನಿರಂತರ ಪರಿಶ್ರಮದ ಫಲವಾಗಿ ಯಶಸ್ವಿ ಚಿಕಿತ್ಸೆ ನಡೆಸಿ ಸರಿಪಡಿಸಲಾಗಿದೆ ಎನ್ನಲಾಗಿದೆ. 48 ಗಂಟೆಗಳ ಕಾಲ ಆಪರೇಷನ್ ಮಾಡಿ ಬದುಕಿ ಬಂದಿದ್ದು ಪವಾಡವೆಂದು ಹೇಳಲಾಗುತ್ತಿದೆ. ವೈದ್ಯರ ಪ್ರಯತ್ನದಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ತಮ್ಮ ಮಗು ಬದುಕುಳಿಯುವುದು ಕಷ್ಟ ಸಾಧ್ಯ ಎಂದು ಅಂದುಕೊಂಡಿದ್ದ ಪಾಲಕರಿಗೆ ವೈದ್ಯರು ದೇವರಂತೆ ನೆರವಾಗಿದ್ದು, ಯಮನಿಗೆ ಸೆಡ್ಡು ಹೊಡೆದು ಬದುಕಿ ಉಳಿದಿದ್ದು ಪೋಷಕರ ಪಾಲಿಗೆ ವರದಾನ ದಂತೆ ಪರಿಣಮಿಸಿದೆ. ಮಗುವನ್ನು ಸರ್ಜಾಪುರದ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿ ,ತಕ್ಷಣವೆ ಚಿಕಿತ್ಸೆ ನೀಡಿದ ಪರಿಣಾಮ ಪುಟ್ಟ ಕಂದಮ್ಮನ ಜೀವ ಉಳಿದಿದೆ ಎನ್ನಲಾಗಿದ್ದು, ಸದ್ಯ ಮಗು ಚಿಕಿತ್ಸೆ ದೊರೆತು ಪ್ರಾಣಾಪಾಯದಿಂದ ಪಾರಾಗಿ ಆರೋಗ್ಯವಾಗಿದೆ.

Leave A Reply

Your email address will not be published.