ರಾಜ್ಯ ಸರಕಾರಿ ನೌಕರರೇ ನಿಮಗೊಂದು ಶಾಕಿಂಗ್ ನ್ಯೂಸ್ | ಹಳೆ ಪಿಂಚಣಿ ವ್ಯವಸ್ಥೆ ಕುರಿತು ಸಿ ಎಂ ನೀಡಿದ್ರು ಬಿಗ್ ಅಪ್ಡೇಟ್
ಪಿಂಚಣಿ ವಿಷಯದಲ್ಲಿ ರಾಜ್ಯ ಸರಕಾರಿ ನೌಕರರಿಗೆ ಒಂದು ಮುಖ್ಯವಾದ ಸುದ್ದಿ. ಸಿ ಎಂ ಬೊಮ್ಮಾಯಿ ಅವರು ಪಿಂಚಣಿ ಸುದ್ದಿಯ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇದರಿಂದಾಗಿ ಬೆಂಗಳೂರಿನಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಹೋರಾಡುತ್ತಿರುವ ಸರಕಾರಿ ನೌಕರರಿಗೆ ಹಿನ್ನಡೆಯಾಗಿದೆ.
ಮಂಗಳವಾರ ಬಿಜೆಪಿಯ ರೇಣುಕಾಚಾರ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿಎಂ, ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟು ನಿಧಿ ಇಲ್ಲ.
ಹಾಗಾಗಿ ಮರು ಜಾರಿ ಕಷ್ಟ. ಅಲ್ಲದೇ ಆರ್ಬಿಐ ರಚಿಸಿದ ಸಮಿತಿಯ ವರದಿಯ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಸರಕಾರ 2004ರ ಜ.1ರಂದು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿ ಗೊಳಿಸಿದೆ. ಇತರ ರಾಜ್ಯಗಳೂ ಈ ಯೋಜನೆಯನ್ನು ಅಳವಡಿಸಿಕೊಂಡಿದ್ದು, 2006ರಲ್ಲಿ ಕರ್ನಾಟಕದಲ್ಲೂ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.