ಚಾಕಲೋಟ್‌ ಗಂಟಲೊಳಗೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು | ಹೆತ್ತ ತಾಯಿಯ ರೋದನ ಕರುಳು ಹಿಡುವಂತಿದೆ

ಸತಾರಾದಲ್ಲಿ ಒಂದೂವರೆ ವರ್ಷದ ಮಗುವೊಂದರ ಗಂಟಲೊಳಗೆ ಚಾಕೊಲೇಟ್ ಸಿಲುಕಿ ಸಾವಿನ ಕದ ತಟ್ಟಿದ ಘಟನೆ ವರದಿಯಾಗಿದೆ. ಒಂದೂವರೆ ವರ್ಷದ ಮಗುವೊಂದರ ಗಂಟಲಲ್ಲಿ ಚಾಕೊಲೇಟ್ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರ ಸತಾರಾದಲ್ಲಿ ಬೆಳಕಿಗೆ ಬಂದಿದ್ದು, ಸತಾರಾ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೃತಪಟ್ಟಿರುವ ಮಗುವನ್ನು ಶಾರ್ವರಿ ಸುಧೀರ್ ಜಾಧವ್ ಎಂದು ಗುರುತಿಸಲಾಗಿದೆ.

 

ಪುಟ್ಟ ಮಗು ಶಾರ್ವರಿಗೆ ನೆರೆಮನೆಯ ಹುಡುಗಿ ಜೆಲ್ಲಿ ಚಾಕೊಲೇಟ್ ಕೊಟ್ಟಿದ್ದು, ಆ ಚಾಕೊಲೇಟ್​ ಅನ್ನು ಖುಷಿಯಿಂದ ಮಗು ಬಾಯಿಯಲ್ಲಿ ಇರಿಸಿಕೊಂಡಿದ್ದಾಳೆ. ಈ ಸಂದರ್ಭದಲ್ಲಿ ಚಾಕೊಲೇಟ್​​ ಇದ್ದಕ್ಕಿದ್ದಂತೆ ಆಕೆಯ ಗಂಟಲೊಳಗೆ ಸಿಕ್ಕಿ ಹಾಕಿಕೊಂಡಿದ್ದು, ಚಾಕೊಲೇಟ್ ಗಂಟಲಿಗೆ ಸಿಲುಕಿದ ಪರಿಣಾಮ ಮಗು ಕೆಮ್ಮಲು ಆರಂಭಿಸಿದ್ದಾಳೆ. ಅಷ್ಟೆ ಅಲ್ಲದೆ, ಅವಳು ಪ್ರಜ್ಞೆ ಕೂಡ ಕಳೆದುಕೊಂಡಿದ್ದು, ಮಗುವಿನ ಒದ್ದಾಟ ಕಂಡು ಆಕೆಯ ತಾಯಿ ಅಕ್ಕಪಕ್ಕದ ಮನೆಯವರಿಗೆ ಕರೆ ಮಾಡಿ ಕೂಡಲೇ ಶಾರ್ವರಿಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಶಾರ್ವರಿಯನ್ನ ತಪಾಸಣೆ ನಡೆಸಿ ಮೃತಪಟ್ಟಿದ್ದಾಳೆ ಎಂದು ಘೋಷಣೆ ಮಾಡಿದ್ದಾರೆ. ಮಗು ಚಾಕೊಲೇಟ್​ ನುಂಗಿ ಒದ್ದಾಡುತ್ತಿದ್ದುದನ್ನು ನೋಡಿದ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ.

ಡಾಕ್ಟರ್​ ಹೀಗೆ ಹೇಳುತ್ತಿದ್ದಂತೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಸಾಲುಂಖೆ ಅವರು ಸತಾರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Leave A Reply

Your email address will not be published.