ವಿದ್ಯಾರ್ಥಿಗಳೇ ಅದ್ಭುತ ಸ್ಕಾಲರ್ಶಿಪ್ ನಿಮ್ಮದಾಗಿಸಿ |ಡಿ.31 ಕೊನೆಯ ದಿನ, ಈ ಕೂಡಲೇ ಅರ್ಜಿ ಸಲ್ಲಿಸಿ, ರೂ.30,000 ನಿಮ್ಮದಾಗಿಸಿ
ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಅಷ್ಟೆ ಅಲ್ಲದೆ, ಸರ್ಕಾರ ಕೂಡ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರ್ಥಿಕ ನೆರವು, ಸ್ಕಾಲರ್ ಶಿಪ್ ಜೊತೆಗೆ ಅನೇಕ ಕ್ರಮಗಳನ್ನು ಜಾರಿಗೆ ತಂದಿದೆ.
ಆಸ್ಟ್ರಲ್ ಫೌಂಡೇಶನ್ 10th/12th/Diploma ನಂತರ ಪದವಿಪೂರ್ವ ಅಥವಾ ಡಿಪ್ಲೊಮಾ ಕೋರ್ಸ್ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ (Students) ಆರ್ಥಿಕ ನೆರವು ನೀಡಿ ಓದುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಬೆಂಬಲಿಸುತ್ತಿದೆ. ಆಸ್ಟ್ರಲ್ ಫೌಂಡೇಶನ್ ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಲಭ್ಯವಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಇಂದು ಪುಸ್ತಕ ಹಿಡಿಯ ಬೇಕಿದ್ದ ಅದೆಷ್ಟೊ ಕೈಗಳು ಕೂಲಿ ಮಾಡಿ ಜೀವನ ನಡೆಸುವುದನ್ನು ನೋಡಿರುತ್ತೇವೆ. ಹೀಗೆ ಆರ್ಥಿಕ ಸಂಕಷ್ಟದಿಂದ ಉತ್ತಮ ಶಿಕ್ಷಣ ಇಲ್ಲವೇ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಆಸ್ಟ್ರಲ್ ಫೌಂಡೇಶನ್ ವಿದ್ಯಾರ್ಥಿ ವೇತನದ ಮೂಲಕ ಆರ್ಥಿಕ ನೆರವನ್ನು ನೀಡುತ್ತದೆ.
ಈ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: ಡಿಸೆಂಬರ್ 1, 2022 ಹಾಗೆಯೇ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಲು ಡಿಸೆಂಬರ್ 31, 2022 ಕೊನೆಯ ದಿನವಾಗಿದೆ.
ಆಸ್ಟ್ರಲ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ಆಸ್ಟ್ರಲ್ ಫೌಂಡೇಶನ್ ಆರಂಭಿಸಿದ್ದು, ವಿದ್ಯಾರ್ಥಿಗಳು ಆರ್ಥಿಕ ನೆರವು ವರ್ಷಕ್ಕೆ 10 ರಿಂದ 30 ಸಾವಿರ ಪಡೆಯ ಬಹುದಾಗಿದೆ. ಈ ಸ್ಕಾಲರ್ ಶಿಪ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅಧಿಕೃತ ಸೈಟ್ www.vidyasaarathi.co.in ಮೂಲಕ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಬಹುದು.
ಆಸ್ಟ್ರಲ್ ಫೌಂಡೇಶನ್ ಸ್ಕಾಲರ್ ಶಿಪ್ ಪಡೆಯಲು ಯಾರು ಅರ್ಹರು??
BE/B.Tech ಕೋರ್ಸ್‌ಗಾಗಿ ನವೀಕರಣ ವಿದ್ಯಾರ್ಥಿವೇತನ (2022-2023) 10 ನೇ ತರಗತಿ, 12 ನೇ ತರಗತಿ ಮತ್ತು ಡಿಪ್ಲೊಮಾ ಪರೀಕ್ಷೆಯನ್ನು ಪಾಸ್ ಆಗಿದ್ದು ಜೊತೆಗೆ ಕನಿಷ್ಠ 50% ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚು ಇರಬಾರದು.
