KLAS ಪರೀಕ್ಷೆ ತಾತ್ಕಾಲಿಕ ಕೀ ಉತ್ತರಗಳು ಪ್ರಕಟ.
KLAS ಪರೀಕ್ಷೆ ತಾತ್ಕಾಲಿಕ ಕೀ ಉತ್ತರಗಳು ಪ್ರಕಟವಾಗಿದೆ. ಕರ್ನಾಟಕ ವಿಧಾನಸಭೆ ಸಚಿವಾಲಯದ ದಲಾಯತ್, ಕಂಪ್ಯೂಟರ್ ಆಪರೇಟರ್, ಕಿರಿಯ ಸಹಾಯಕ ಹಾಗೂ ಸ್ವಾಗತಕಾರರ ಹುದ್ದೆಗಳ ನೇಮಕ ಪರೀಕ್ಷೆಗೆ ಸಂಬಂಧ ಪಟ್ಟಂತೆ, ಇದೀಗ ಅಧಿಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ.
ಸದರಿ ಹುದ್ದೆಗಳಿಗೆ ನೇಮಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು 05-12-2022 , 06-12-2022, 07-12-2022 ರಂದು ನಡೆಸಲಾಗಿತ್ತು. ಈ ಹುದ್ದೆಗಳಿಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ಕೆಇಎ ವೆಬ್ಸೈಟ್ಗೆ ಭೇಟಿ ನೀಡಿ ತಾತ್ಕಾಲಿಕ ಸರಿ ಯುತ್ತರಗಳನ್ನು ಚೆಕ್ ಮಾಡಬಹುದಾಗಿದೆ. ತಾತ್ಕಾಲಿಕ ಕೀ ಉತ್ತರಗಳನ್ನು ಚೆಕ್ ಮಾಡಲು https://cetonline.karnataka.gov.in/kea/ ಅಧಿಕೃತ ಈ ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.
ಈ ಸರಿಯುತ್ತರಗಳಿಗೆ ಸಂಬಂಧ ಪಟ್ಟಂತೆ ಆಕ್ಷೇಪಣೆ ಇದ್ದಲ್ಲಿ ಕೆಳಗೆ ತಿಳಿಸಿದ ಮಾಹಿತಿ ಆಧರಿಸಿ ಕೆಇಎ’ಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಸ್ತುತ ಬಿಡುಗಡೆ ಮಾಡಿರುವ ತಾತ್ಕಾಲಿಕ ಸರಿಯುತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ದಿನಾಂಕ 03-01-2023 ರ ಸಂಜೆ 05-00 ಗಂಟೆ ಒಳಗೆ ಕೆಇಎ ನೀಡಿದ ಅರ್ಜಿ ನಮೂನೆಯಲ್ಲಿ ಆಕ್ಷೇಪಣೆ ಭರ್ತಿ ಮಾಡಿದ ಬಳಿಕ, ಸ್ಕ್ಯಾನ್ ಮಾಡಿದ ಕಾಪಿಯನ್ನು ಇ-ಮೇಲ್ ವಿಳಾಸ keadjc2022@gmail.com ಗೆ ರವಾನೆ ಮಾಡಬೇಕು.
ಕೀ ಉತ್ತರಗಳನ್ನು ಚೆಕ್ ಮಾಡುವ ವಿಧಾನ ಹೀಗಿದೆ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://cetonline.karnataka.gov.in/kea ಗೆ ಭೇಟಿ ನೀಡಬೇಕು. ಓಪನ್ ಆದ ಪೇಜ್ನಲ್ಲಿ ‘ಇತ್ತೀಚಿನ ಪ್ರಕಟಣೆಗಳು’ ಎಂಬಲ್ಲಿ ಗಮನಿಸಬೇಕು. ಮೇಲೆ ತಿಳಿಸಲಾದ ಪ್ರತಿ ಹುದ್ದೆಗೆ ಡಿಸೆಂಬರ್ 27 ರಂದು ಪ್ರತ್ಯೇಕ ಲಿಂಕ್ನಲ್ಲಿ ಕೀ ಉತ್ತರ ಪ್ರಕಟಿಸಲಾಗಿದ್ದು, ನೀವು ಪರೀಕ್ಷೆ ಬರೆದ ಹುದ್ದೆಯ ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಡಿಎಫ್ ಫೈಲ್ ಒಂದು ತೆರೆದುಕೊಳ್ಳಲಿದೆ. ಬಳಿಕ ಕೀ ಉತ್ತರ ಚೆಕ್ ಮಾಡಬಹುದು.