ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಉದ್ಯೋಗವಕಾಶ | ನೇರ ಸಂದರ್ಶನಕ್ಕೆ ಆಹ್ವಾನ

RIE Mysore Recruitment 2023: ಪ್ರಾದೇಶಿಕ ಶಿಕ್ಷಣ ಸಂಸ್ಥೆ-ಮೈಸೂರು(Regional Institute of Education Mysore) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಕೆಲಸ ಹುಡುಕುತ್ತಿದ್ರೆ ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ಡಿಸೆಂಬರ್ 30ರಂದು ಸಂದರ್ಶನ(Walk-in-Interview) ನಡೆಯಲಿದ್ದು, ಅಭ್ಯರ್ಥಿಗಳು(Candidates) ಪಾಲ್ಗೊಳ್ಳಬಹುದು. ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೈಸೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಸಂಸ್ಥೆ : ಪ್ರಾದೇಶಿಕ ಶಿಕ್ಷಣ ಸಂಸ್ಥೆ-ಮೈಸೂರು
ಹುದ್ದೆ : ಎಂಜಿನಿಯರ್ ಗ್ರೇಡ್, ಟೆಕ್ನಿಷಿಯನ್ ಗ್ರೇಡ್
ಒಟ್ಟು ಹುದ್ದೆ : 6
ಉದ್ಯೋಗದ ಸ್ಥಳ : ಮೈಸೂರು
ವೇತನ: ತಿಂಗಳಿಗೆ 19,000-35,000

ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ: 14/12/2022
ಸಂದರ್ಶನ ನಡೆಯುವ ದಿನಾಂಕ: 30/12/2022

ಹುದ್ದೆಯ ಮಾಹಿತಿ:
ಎಂಜಿನಿಯರ್ ಗ್ರೇಡ್ II- 1 ಹುದ್ದೆ
ಪ್ರೊಡ್ಯೂಸರ್ ಗ್ರೇಡ್ I- 1 ಹುದ್ದೆ
ಸೌಂಡ್ ರೆಕಾರ್ಡಿಸ್ಟ್​ I- 1 ಹುದ್ದೆ
ಟೆಕ್ನಿಷಿಯನ್ ಗ್ರೇಡ್ I- 1 ಹುದ್ದೆ
ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-1 ಹುದ್ದೆ
ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-1 ಹುದ್ದೆ

ಶೈಕ್ಷಣಿಕ ಅರ್ಹತೆ:
ಎಂಜಿನಿಯರ್ ಗ್ರೇಡ್ II- ಬಿಇ/ ಬಿ.ಟೆಕ್, ಎಂಎಸ್ಸಿ, ಎಂಸಿಎ
ಪ್ರೊಡ್ಯೂಸರ್ ಗ್ರೇಡ್ I- ಸ್ನಾತಕೋತ್ತರ ಪದವಿ
ಸೌಂಡ್ ರೆಕಾರ್ಡಿಸ್ಟ್​ I- ಬಿಎಸ್ಸಿ, ಸ್ನಾತಕೋತ್ತರ ಪದವಿ
ಟೆಕ್ನಿಷಿಯನ್ ಗ್ರೇಡ್ I- 10ನೇ ತರಗತಿ, ಪಿಯುಸಿ, ಡಿಪ್ಲೋಮಾ
ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-ಸ್ನಾತಕೋತ್ತರ ಪದವಿ
ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)- ಲೈಬ್ರರಿ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ

ವೇತನ: ಎಂಜಿನಿಯರ್ ಗ್ರೇಡ್ II- ಮಾಸಿಕ ₹ 35,000
ಪ್ರೊಡ್ಯೂಸರ್ ಗ್ರೇಡ್ I- ಮಾಸಿಕ ₹ 35,000
ಸೌಂಡ್ ರೆಕಾರ್ಡಿಸ್ಟ್​ I- ಮಾಸಿಕ ₹ 23,000
ಟೆಕ್ನಿಷಿಯನ್ ಗ್ರೇಡ್ I- ಮಾಸಿಕ ₹ 19,000
ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)-ಮಾಸಿಕ ₹ 25,000
ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-ಮಾಸಿಕ ₹ 23,000

ವಯೋಮಿತಿ: ಎಂಜಿನಿಯರ್ ಗ್ರೇಡ್ II- 40 ವರ್ಷದೊಳಗೆ
ಪ್ರೊಡ್ಯೂಸರ್ ಗ್ರೇಡ್ I- 35 ವರ್ಷ
ಸೌಂಡ್ ರೆಕಾರ್ಡಿಸ್ಟ್​ I- 30 ವರ್ಷ
ಟೆಕ್ನಿಷಿಯನ್ ಗ್ರೇಡ್ I- 27 ವರ್ಷ
ಜೂನಿಯರ್ ಪ್ರಾಜೆಕ್ಟ್​ ಫೆಲೋ(JPF)- 40 ವರ್ಷದೊಳಗೆ
ಪ್ರೊಫೆಶನಲ್ ಅಸಿಸ್ಟೆಂಟ್ (ಲೈಬ್ರರಿ)-30 ವರ್ಷ

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ:
ಪ್ರಾಂಶುಪಾಲರ ಕೊಠಡಿ
ಪ್ರಾದೇಶಿಕ ಶಿಕ್ಷಣ ಸಂಸ್ಥೆ
ಮೈಸೂರು-570006

Leave A Reply

Your email address will not be published.