ನಿರುದ್ಯೋಗಿ ಯುವಕ, ಯುವತಿಯರೇ ನಿಮಗೆ ಇಲ್ಲಿದೆ ಒಂದು ಉಪಯುಕ್ತ ಮಾಹಿತಿ, ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹಲವಾರು ಯೋಜನೆಗಳು ಜಾರಿಯಾಗುತ್ತಿದೆ. ಭಾರತವು ಆರ್ಥಿಕವಾಗಿ ಮುಂದುವರಿಯಲು ಮೊದಲು ನಿರುದ್ಯೋಗ ಸಮಸ್ಯೆ ಬಗೆಹರಿಯಬೇಕಾಗುತ್ತದೆ. ಸದ್ಯ ನಿರುದ್ಯೋಗಿಗಳಿಗಾಗಿ ಇಲ್ಲೊಂದು ಸುವರ್ಣ ಅವಕಾಶವಿದೆ. ಭಾರತ ಸರ್ಕಾರದಡಿ ಕಾರ್ಯ ನಿರ್ವಹಿಸುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್‌ ಪೆಟ್ರೋಕೆಮಿಕಲ್ಸ್‌ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮೈಸೂರು, (CIPET -CSTS) ಇಲ್ಲಿ ತರಬೇತಿ ಪಡೆಯಲು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ ವತಿಯಿಂದ ಇದೀಗ ನಿರುದ್ಯೋಗಿ ವಿದ್ಯಾವಂತ ಯುವಕ, ಯುವತಿಯರಿಗೆ ತರಬೇತಿ ನೀಡಲು ಯೋಜನೆ ರೂಪಿಸಿದೆ.

 

ಮೈಸೂರಿನಲ್ಲಿರುವ ಸದರಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್‌ ಪೆಟ್ರೋಕೆಮಿಕಲ್ಸ್‌ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (CIPET) ಸಂಸ್ಥೆಯಲ್ಲಿ ವಿವಿಧ ವೃತ್ತಿಪರ ಕಾರ್ಯಕ್ರಮಗಳ ಯೋಜನೆಯಡಿ 06 ತಿಂಗಳ ಅವಧಿಯ ಪಾಲಿಮರ್ ವಸ್ತುಗಳ ತಯಾರಿಕಾ ತಂತ್ರಜ್ಞಾನದ, ವಾಹನಗಳ ಬಿಡಿ ಭಾಗಗಳು, ವಿದ್ಯುತ್ ಉಪಕರಣಗಳು, ಕಂಪ್ಯೂಟರ್ / ಮೊಬೈಲ್ ಬಿಡಿ ಭಾಗಗಳು, ಇತ್ಯಾದಿ ವಸ್ತುಗಳ ತಯಾರಿಕೆಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.

ಸದ್ಯ ಈ ತರಬೇತಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತ ವಸತಿ, ಊಟ ಸೌಲಭ್ಯ ನೀಡಲಾಗುತ್ತದೆ.
ಅಲ್ಲದೆ ಈ ಮೇಲೆ ತಿಳಿಸಲಾದ ತರಬೇತಿಗಳನ್ನು ಪಡೆಯುವವರಿಗೆ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ :

  • ಎಸ್‌ಎಸ್‌ಎಲ್‌ಸಿ / 10ನೇ ತರಗತಿ
  • ಪಿಯುಸಿ ಪಾಸ್
  • ಐಟಿಐ ಪಾಸ್
  • ಜೆಒಸಿ ಪಾಸ್
  • ಡಿಪ್ಲೊಮ ಪಾಸ್
  • ಯಾವುದೇ ಪದವಿ ಪಾಸ್

ಮೇಲಿನ ವಿದ್ಯಾರ್ಹತೆಗಳಲ್ಲಿ ಯಾವುದೇ ವಿದ್ಯಾರ್ಹತೆ ಪಾಸಾದವರು / ಅನುತ್ತೀರ್ಣರಾದವರು ಸಹ ಅರ್ಜಿ ಸಲ್ಲಿಸಬಹುದು.

ತರಬೇತಿ ಪಡೆಯಲು ಇಚ್ಛೆಯುಳ್ಳ ಅಭ್ಯರ್ಥಿಗಳಲ್ಲಿ ಇರಬೇಕಾದ ದಾಖಲೆಗಳು :

  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ,
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮತ್ತು ಆಧಾರ್ ಕಾರ್ಡ್‌ ನೊಂದಿಗೆ ನೇರವಾಗಿ ಈ ಕೆಳಗಿನ ವಿಳಾಸಕ್ಕೆ ಭೇಟಿ ನೀಡಿ ಪ್ರವೇಶ ಪಡೆಯಬಹುದು.

ಅರ್ಜಿ ಸಲ್ಲಿಸುವ / ಪ್ರವೇಶ ಪಡೆಯುವ ವಿಳಾಸ : CIPET, 437/A ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು-570016.
ಹೆಚ್ಚಿನ ಮಾಹಿತಿಗೆ ಕರೆ ಮಾಡಲು ಸಂಪರ್ಕ ಸಂಖ್ಯೆಗಳು : 93807 56024, 97890 10015, 0821-2510619.

Leave A Reply

Your email address will not be published.