ಕಪ್ಪು ಏಲಕ್ಕಿ ಸೇವಿಸೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಕಪ್ಪು ಏಲಕ್ಕಿ ಅಥವಾ ದೊಡ್ಡ ಏಲಕ್ಕಿಯನ್ನು ಮಸಾಲೆಗಳ ರಾಜ ಎಂದು ಕರೆಯುತ್ತಾರೆ. ಹಸಿರು ಏಲಕ್ಕಿಗೆ ಹೋಲಿಸಿದರೆ ಕಪ್ಪು ಏಲಕ್ಕಿಯನ್ನು ಖರೀದಿಸುವವರು ತುಂಬಾನೇ ಕಡಿಮೆ. ಯಾಕಂದ್ರೆ ಇದು ಅಷ್ಟೊಂದು ಜನಪ್ರಿಯವಾಗಿಲ್ಲ. ಆದರೆ ದೊಡ್ಡ ಕಪ್ಪು ಏಲಕ್ಕಿಗೂ ಮತ್ತು ಚಿಕ್ಕ ಹಸಿರು ಏಲಕ್ಕಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಅದರಲ್ಲಿನ ವ್ಯತ್ಯಾಸ ಏನಂದ್ರೆ ದೊಡ್ಡ ಕಪ್ಪು ಏಲಕ್ಕಿ ಕಡಿಮೆ ರುಚಿ ಹೊಂದಿದೆ. ಇನ್ನೂ, ಈ ಕಪ್ಪು ಏಲಕ್ಕಿ ಪೂರ್ವ ಹಿಮಾಲಯ ಪ್ರದೇಶ, ನೇಪಾಳ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಅಸ್ಸಾಂನಲ್ಲಿ ಕಂಡು ಬರುತ್ತದೆ.

ಕಪ್ಪು ದಪ್ಪ ಏಲಕ್ಕಿಯ ಮೂಲಿಕೆ ಕಪ್ಪು ಬಣ್ಣದ ಬೀಜ ಹೊಂದಿದೆ. ಇದರಲ್ಲಿ ಹಲವು ಆರೋಗ್ಯ ಪ್ರಯೋಜನಗಳಿವೆ. ಇದನ್ನು ಹೆಚ್ಚಾಗಿ ಚಹಾ ಹಾಗೂ ಖಾದ್ಯಗಳಲ್ಲಿ ಬಳಸುತ್ತಾರೆ. ಅಲ್ಲದೆ, ಇದರ ಸಿಪ್ಪೆಯನ್ನು ವಿವಿಧ ಖಾದ್ಯಗಳಿಗೆ ಹಾಕುತ್ತಾರೆ. ಇದು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ. ಹಾಗೂ ದೇಹದ ವಿವಿಧ ಅಂಗಗಳ ಆಂತರಿಕ ಶುಚಿತ್ವ ಮತ್ತು ಬಲ ಕಾಪಾಡುತ್ತದೆ. ಇದರಲ್ಲಿ ಪೋಷಕಾಂಶಗಳು ಮತ್ತು ಫೈಬರ್‌ ಒಳಗೊಂಡಿದೆ.

ಇನ್ನೂ, ಈ ಕಪ್ಪು ದೊಡ್ಡ ಏಲಕ್ಕಿಯ ಆರೋಗ್ಯ ಪ್ರಯೋಜನಗಳು ಏನು? ಎಂಬುದನ್ನು ನೋಡೋಣ.

ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ : ಕಪ್ಪು ದಪ್ಪ ಏಲಕ್ಕಿಯನ್ನು ಖಾದ್ಯಗಳಲ್ಲಿ ಬಳಸಿದ್ರೆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಗಂಟಲಿನಲ್ಲಿ ಉರಿಯೂತ ಸಂವೇದನೆ ನಿವಾರಿಸುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹೊಟ್ಟೆಯೊಳಗಿನ ಊತ ತೆಗೆದು ಹಾಕುತ್ತದೆ. ಅಸಿಡಿಟಿ, ಹೊಟ್ಟೆಯ ಹುಣ್ಣುಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಇದು ಹೊಟ್ಟೆಯಲ್ಲಿರುವ ಆಮ್ಲಗಳನ್ನು ಸರಿಯಾಗಿ ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ, ಹಸಿವನ್ನು ಕೂಡ ಸುಧಾರಿಸುತ್ತದೆ. ಹಾಗೇ ಗ್ಯಾಸ್ ಮತ್ತು ಉಬ್ಬುವಿಕೆಯ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.

