ಡಿ. 31ರ ರಾತ್ರಿ 9 ಗಂಟೆಗೆ ನಗರದ 30 ಪ್ಲೈಓವರ್‌ಗಳು ಬಂದ್ : ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ಆದೇಶ
ಬೆಂಗಳೂರು : ನ್ಯೂಇಯರ್ ಆಚರಣೆಗೆ ಕೌಂಟ್‌ಡೌನ್ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಂಗ್ ಆಯಂಡ್ ಡೈವ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳ್ನು ಜಾರಿಗೆ ತರಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಂಗ್ ಆಯಂಡ್ ಡೈವ್ ನಿಯಂತ್ರಣಕ್ಕಾಗಿ ಡಿಸೆಂಬರ್ 31ರ ರಾತ್ರಿ 9 ಗಂಟೆಗೆ ನಗರದ 30 ಪ್ಲೈಓವರ್‌ಗಳು ಬಂದ್ ಆಗಲಿದೆ. ಏರ್ ಪೋರ್ಟ್ ಪ್ಲೈಓವರ್ ಮೇಲೆ ಬೈಕ್ ಸಂಚಾರಕ್ಕೆ ಅನುಮತಿ ಇಲ್ಲ ನೈಸ್ ರಸ್ತೆಯಲ್ಲೂ ರಾತ್ರಿ 9 ಗಂಟೆ ಬಳಿಕ ಬೈಕ್‌ಗಳ ಸಂಚಾರ ಬಂದ್ ಹೊಸ ವರ್ಷದಿನ ಮೆಟ್ರೋ , ಬಿಎಂಟಿಸಿ ಸಂಚಾರ ಇರಲಿದೆ. ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಕೋರಮಂಗಲ ಸೇರಿದಂತೆ ಜನರ ಸೇರುವ ಕಡೆ ಹೆಚ್ಚಿನಭದ್ರತೆ ನಿಯೋಜನೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ವಿಶೇಷ ಆಯುಕ್ತ ಸಲೀಂ ತಿಳಿಸಿದ್ದಾರೆ