ಹಿಂದಿ ಹೇರಿಕೆ ವಿರುದ್ಧ ನಟ ಸಿದ್ಧಾರ್ಥ್ ಆಕ್ರೋಶ! ಅಷ್ಟಕ್ಕೂ ನಡೆದದ್ದೇನು?
ಭಾರತದಲ್ಲಿ ಹಿಂದಿ ಹೇರಿಕೆಯ ವಿಷಯವಂತೂ ಎಂದಿಗೂ ಜೀವಂತವಾಗಿರುವ ವಿವಾದವಾಗಿದೆ. ರೈಲು ನಿಲ್ದಾಣ, ವಿಮಾನ ನಿಲ್ದಾಣ ಎನ್ನುತ್ತ ಹೀಗೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಈ ವಿಚಾರ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಹಲವಾರು ರಾಜಕೀಯ ನಾಯಕರು, ಸಿನಿ ನಟ-ನಟಿಯರು ಅಲ್ಲದೆ ಪ್ರಮುಖ ವ್ಯಕ್ತಿಗಳು ಇದನ್ನು ವಿರೋದಿಸುತ್ತಲೇ ಇರುತ್ತಾರೆ. ಇದೀಗ ದಕ್ಷಿಣ ಭಾರತದ ಹೆಸರಾಂತ ನಟ ಸಿದ್ದಾರ್ಥ ಹಿಂದಿ ಹೇರಿಕೆಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ವಿಮಾನ ನಿಲ್ದಾಣದಲ್ಲಿ ತಮ್ಮೊಂದಿಗೆ ಇಂಗ್ಲಿಷ್ ಮಾತನಾಡದೇ, ಭದ್ರತಾ ಸಿಬ್ಬಂದಿ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಅವರು ಸಾಮಾಜಿಕ ನಟ ಸಿದ್ಧಾರ್ಥ್ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ . ಮಧುರೈ ವಿಮಾನ ನಿಲ್ದಾಣದಲ್ಲಿ ನಡೆದ ಈ ಘಟನೆಗೆ ತನ್ನ ವಯಸ್ಸಾದ ಪಾಲಕರು ಕೂಡ ಕಿರಿಕಿರಿ ಅನುಭವಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಮಧುರೈ ವಿಮಾನ ನಿಲ್ದಾಣದಲ್ಲಿ ಸಿ.ಆರ್.ಪಿ.ಎಫ್ ಅಧಿಕಾರಿಗಳು ಸಿದ್ದಾರ್ಥ ಅವರ ತಾಯಿಯ ಬ್ಯಾಗ್‍ನಲ್ಲಿದ್ದ ನಾಣ್ಯಗಳನ್ನು ತಗೆಯುವಂತೆ ಹೇಳಿದ್ದಾರೆ. ಹಿಂದಿ ಬರುವುದಿಲ್ಲ ಇಂಗ್ಲಿಷಿನಲ್ಲಿ ಮಾತನಾಡಿ ಎಂದು ಪದೇ ಪದೇ ಸಿದ್ದಾರ್ಥ ಕೇಳಿಕೊಂಡರೂ, ಅವರು ಹಿಂದಿಯಲ್ಲೇ ಮಾತನಾಡುತ್ತಿದ್ದರಂತೆ. ಇಪ್ಪತ್ತು ಸುಮಾರು ಹೊತ್ತು ನಟ ಮತ್ತು ಆತನ ತಂದೆ ತಾಯಿಗೆ ಮಾನಸಿಕ ಹಿಂಸೆ ನೀಡುವಂತೆ ಅಧಿಕಾರಿಗಳು ಮಾತನಾಡಿದರು ಎಂದು ಅವರು ಬರೆದುಕೊಂಡಿದ್ದಾರೆ
ಸಿದ್ದಾರ್ಥ್ ಕೆಲವೊಮ್ಮೆ ನರೇಂದ್ರ ಮೋದಿ ಸರಕಾರದ ವಿರುದ್ಧ ಮಾತನಾಡುತ್ತಲೇ ಇರುತ್ತಾರೆ. ಸರಕಾರದ ಕೆಲವೊಂದು ನಿಯಮಗಳ ಕುರಿತು, ಸರಕಾರದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಆಗಾಗ ಜಾಲತಾಣದಲ್ಲಿ ಹಂಚಿಕೊಂಡು ತಮ್ಮ ಧೋರಣೆಯನ್ನು ತಿಳಿಸುತ್ತಿರುತ್ತಾರೆ. ಅನೇಕ ಜನಪರ ಕೆಲಸಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅದರಲ್ಲೂ ಹಿಂದಿ ಹೇರಿಕೆಯ ವಿರುದ್ಧ ಸಾಕಷ್ಟು ಮಾತನಾಡಿದ್ದಾರೆ. ತಮಗೇ ಆಗಿರುವ ನೋವನ್ನು ಹಂಚಿಕೊಂಡು, ಹಿಂದಿ ಹೇರಿಕೆಯನ್ನು ನಿಲ್ಲಿಸಬೇಕು, ಸರಕಾರ ಜನಸಾಮಾನ್ಯರಿಗೆ ಒಳಿತನ್ನುಂಟುಮಾಡಬೇಕು ಎಂದು ಆಗ್ರಹಿಸಿದ್ದಾರೆ.