ಜೀರ್ಣಕ್ರಿಯೆ ತೊಂದರೆ ನಿವಾರಣೆಗೆ – ಒಂದು ಇಂಚಿನ ಶುಂಠಿ, ಎರಡು ಲವಂಗ, ಮೂರು ಏಲಕ್ಕಿ ಮತ್ತು ಒಂದು ಚಮಚ ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಿ ಇವೆಲ್ಲವನ್ನೂ ಒಟ್ಟಿಗೆ ರುಬ್ಬಿಕೊಳ್ಳಿ, ನಂತರ ಒಂದು ಚಮಚ ನೀರಿನಲ್ಲಿ ಇದನ್ನು ಸೇವಿಸಿ. ಇದು ನಿಮ್ಮ ಜೀರ್ಣಕ್ರಿಯೆ ತೊಂದರೆ ನಿವಾರಣೆ ಮಾಡುತ್ತದೆ.

ಕೂದಲ ಆರೋಗ್ಯಕ್ಕೆ ಸಹಕಾರಿ : ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಈ ಕಪ್ಪು ಏಲಕ್ಕಿ ನೆತ್ತಿಯ ಸೋಂಕು, ತುರಿಕೆ ಮತ್ತು ನೆತ್ತಿಗೆ ಸಂಬಂಧಿತ ಸೋಂಕುಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಇದರ ಆಂಟಿ-ಆಕ್ಸಿಡೇಟಿವ್ ಗುಣಲಕ್ಷಣಗಳಿಂದ ಕೂದಲಿಗೆ ಸರಿಯಾದ ಪೋಷಣೆಯನ್ನು ನೀಡುತ್ತದೆ. ಹಾಗೂ ಈ ದೊಡ್ಡ ಕಪ್ಪು ಏಲಕ್ಕಿ ಒಣ ಕೂದಲು ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಕೂದಲನ್ನು ಬಲಪಡಿಸಿ, ಉದ್ದ, ದಪ್ಪ ಮತ್ತು ಸುಂದರ ಹೊಳೆಯುವ ಕೂದಲನ್ನು ನಿಮಗೆ ನೀಡುತ್ತದೆ.

ದೇಹದ ವಿಷ ತೆಗೆದು ಹಾಕುತ್ತದೆ : ಕಪ್ಪು ಏಲಕ್ಕಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದ್ದು, ಉತ್ತಮ ಉತ್ಕರ್ಷಣ ನಿರೋಧಕವಾಗಿದೆ. ಅಲ್ಲದೆ, ಇದರಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೇರಳವಾಗಿದ್ದು, ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುತ್ತದೆ. ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕಪ್ಪು ದಪ್ಪ ಏಲಕ್ಕಿಯನ್ನು ಭಕ್ಷ್ಯಗಳು, ಕಷಾಯ ಅಥವಾ ಚಹಾದಲ್ಲಿ ಬೆರೆಸಿ ಸೇವಿಸಿ.

ಕ್ಯಾನ್ಸರ್ ನಿವಾರಣೆ : ಈ ಏಲಕ್ಕಿಯು ಕ್ಯಾನ್ಸರ್ ವಿರೋಧಿ ಗುಣ ಹೊಂದಿದ್ದು, ಇದರಲ್ಲಿನ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುತ್ತದೆ. ಉತ್ಕರ್ಷಣ ನಿರೋಧಕ ಗ್ಲುಟಾಥಿಯೋನ್ ಮಟ್ಟ ಹೆಚ್ಚಿಸುತ್ತದೆ. ಈ ಕಪ್ಪು ಏಲಕ್ಕಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿರುವ ಅನೇಕ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ಅಲ್ಲದೆ, ಈ ಕಪ್ಪು ಏಲಕ್ಕಿಯು ಉಸಿರಾಟದ ಸಮಸ್ಯೆಗೆ ಸಹಕಾರಿಯಾಗಿದೆ. ಅಸ್ತಮಾ, ಶ್ವಾಸಕೋಶ ಕಟ್ಟುವಿಕೆ ಸಮಸ್ಯೆಗೆ ತುಂಬಾ ಉಪಯುಕ್ತ. ಇದು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡುತ್ತದೆ.

Leave A Reply

Your email address will not be published.