ಸರಕಾರಿ ನೌಕರರೇ ಫಿಟ್ ಮೆಂಟ್ ಫ್ಯಾಕ್ಟರ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ!

ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದಿಂದ (7th Pay Commission Update ) ಶೀಘ್ರದಲ್ಲೇ ಸಿಹಿ ಸುದ್ದಿಯೊಂದು ಅತಿ ಶೀಘ್ರದಲ್ಲಿಯೆ ಬರಲಿದೆ. ಸರಕಾರ ಮತ್ತೊಮ್ಮೆ ನೌಕರರ ಖಾತೆಗೆ ಭಾರಿ ಮೊತ್ತವನ್ನು ರವಾನಿಸಲು ಅಣಿಯಾಗಿದೆ. ಸರಕಾರ 18 ತಿಂಗಳ ಡಿಎ ಬಾಕಿಯ ಹಣ ಬಿಡುಗಡೆ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.

 

ಹೊಸ ವರ್ಷದಲ್ಲಿ ಅದರಲ್ಲೂ ಹೋಳಿ ಹಬ್ಬದ ಮೊದಲೇ ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ತುಟ್ಟಿಭತ್ಯೆಯನ್ನು ಸರ್ಕಾರವು ಜನವರಿ ಮತ್ತು ಜುಲೈನಲ್ಲಿ ವರ್ಷಕ್ಕೆ ಎರಡು ಬಾರಿ ಘೋಷಣೆ ಮಾಡುತ್ತದೆ. ಈ ಬಾರಿ ಜನವರಿಯಲ್ಲಿ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲು ಸಿದ್ಧತೆ ನಡೆಸಿದೆ.

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಕೇಂದ್ರ ನೌಕರರಿಗೆ ವೇತನ ದರದಲ್ಲಿ ಪರಿಷ್ಕರಣೆ ಮಾಡಿದ್ದು ತಿಳಿದಿರುವ ವಿಚಾರ. ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ 4 ಶೇಕಡಾ ಹೆಚ್ಚಳದೊಂದಿಗೆ 42 ಶೇಕಡಾಕ್ಕೆ ಏರಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

ಸದ್ಯಕ್ಕೆ ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಇರುವ ತುಟ್ಟಿ ಭತ್ಯೆ 38 ಪ್ರತಿಶತ ಇದ್ದು, ಮುಂದಿನ ದಿನಗಳಲ್ಲಿ ಮತ್ತೆ 4 ಶೇಕಡಾ ಹೆಚ್ಚಳದೊಂದಿಗೆ 42 ಶೇಕಡಾಕ್ಕೆ ಏರಿಕೆ ಮಾಡಲಾಗುತ್ತದೆ. ಆದರೆ, ಜನವರಿ ಡಿಎ ಹೆಚ್ಚಳವನ್ನು ಮಾರ್ಚ್‌ನಲ್ಲಿ ಪ್ರಕಟಿಸಲಾಗುತ್ತದೆ.

ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಒಮ್ಮತ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ಜೊತೆಗೆ ಹೊಸ ವರ್ಷದಲ್ಲಿ ನೌಕರರ ಫಿಟ್ ಮೆಂಟ್ ಅಂಶದ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಕೂಡ ಇದೆ.

ಹೋಳಿಗೂ ಮುನ್ನವೇ ಜನವರಿ ತಿಂಗಳ ತುಟ್ಟಿಭತ್ಯೆಯನ್ನು ನೌಕರರು ಪಡೆಯಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದ್ದು, 2023ರ ಮಾರ್ಚ್ 1ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಕುರಿತು ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.

ಫಿಟ್‌ಮೆಂಟ್ ಅಂಶ ಪರಿಷ್ಕರಣೆ ಮಾಡಬೇಕೆಂಬ ಬೇಡಿಕೆ ಕೇಂದ್ರ ನೌಕರರಿಂದ ಅನೇಕ ದಿನಗಳಿಂದ ಕೇಳಿ ಬರುತ್ತಿವೆ. ನೌಕರರ ವೇತನ ಹೆಚ್ಚಳ ಕುರಿತು ಪ್ರತ್ಯೇಕ ಕಾರ್ಯಕ್ರಮ ರೂಪಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಏಪ್ರಿಲ್ 2024ರ ಲೋಕಸಭೆ ಚುನಾವಣೆಗೂ ಮುನ್ನ ಕರಡು ಸಿದ್ಧಪಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ವೇತನ ಆಯೋಗದ ರಚನೆಯ ಆಧಾರದ ಮೇಲೆ ಫಿಟ್‌ಮೆಂಟ್ ಅಂಶದ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ವೇತನ ಆಯೋಗದ ಬದಲು ಬೇರೆ ರೀತಿಯಲ್ಲಿ ನೌಕರರ ವೇತನ ಹೆಚ್ಚಿಸಲು ಸರ್ಕಾರ ತಯಾರಿ ನಡೆಸಿದೆ ಎನ್ನಲಾಗಿದ್ದು, ಹೀಗಾಗಿ, ಸರ್ಕಾರ ಆಟೋ ಮ್ಯಾಟಿಕ್ ಪೇ ರಿವಿಜನ್ ಫಾರ್ಮುಲಾ ರಚನೆ ಮಾಡುವ ಸಾಧ್ಯತೆ ಇದೆ. ಡಿಎ ಸೂತ್ರದ ಮೇಲೆಯೇ ಸಾಮಾನ್ಯವಾಗಿ ವೇತನವನ್ನು ಹೆಚ್ಚಿಸಲಾಗುತ್ತದೆ. ಹೀಗಾಗಿ, ಡಿಎ ಹೆಚ್ಚಳದ ಜೊತೆಗೆ ಸಂಬಳವೂ ಹೆಚ್ಚಾಗುತ್ತದೆ.

Leave A Reply

Your email address will not be published.