7th Pay Commission : ಶಿಕ್ಷಕರಿಗೆ 7 ನೇ ವೇತನ ಆಯೋಗ ಜಾರಿಗೊಳಿಸಿದ ಸರಕಾರ

ಪಂಜಾಬ್‌ನಲ್ಲಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರವು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಶಿಕ್ಷಕರಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ವೇತನ ನೀಡಲಾಗುವ ಕುರಿತು ಘೋಷಣೆ ಮಾಡಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಗುರ್ಮೀತ್ ಸಿಂಗ್ ಮೀತ್ ಹೇಯರ್ ಸರ್ಕಾರದ ಈ ನಿರ್ಧಾರವನ್ನು ಶ್ಲಾಘಿಸಿದ್ದು, ಇದು ರಾಜ್ಯ ಸರ್ಕಾರದ ಬಹುದೊಡ್ಡ ಹೆಜ್ಜೆಯಾಗಿದೆ ಎಂದಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರದ ಮೊದಲ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಆರು ವರ್ಷಗಳಿಂದ ಬಾಕಿ ಉಳಿದಿದ್ದ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಶಿಕ್ಷಕರ ಬೇಡಿಕೆಯನ್ನು ಪೂರೈಸಲು ಸರ್ಕಾರ ಮುಂದಾಗಿದೆ.

ಪಂಜಾಬಿ ಭಾಷೆಗೆ ಗೌರವವನ್ನು ನೀಡುವ ಸಲುವಾಗಿ, ಪಂಜಾಬಿ ಮಾತೃಭಾಷೆಗೆ ಮೀಸಲಾದ ನವೆಂಬರ್ ತಿಂಗಳನ್ನು ಭಾಷಾ ಇಲಾಖೆಯು ಪಂಜಾಬಿ ತಿಂಗಳು ಎಂದು ಆಚರಿಸಲಾಗಿದೆ. ಈ ತಿಂಗಳಲ್ಲಿ, ಅಮೃತಸರದಲ್ಲಿ ನಡೆದ ರಾಜ್ಯ ಮಟ್ಟದ ಸಮಾರಂಭದಲ್ಲಿ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರಮುಖ ನಿರ್ಣಯ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಫೆಬ್ರವರಿ 21, 2023 ರವರೆಗೆ ಎಲ್ಲಾ ಬೋರ್ಡ್‌ಗಳಲ್ಲಿ ಪಂಜಾಬಿ ಭಾಷೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಪರಿಷ್ಕೃತ ವೇತನ ರಚನೆಯ ಅಡಿಯಲ್ಲಿ ಶಿಕ್ಷಕರಿಗೆ ಒಟ್ಟು ₹ 280 ಕೋಟಿಯಷ್ಟು ಹಣವನ್ನು ಮೀಸಲಿರಿಸಬೇಕಾಗಿದ್ದು, ಪರಿಷ್ಕೃತ ವೇತನದ ವಿತರಣೆಯನ್ನು ರಾಜ್ಯದ ಖಜಾನೆಯಿಂದ ಬಿಡುಗಡೆ ಮಾಡಲಾಗುತ್ತದೆ. 7ನೇ ವೇತನ ಆಯೋಗ ಮತ್ತು ರಜಾ ಸೌಲಭ್ಯಗಳನ್ನು ಅತಿಥಿ ಅಧ್ಯಾಪಕರು ಮತ್ತು ಅರೆಕಾಲಿಕ ಉಪನ್ಯಾಸಕರಿಗೂ ವಿಸ್ತರಿಸಲಾಗುವ ಕುರಿತು ಪಂಜಾಬ್ ಸರ್ಕಾರ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಕಳೆದ ಆರು ವರ್ಷಗಳಿಂದ ವೇತನ ಬಾಕಿ ಉಳಿದಿದ್ದು, ಅಕ್ಟೋಬರ್ ತಿಂಗಳಲ್ಲಿ ಜಾರಿಗೆ ಬರಲಿರುವ ಈ ನಿರ್ಧಾರದಿಂದ ಶಿಕ್ಷಕರಿಗೆ ಸರ್ಕಾರದ ಬೊಕ್ಕಸದಿಂದ ರೂ. 280 ಕೋಟಿ ರೂ. ಇದರ ಜೊತೆಗೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಅಧ್ಯಾಪಕರು ಮತ್ತು ಅರೆಕಾಲಿಕ ಶಿಕ್ಷಕರ ವೇತನವನ್ನು ಏರಿಕೆ ಮಾಡಲಾಗುತ್ತದೆ.

ಬಜೆಟ್ ನಲ್ಲಿ ಹೊಸ ಜಿಲ್ಲಾ ಗ್ರಂಥಾಲಯಗಳಿಗೆ 30 ಕೋಟಿ ರೂಪಾಯಿಯನ್ನು ಇಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಕ್ರೀಡೆಗೆ 5 ಕೋಟಿ ರೂ., ಇ-ಕಂಟೆಂಟ್‌ನೊಂದಿಗೆ ಡಿಜಿಟಲ್ ತರಗತಿಗಳಿಗೆ ರೂ 10 ಕೋಟಿ, ರೂ. ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್ಕಿನ್ ಒದಗಿಸಲು 5.39 ಕೋಟಿ ರೂ. ರಾಜ್ಯದ ಕಾಲೇಜುಗಳಿಗೆ ಸೋಲಾರ್ ವ್ಯವಸ್ಥೆಗಾಗಿ 11.50 ಕೋಟಿ ಬಿಡುಗಡೆ ಮಾಡಲಾಗಿದೆ.

ಎನ್‌ಸಿಸಿ ಮೂಲಸೌಕರ್ಯ ಸುಧಾರಣೆ ಮತ್ತು ಘಟಕಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ರೂ. 5 ಕೋಟಿ ಬಿಡುಗಡೆಯಾಗಿದೆ ಎಂದು ಮಾನ್‌ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.