B.Sc ಅಗ್ರಿಕಲ್ಚರ್ ಕೋರ್ಸ್ ಪೂರ್ಣಗೊಳಿಸಲು ಆಸ್ಟ್ರಲ್ ಫೌಂಡೇಶನ್ ನವೀಕರಣ ವಿದ್ಯಾರ್ಥಿವೇತನದ ಅನುಸಾರ (2022-2023) 10 ನೇ ಮತ್ತು 12 ನೇ ತರಗತಿ ಪರೀಕ್ಷೆ ಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕಾಗುತ್ತದೆ. ಇದರ ಜೊತೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚಿರಬಾರದು.
ಡಿಪ್ಲೊಮಾ ಕೋರ್ಸ್‌ಗಾಗಿ ಆಸ್ಟ್ರಲ್ ಫೌಂಡೇಶನ್ ನವೀಕರಣ ವಿದ್ಯಾರ್ಥಿವೇತನ (2022-2023) 10 ನೇ ತರಗತಿಯ ಜೊತೆಗೆ ಕನಿಷ್ಠ 50% ಅಂಕಗಳೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ 500000 ಕ್ಕಿಂತ ಹೆಚ್ಚಿರಬಾರದು.
ಅಗತ್ಯ ದಾಖಲೆಗಳು ಹೀಗಿವೆ;
ಗುರುತಿನ ಪುರಾವೆ, ವಿಳಾಸದ ಪುರಾವೆ, 10 ನೇ ಮತ್ತು 12 ನೇ ತರಗತಿ ಅಂಕಪಟ್ಟಿಗಳು,ಪ್ರಸ್ತುತ ವರ್ಷದ ಕಾಲೇಜು ಶುಲ್ಕ ರಶೀದಿ,ವಿದ್ಯಾರ್ಥಿಯ ಬ್ಯಾಂಕ್ ಪಾಸ್ಬುಕ್, ಆದಾಯ ಪ್ರಮಾಣಪತ್ರ ಬೇಕಾಗುತ್ತವೆ.
ಅಪ್ಲೈ ಮಾಡುವ ವಿಧಾನ ಹೀಗಿದೆ:
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಲು www.vidyasaarathi.co.in ಇಲ್ಲಿ ಕ್ಲಿಕ್ ಮಾಡಬೇಕು. ನೀವು ಅರ್ಜಿ ಸಲ್ಲಿಸಲು ಬಯಸುವ ಯೋಜನೆಯ ಹಹೆಸರನ್ನುಹುಡುಕಬೇಕು. ಆಗ ಮುಖ ಪುಟ ತೆರೆಯುತ್ತದೆ. ಬಳಿಕ,ಅಪ್ಲಿಕೇಶನ್ ಫಾರ್ಮ್ ವಿಂಡೋ ಪರದೆಯ ಮೇಲೆ ತೆರೆದುಕೊಳ್ಳಲಿದೆ.
ಆಗ ಅಗತ್ಯ ದಾಖಲೆಗಳನ್ನು ನೀಡಬೇಕು. ಅಲ್ಲಿ ಸೂಚಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನೋಡಿಕೊಂಡು ಒಪ್ಪಿಕೊಳ್ಳಬೇಕು. ಸರಿಯಾದ ದೂರವಾಣಿ ಸಂಖ್ಯೆ ನೀಡಿದ ಬಳಿಕ ಸರಿಯಾದ ಮೇಲ್ ಐಡಿ ನೀಡಬೇಕು. ಮುಂದಿನ ಸಂಪರ್ಕಕ್ಕೆ ಸಹಾಯವಾಗುವ ರೀತಿಯಲ್ಲಿ ಸೇವ್ ಮಾಡಬೇಕು.ಒಂದು ಹಾರ್ಡ್ ಕಾಫಿ ತೆಗೆದುಕೊಳ್ಳಬೇಕು. ಕೊನೆಗೆ ಅರ್ಜಿ ಶುಲ್ಕ ಪಾವತಿ ಮಾಡಬೇಕು.
ಮೇಲೆ ತಿಳಿಸಿದ ಮಾಹಿತಿ ಪ್ರಕಾರ ನೀವು ಈ ಸ್ಕಾಲರ್ ಶಿಪ್ಗೆ ಅಪ್ಲೈ ಮಾಡಬಹುದಾಗಿದ್ದು, ಈ ಸ್ಕಾಲರ್ ಶಿಪ್ ಪಡೆಯಲು ಅರ್ಜಿ ಸಲ್ಲಿಸಲು ಇನ್ನೂ ಕೇವಲ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ, ಅರ್ಹ ಅಭ್ಯರ್ಥಿಗಳು ಆದಷ್ಟು ಶೀಘ್ರದಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.