Ration Card : ಪಡಿತರ ಚೀಟಿದಾರರಿಗೆ ಗುಡ್‌ ನ್ಯೂಸ್‌ | ಇನ್ಮುಂದೆ ಈ ಕಾರಣಕ್ಕಾಗಿ ಪ್ರತ್ಯೇಕ ಬಿಪಿಎಲ್‌ ಕಾರ್ಡ್‌ ಲಭ್ಯ

ಪಡಿತರ ಚೀಟಿದಾರರಿಗೆ ಸರ್ಕಾರ ಮಹತ್ವದ ಘೋಷಣೆಯೊಂದು ಮಾಡಿದ್ದು, ನಿಜಕ್ಕೂ ಇದು ಸಂತಸದ ಸುದ್ದಿ ಎಂದೇ ಹೇಳಬಹುದು. ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

 

ಆಂಧ್ರಪ್ರದೇಶದ ಮಾದರಿಯಲ್ಲಿ ಅಕ್ಕಿ ಸಲುವಾಗಿಯೇ ಪ್ರತ್ಯೇಕ ಬಿಪಿಎಲ್ ಕಾರ್ಡ್ ವಿತರಿಸಬೇಕೆಂದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವತಿಯಿಂದ ಸರ್ಕಾರಕ್ಕೆ ಮಹತ್ವದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನಾರೋಗ್ಯದ ಕಾರಣ ನೀಡಿ ಬಿಪಿಎಲ್ ಕಾರ್ಡ್ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಬಿಪಿಎಲ್ ಕಾರ್ಡ್ ಪಡೆದವರ ಹೆಸರಿನಲ್ಲಿ ಅಕ್ಕಿ ದುರುಪಯೋಗವಾಗುತ್ತಿದೆ. ಇದನ್ನು ತಪ್ಪಿಸಲು ಆಂಧ್ರದ ರೀತಿಯಲ್ಲಿ ಅಕ್ಕಿ ಮತ್ತು ಮೆಡಿಕಲ್ ಬಿಪಿಎಲ್ ಕಾರ್ಡ್ ಪ್ರತ್ಯೇಕವಾಗಿ ನೀಡಿ, ಸ್ವಯಂ ಚಾಲಿತವಾಗಿ ಅನುಷ್ಠಾನಕ್ಕೆ ತರಬೇಕೆಂದು ಸಮಿತಿ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

Leave A Reply

Your email address will not be published.