LIC ಪಾಲಿಸಿದಾರರೇ ನಿಮಗೊಂದು ವಿಶೇಷ ಸುದ್ದಿ | ಈ ನಿಯಮ ಬದಲಾವಣೆಗೆ ಮಸೂದೆ ಅಂಗೀಕಾರ
LIC ಪಾಲಿಸಿದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ದೇಶದ ಅತಿದೊಡ್ಡ ವಿಮಾ ಕಂಪನಿ ಹೊಸ ವರ್ಷದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲು ಅಣಿಯಾಗಿದೆ. ಭಾರತೀಯ ಜೀವ ವಿಮಾ ನಿಗಮವು ಈ ಬದಲಾವಣೆಗೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಕಂಪನಿ ಕೆಲ ನಿಯಮಗಳನ್ನು ಬದಲಾಯಿಸುತ್ತಿದ್ದು, ಹೀಗಾಗಿ, ಎಲ್ ಐ ಸಿ ಪಾಲಿಸಿದಾರರು ಈ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
ಭವಿಷ್ಯದ ದೃಷ್ಟಿಯಿಂದ ಹಣ ಹೂಡಿಕೆ ಅತ್ಯವಶ್ಯಕವಾಗಿದೆ. ಉಳಿತಾಯ ಮಾಡುವ ಹವ್ಯಾಸ ಮುಂದೆ ಎದುರಾಗುವ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯಲ್ಲಿ ನೆರವಾಗುತ್ತವೆ. LIC ಆಫ್ ಇಂಡಿಯಾ ವಿವಿಧ ಶ್ರೇಣಿಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ವಿಮೆ ಮತ್ತು ಹೂಡಿಕೆ ಉತ್ಪನ್ನಗಳ ಶ್ರೇಣಿಯನ್ನು ನೀಡುತ್ತದೆ. ಭಾರತೀಯ ಜೀವ ವಿಮಾ ನಿಗಮವು ಕೆಲ ನಿಯಮಗಳಲ್ಲಿ ಬದಲಾವಣೆಗೆ ಮುಂದಾಗಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ ಎನ್ನಲಾಗಿದೆ. ಇದೀಗ ಅದರ ಕಾಂಪೋಸಿಟ್ ಲೈಸೆನ್ಸ್ ಕ್ಲಾಸ್ ಅನ್ನು ಪರಿಗಣನೆ ಮಾಡಲಾಗುತ್ತಿದೆ.
ಕೆಲ ಬಲ್ಲ ಮೂಲಗಳ ಪ್ರಕಾರ,ಎಲ್ಐಸಿಯ ಈ ಬದಲಾವಣೆಯು ಪಾಲಿಸಿದಾರರಿಗೆ ದೊಡ್ಡ ಲಾಭವನ್ನು ನೀಡಲಿದೆ ಎನ್ನಲಾಗಿದ್ದು, ಈ ವರ್ಷ ವಿಮೆಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಲು ಎಲ್ಐಸಿ ಪೂರ್ವ ತಯಾರಿ ನಡೆಸುತ್ತಿದೆ ಎನ್ನಲಾಗಿದೆ.
ಪಾಲಿಸಿದಾರರು ಯಾವುದೇ ವರ್ಗದ ವಿಮಾ ವ್ಯವಹಾರದ ಒಂದು ಇಲ್ಲವೇ ಒಂದಕ್ಕಿಂತ ಹೆಚ್ಚಿನ ವಿಭಾಗಗಳಿಗೆ ನೋಂದಾಯಿಸಿಕೊಳ್ಳಬಹುದು ಎಂದು ಪ್ರಸ್ತಾವಿತ ಬಿಲ್ನ ನಿಬಂಧನೆ ಹೇಳುತ್ತದೆ.
ಹಣಕಾಸು ಸಚಿವಾಲಯವು ಪಾಲಿಸಿದಾರರನ್ನು ಬೆಂಬಲಿಸುವ ನಿಟ್ಟಿನಲ್ಲಿ ಉಳಿತಾಯ ಉತ್ತೇಜಿಸುವ ಜೊತೆಗೆ ಅವರ ಹಿತಾಸಕ್ತಿಗಳನ್ನು ಮನಗಂಡು ವಿಮಾ ಕಾನೂನಿನಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳನ್ನು ಮಾಡುವ ಕುರಿತಾಗಿ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. ಹೀಗಾಗಿ, ಪಾಲಿಸಿದಾರರು ಈ ಮೂಲಕ ಉತ್ತಮ ಆದಾಯವನ್ನು ಪಡೆಯುವುದಲ್ಲದೆ ಮಾರುಕಟ್ಟೆಯಲ್ಲಿ ಹೊಸ ಉದ್ಯೋಗಾವಕಾಶಗಳು ಕೂಡ ಲಭ್ಯವಾಗಲಿದೆ.
ಏಜೆನ್ಸಿಯ ಅನುಸಾರ, ಎಲ್ಐಸಿ ವಿಮಾ ತಿದ್ದುಪಡಿ ಮಸೂದೆ ಅಂಗೀಕಾರದ ವೇಳೆ, ಕಾಂಪೋಸಿಟ್ ಲೈಸೆನ್ಸ್ ಗೆ ಸಂಬಂಧಿಸಿದ ವಿಮೆ ಹಾಗೂ ಇತರ ಎಲ್ಲಾ ಸಮಸ್ಯೆಗಳನ್ನು ಜೀವ ವಿಮಾ ನಿಗಮ ಕಾಯಿದೆ, 1956 ಅನ್ನು ಗಮನದಲ್ಲಿ ಇರಿಸಿಕೊಂಡು ಅದನ್ನು ಪರಿಗಣನೆ ಮಾಡಲಾಗುತ್ತದೆ. ಮತ್ತೊಮ್ಮೆ ವಿಮೆ ಮಾಡಿಸುವ ವಿಮಾ ಕಂಪನಿಗಳು ವಿಮಾ ವ್ಯವಹಾರದ ಯಾವುದೇ ವರ್ಗಕ್ಕೆ ನೋಂದಾಯಿಸಿಕೊಳ್ಳುವುದನ್ನು ಇಲ್ಲಿ ನಿರ್ಬಂಧಿಸಲಾಗಿದೆ.
ಕಾಂಪೋಸಿಟ್ ಲೈಸೆನ್ಸ್ ನ ಪ್ರಯೋಜನವೇನು??
ಯಾವುದೇ ಕಂಪನಿಯು ಕಾಂಪೋಸಿಟ್ ಲೈಸೆನ್ಸ್ ಹೊಂದಿದ್ದಲ್ಲಿ ಒಂದೇ ಕಂಪನಿಯ ಮೂಲಕ ಸಾಮಾನ್ಯ ಹಾಗೂ ಆರೋಗ್ಯ ವಿಮಾ ಸೇವೆಗಳನ್ನು ನೀಡಬಹುದಾಗಿದೆ. ಅಲ್ಲದೆ, ಅವರು ಪ್ರತ್ಯೇಕ ವಿಮೆ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
ವಿಮಾ ಕಾಯಿದೆ 1938 ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ, 1999 ಕ್ಕೆ ತಿದ್ದುಪಡಿ ಮಾಡಲು ಈ ವರ್ಷದ ಬಜೆಟ್ನಲ್ಲಿ ಈ ಮಸೂದೆಯನ್ನು ಮಂಡನೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ, ಹಣಕಾಸು ಸಚಿವಾಲಯವು ವಿಮಾ ಕಾನೂನಿನಲ್ಲಿ ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.