ಸುಳ್ಯ : ಕಾಲೇಜು ವಿದ್ಯಾರ್ಥಿನಿ ಮೇಲೆ ರ‌್ಯಾಗಿಂಗ್ ಪ್ರಕರಣ| ಸ್ಪಷ್ಟನೆ ನೀಡಿದ ಪ್ರಾಂಶುಪಾಲೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುಳ್ಯದ ಕೆವಿಜೆ ಡೆಂಟಲ್ ಕಾಲೇಜ್‌ನಲ್ಲಿ ಡೆಂಟಲ್ ವಿದ್ಯಾರ್ಥಿನಿಗೆ (Dental Student) ರ‍್ಯಾಗಿಂಗ್ ಮಾಡಿರುವ ಘಟನೆ ಡಿಸೆಂಬರ್ 21 ರಂದು ರಾಗಿಂಗ್ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಕಾಲೇಜು ಪ್ರಾಂಶುಪಾಲೆಯವರು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಸುಳ್ಯದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ರ‍್ಯಾಗಿಂಗ್ ಘಟನೆಯ ಬಗ್ಗೆ ಕಾಲೇಜು ಪ್ರಾಂಶುಪಾಲರಾಗಿರುವ ಡಾ.ಮೋಕ್ಷಾ ನಾಯಕ್ ಈ ಕುರಿತು ಕೆಲ ಸುದ್ಧಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪ್ರಾಂಶುಪಾಲರಾಗಿರುವ ಡಾ.ಮೋಕ್ಷಾ ನಾಯಕ್ ಪ್ರತಿಕ್ರಿಯೆ ನೀಡಿದ್ದು, ಕಾಲೇಜಿನ ವಿದ್ಯಾರ್ಥಿನಿಯಾದ ಡಾ.ಪಲ್ಲವಿಯವರು ಬೆಂಗಳೂರು ಮೂಲದವರಾಗಿದ್ದು, ನಮ್ಮ ಕಾಲೇಜು ಕ್ಯಾಂಪಸ್ ಹೊರಗಡೆ ಹಲ್ಲೆಯಾಗಿರುವ ವಿಚಾರ ಅರಿವಿಗೆ ಬಂದಿದೆ. ಈ ವಿಷಯವನ್ನು ಖುದ್ದಾಗಿ ವಿದ್ಯಾರ್ಥಿನಿಯೇ ತಮ್ಮ ಗಮನಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದ್ದು, ಹೀಗಾಗಿ ಕಾಲೇಜಿನ 6 ಪ್ರಾದ್ಯಾಪಕರ ತಂಡವನ್ನು ರಚನೆ ಮಾಡಿ ತನಿಖೆ ಪ್ರಾರಂಭ ಮಾಡಲಾಗಿದೆ.
ಹಲ್ಲೆ ಘಟನೆ ನಡೆದ ಬಳಿಕ ವಿದ್ಯಾರ್ಥಿನಿ ಡಾ.ಪಲ್ಲವಿ ಡಿಸೆಂಬರ್ 27 ರಂದು ಕಾಲೇಜಿಗೆ ಬಂದಿದ್ದು, ಹಾಸ್ಟೆಲ್ ನಿಂದ ತಮ್ಮ ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ. ಡಾ. ವೈಶಾಖ್ ಪಣಿಕರ್ ಮತ್ತು ಡಾ. ಹನೀಶ್ ಕಿರಣ್ ಆರೋಪಿ ಸ್ಥಾನದಲ್ಲಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತ ಪೋಟೋಗ್ರಫಿಯನ್ನೂ ಸಮಿತಿ ಮುಂದೆ ಅವರು ಸಲ್ಲಿಸಿರುವ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಘಟನೆಗೆ ಸಂಬಂಧಿಸಿದಂತೆ ಡಾ.ಪಲ್ಲವಿ, ಡಾ. ವೈಶಾಖ್ ಪಣಿಕರ್ ಮತ್ತು ಡಾ.ಹನೀಶ್ ಕಿರಣ್ ಅವರನ್ನು ಒಂದು ವಾರಗಳವರೆಗೆ ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.