Scholarship: ವಿದ್ಯಾರ್ಥಿನಿಯರೇ ನಿಮಗೆ ಸಿಗಲಿದೆ 35 ಸಾವಿರ ಸ್ಕಾಲರ್​ ಶಿಪ್​

ಇಂದು ಪುಸ್ತಕ ಹಿಡಿಯ ಬೇಕಿದ್ದ ಅದೆಷ್ಟೊ ಕೈಗಳು ಆರ್ಥಿಕ ಮುಗ್ಗಟ್ಟಿನ ಜೊತೆಗೆ ಮನೆಯ ಸ್ಥಿತಿಗತಿಯ ಅನುಸಾರ ಓದಿಗೆ ವಿರಾಮ ಹೇಳಿ ಕೂಲಿ ಮಾಡುವತ್ತ ಮುಖ ಮಾಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಹೀಗಾಗಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌ ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ.

 

ಇದೇ ರೀತಿ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ (Scholarship) 2023 ಅನ್ನು ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತಿದೆ. ಓದುವ ಕನಸು ಹೊತ್ತ ವಿದ್ಯಾರ್ಥಿನಿಯರ ಶಿಕ್ಷಣ ಮುಂದುವರೆಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಹಲವಾರು ವಿದ್ಯಾರ್ಥಿ ವೇತನಗಳು ಕರ್ನಾಟಕದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಹಲವು ಸಂಸ್ಥೆಗಳು ಪ್ರೋತ್ಸಾಹ ಧನದ ಮೂಲಕ ಓದುವ ಅಭಿಲಾಷೆ ಗೆ ಬೆಂಬಲ ನೀಡುತ್ತಿವೆ.

ಅದೇ ರೀತಿ ವಿದ್ಯಾ ಜ್ಯೋತಿ ಸ್ಕಾಲರ್​ ಶಿಪ್​ ಕೂಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನು(Higher Education) ಪಡೆಯುತ್ತಿರುವ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳ (Students) ಅಂಕಿಅಂಶಗಳಲ್ಲಿ ಹೆಚ್ಚು ವ್ಯತ್ಯಾಸ ಕಂಡು ಬರುತ್ತಿದೆ. ಈ ಅಂತರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ (Scholarship) 2023 ಅನ್ನು ನೀಡಲಾಗುತ್ತಿದೆ.

ಇದು ವಿಶೇಷವಾಗಿ ಮಹಿಳಾ ವಿದ್ಯಾರ್ಥಿಗಳಿಗೆ ಲಭ್ಯವಿರುವ ಈ ವಿದ್ಯಾರ್ಥಿವೇತನವಾಗಿದೆ. ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಾದ ವಿದ್ಯಾರ್ಥಿನಿಯರಿಗೆ ರೂಪಾಯಿ 35000. ಧನ ಸಹಾಯ ದೊರೆಯಲಿದೆ.

ವಿದ್ಯಾ ಜ್ಯೋತಿ ಸ್ಕಾಲರ್‌ಶಿಪ್ (Scholarship) 2023 ಅನ್ನು ಪಡೆಯಲು ಅರ್ಹರಾದ ಅಭ್ಯರ್ಥಿಗಳು:
MA ಮಾಸ್ಟರ್ಸ್ ಆಫ್ ಆರ್ಟ್ಸ್, M.Sc ವಿಜ್ಞಾನದ ಸ್ನಾತಕೋತ್ತರ, ಎಂ.ಕಾಂ ಮಾಸ್ಟರ್ಸ್ ಆಫ್ ಕಾಮರ್ಸ್ ಈ ಕೋರ್ಸ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆಯ ಮಾನದಂಡ ಹೀಗಿದೆ:
ಅರ್ಜಿದಾರರು ಮಹಿಳೆಯಾಗಿರಬೇಕಾಗಿದ್ದು, ಅರ್ಜಿದಾರರು 12 ನೇ ತರಗತಿಯಲ್ಲಿ 50% ಅಂಕಗಳನ್ನು ಗಳಿಸಿರಬೇಕು. ಅರ್ಜಿದಾರರು ಪದವಿಯಲ್ಲಿ 50% ಅಂಕಗಳನ್ನು ಗಳಿಸಿರಬೇಕು ಜೊತೆಗೆ ಅರ್ಜಿದಾರರು ಭಾರತದ ಖಾಯಂ ನಿವಾಸಿಯಾಗಿದ್ದು ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ 6 ಲಕ್ಷಕ್ಕಿಂತ ಕಡಿಮೆಯಿರಬೇಕಾಗುತ್ತದೆ.

ಈ ಸ್ಕಾಲರ್ ಶಿಪ್ ಗಾಗಿ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು ಹೀಗಿವೆ:
ಅರ್ಜಿದಾರರ ಫೋಟೋ, ಗುರುತಿನ ಆಧಾರ, ವಿಳಾಸದ ಪುರಾವೆ, 10ನೇ, 12ನೇ, ಮತ್ತು ಪದವಿ ಅಂಕಪಟ್ಟಿ, ಹಿಂದಿನ ಶೈಕ್ಷಣಿಕ ಅಂಕ ಪಟ್ಟಿ, ಆದಾಯ ಪ್ರಮಾಣಪತ್ರ, ಐಟಿಆರ್, ಸಂಬಳ ಪ್ರಮಾಣಪತ್ರ, ಫಾರ್ಮ್ 16 ವಿದ್ಯಾರ್ಥಿ ಬ್ಯಾಂಕ್ ಪಾಸ್ಬುಕ್ ಜೊತೆಗೆ ಪ್ರಸ್ತುತ ವರ್ಷದ ಕಾಲೇಜು ಶುಲ್ಕ ರಸೀದಿ ಶುಲ್ಕ ಇನ್ನಿತರ ಮಾಹಿತಿ ನೀಡಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳು ಈ ವಿಧಾನ ಅನುಸರಿಸಿ:
ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು. ಇಲ್ಲಿ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಬಹುದು. ಕ್ಲಿಕ್ ಮಾಡಿದ ನಂತರ ಮುಖ ಪುಟ ತೆರೆಯುತ್ತದೆ. ಆ ಬಳಿಕ, ಅಗತ್ಯ ದಾಖಲೆಗಳನ್ನು ನೀಡಬೇಕು. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಬೇಕು. ಇದರ ಜೊತೆಗೆ ಬ್ಯಾಂಕ್​ ಖಾತೆ ನಂಬರ್​ ಸರಿಯಾಗಿ ನೀಡಬೇಕು.ಐ ಎಫ್ ಎಸ್​ ಇ ಕೋಡ್​ ಹಾಕಬೇಕಾಗುತ್ತದೆ.

Leave A Reply

Your email address will not be published.