PM Kisan: ಪ್ರಧಾನಿ ಮೋದಿ ಯಿಂದ ಮಹತ್ವದ ಘೋಷಣೆ | ದೇಶದ 12 ಕೋಟಿ ರೈತ ಬಾಂಧವರಿಗೆ ಗುಡ್‌ ನ್ಯೂಸ್‌

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ ರೈತರು ಎದುರು ನೋಡುತ್ತಿದ್ದಾರೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.ದೇಶದ ಕೋಟ್ಯಂತರ ರೈತರಿಗೆ ಸಿಹಿ ಸುದ್ದಿಯೊಂದು ಪ್ರಕಟವಾಗಿದೆ. ಹೊಸ ವರ್ಷದಲ್ಲಿ 12 ಕೋಟಿ ರೈತರಿಗೆ ಪ್ರಧಾನಿ ಮೋದಿ ದೊಡ್ಡ ಉಡುಗೊರೆ ನೀಡಲಿದ್ದಾರೆ.

ಈಗಾಗಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, 12ನೇ ಕಂತಿನ 2000 ರೂಪಾಯಿಯಂತೆ ಒಟ್ಟು 16,000 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ದೇಶದ 12 ಕೋಟಿ ರೈತ ಬಾಂಧವರಿಗೆ ಹೊಸ ವರ್ಷದ ಉಡುಗೊರೆ ನೀಡುವ ಸಾಧ್ಯತೆ ದಟ್ಟವಾಗಿದ್ದು, ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13 ನೇ ಕಂತಿಗಾಗಿ ಜನರು ಎದುರು ನೋಡುತ್ತಿದ್ದು, ಈ ಕುರಿತಾಗಿ ಪ್ರಧಾನಿ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಇಲ್ಲಿಯವರೆಗೆ 8.42 ಕೋಟಿಗೂ ಹೆಚ್ಚು ರೈತರು 12 ಕಂತುಗಳ ಲಾಭವನ್ನು ಪಡೆದುಕೊಂಡಿದ್ದಾರೆ. ಸದ್ಯ, ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಸರ್ಕಾರದ ಈ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ.

ಪ್ರಧಾನಿ ಮೋದಿ, 13ನೇ ಕಂತಿನ ಹಣ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದ್ದು ಹೊಸ ವರ್ಷದ ಸಂಭ್ರಮ ದ ನಡುವೆ ಜನವರಿ ತಿಂಗಳಿನಲ್ಲಿಯೇ 13 ನೇ ಕಂತಿನ 2000 ರೂ.ಗಳನ್ನು ಕೋಟ್ಯಾಂತರ ರೈತರ ಖಾತೆಗಳಿಗೆ ವರ್ಗಾಯಿಸಲಾಗುವ ಕುರಿತು ಮಾಹಿತಿ ನೀಡಿದ್ದಾರೆ.ಇದುವರೆಗೆ ಈ ಯೋಜನೆಯ ಸುಮಾರು 12 ಕಂತುಗಳು ರೈತರ ಖಾತೆಗೆ ವರ್ಗಾವಣೆಯಾಗಿವೆ ಎಂಬುದನ್ನು ಗಮನಿಸಬೇಕು.

ನೀವು ಹಿಂದಿನ ಮಾದರಿಯನ್ನು ಗಮನಿಸಿದರೆ ಜನವರಿ 1, 2022 ರಂದು, ಪ್ರಧಾನಿ ಮೋದಿಯವರು ಮಧ್ಯಾಹ್ನ 12:30 ಕ್ಕೆ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದರು. ಕಳೆದ ವರ್ಷ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಇದರ ಅಡಿಯಲ್ಲಿ ಸುಮಾರು 10 ಕೋಟಿ ರೈತರಿಗೆ 20,000 ಕೋಟಿ ರೂ. ಲಾಭವನ್ನು ಪಡೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಜನವರಿ 26 ರವರೆಗೆ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ನಿರೀಕ್ಷೆ ಇದೆ ಎಂಬ ಮಾಹಿತಿ ನೀಡಿದ್ದು, ಆದರೆ ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ ಜನವರಿ ತಿಂಗಳಲ್ಲಿ ರೈತರಿಗೆ ಈ ಹಣದ ಪ್ರಯೋಜನ ಲಭ್ಯವಾಗಲಿದೆ ಎಂದಿದ್ದಾರೆ.

Leave A Reply

Your email address will not be published.