LPG subsidy Hike : ಗ್ರಾಹಕರೇ ಗಮನಿಸಿ | ಎಲ್ ಪಿಜಿ ಸಬ್ಸಿಡಿ ಹಣದಲ್ಲಿ ಏರಿಕೆ

ದಿನಂಪ್ರತಿ ಪ್ರತಿ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಈ ನಡುವೆ ಜನತೆ ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ನಡುವೆ ಸಿಹಿ ಸುದ್ದಿಯೊಂದು ನಿಮಗಾಗಿ ಕಾದಿವೆ. ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ (LPG Subsidy Hike) ಬೆಲೆ ದಿನಂಪ್ರತಿ ಏರಿಕೆ ಕಂಡು ರಾಜ್ಯದ ಜನತೆ ಸಂಕಷ್ಟ ಎದುರಿಸುವಂತಾಗಿದೆ.

ದೈನಂದಿನ ದಿನ ಬಳಕೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಬಹು ಮುಖ್ಯ ಪಾತ್ರ ವಹಿಸುತ್ತವೆ. 2023 ರ ಬಜೆಟ್ ಮಧ್ಯಮ ವರ್ಗದ ಜನತೆಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿರೀಕ್ಷೆ ಇದ್ದು, ಈ ಬಜೆಟ್ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ತೆರಿಗೆ ಸ್ಲ್ಯಾಬ್‌ಗಳಿಗೆ ಅನೇಕ ಬದಲಾವಣೆ ತರುವ ನಿರೀಕ್ಷೆಯಿದೆ

ಕೆಲ ವರದಿಗಳ ಅನುಸಾರ, ಮುಂದಿನ ವರ್ಷದೊಳಗೆ ಎಲ್‌ಪಿಜಿ ವ್ಯಾಪ್ತಿಯನ್ನು ಶೇ 100 ಕ್ಕೆ ಹೆಚ್ಚಿಸುವ ಉದ್ದೇಶವಿದೆ ಎನ್ನಲಾಗಿದೆ. ವರದಿಯ ಅನುಸಾರ, ಹಣಕಾಸು ಸಚಿವಾಲಯವು ಈ ಯೋಜನೆಗೆ ಹಂಚಿಕೆಯನ್ನು ನೀಡಲಾಗುತ್ತದೆ. ದಿನಂಪ್ರತಿ ದೈನಂದಿನ ಪ್ರತಿ ವಸ್ತುಗಳ ಬೆಲೆ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ ಇದರಿಂದ ಪರಿಹಾರ ನೀಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ.

ಬಡತನ ರೇಖೆಗಿಂತ ಕೆಳಗಿರುವ ವರ್ಗಕ್ಕೆ ದೊಡ್ಡ ಪರಿಹಾರ ಸಿಗುವ ಸಾಧ್ಯತೆ ದಟ್ಟವಾಗಿದೆ. ರೂ.1,600 ಆರ್ಥಿಕ ನೆರವು ನೀಡಲಾಗುವ ಜೊತೆಗೆ ಯೋಜನೆ ಅಡಿಯಲ್ಲಿ, ಸರಕಾರವು ಗ್ಯಾಸ್ ಓವನ್ ಮತ್ತು ರೀಫಿಲ್‌ಗಳ ವೆಚ್ಚವನ್ನು ವಿಧಿಸುವುದಿಲ್ಲ ಎನ್ನಲಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅಡುಗೆ ಅನಿಲದ ಸಬ್ಸಿಡಿ ಮೊತ್ತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಮೇ 2021 ರಲ್ಲಿ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 12 ಅಡುಗೆ ಅನಿಲ ಸಿಲಿಂಡರ್‌ಗಳ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿದ್ದು, 9 ಕೋಟಿಗೂ ಹೆಚ್ಚಿನ ಜನತೆ ಇದರ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಉಜ್ವಲ ಯೋಜನೆಯಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳ ಸಬ್ಸಿಡಿಗೆ ಸಂಬಂಧಿಸಿದಂತೆ 200 ಸಬ್ಸಿಡಿಗಳನ್ನು ನೀಡಲಾಗುತ್ತದೆ.

Leave A Reply

Your email address will not be published.