ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

Share the Article

ಈಗಾಗಲೇ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳನ್ನು ನಿಯಮ ಬಾಹಿರವಾಗಿ ನಿಯೋಜನೆ ಗೊಳಿಸಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ. ಈ ಕುರಿತಾಗಿ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳನ್ನು ನಿಯಮ ಬಾಹಿರವಾಗಿ ನಿಯೋಜನೆ ಮಾಡಿರುವುದನ್ನು ರದ್ದೂಗೊಳಿಸಲು ಶಿಕ್ಷಣ ಇಲಾಖೆ ಆದೇಶಿಸಿದೆ.

ಪ್ರಸ್ತುತ ರಾಜ್ಯದ ಹಲವು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರುಗಳನ್ನು ನಿಯಮ ಬಾಹಿರವಾಗಿ ನಿಯೋಜನೆಗೊಳಿಸಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು ಈ ಹಿನ್ನಲೆಯಲ್ಲಿ ನಿಯಮಬಾಹಿರವಾಗಿ ಮಾಡಿರುವ ಎಲ್ಲಾ ಶಿಕ್ಷಕರ ನಿಯೋಜನೆಗಳನ್ನು ಕೂಡಲೇ ರದ್ದುಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ನೀಡಿದ್ದಾರೆ.

ಅದಲ್ಲದೆ ಒಂದು ವೇಳೆ ಶಿಕ್ಷಕರ ನಿಯೋಜನೆಗಳನ್ನು ಎಲ್ಲಾ ಉಪ ನಿರ್ದೇಶಕರು ರದ್ದು ಪಡಿಸಿ, ಈಗಾಗಲೇ ಕೈಗೊಂಡಿರುವ ಕ್ರಮದ ಬಗ್ಗೆ ಇಲಾಖೆಗೆ ಮಾಹಿತಿ ನೀಡದೇ ಇದ್ದರೆ ಅಂತಹ ಜಿಲ್ಲಾ ಉಪ ನಿರ್ದೇಶಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

Leave A Reply