Whatsapp Features: ಕ್ರಿಸ್‌ಮಸ್ ಟೋಪಿ ವಾಟ್ಸಪ್ ಐಕಾನ್ ಮೇಲೆ | ಹೇಗೆ ಹಾಕೋದು ಅಂತೀರಾ ? ಇಲ್ಲಿದೆ ಟ್ರಿಕ್ಸ್
ವಿಶ್ವದಲ್ಲಿಂದು ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಅಪ್ಲಿಕೇಶನ್ ಆಗಿ ಬೆಳೆದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ (WhatsApp) ದಿನಕ್ಕೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುತ್ತಿರುವ ವಾಟ್ಸ್ಆ್ಯಪ್ ಜನರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಯಾವುದೇ ಹಬ್ಬ (Festival) ಬಂದಾಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಫೋಟೊ ಇಲ್ಲವೇ ಸ್ಟೇಟಸ್ ಹಾಕುವುದು ಟ್ರೆಂಡ್ (Trend) ಆಗಿದೆ. ಅದೇ ರೀತಿ ಹಬ್ಬಗಳ ಸಂದರ್ಭ ಸೋಶಿಯಲ್ ಮೀಡಿಯಾ ಮೂಲಕ ಮೂಲಕ ವಿಡಿಯೋ ಹಾಕುವ ಇಲ್ಲವೇ ಫೋಟೋ ಹಾಕುವುದು, ಇಲ್ಲದಿದ್ದರೆ ಡಿಪಿ ಹಾಕುವ ಮೂಲಕ ಆಚರಣೆ ಮಾಡೋದು ಕಾಮನ್. ಆದರೆ, ನಾಳೆಯೇ ಅಂದ್ರೆ ಡಿಸೆಂಬರ್ 25 ಕ್ಕೆ ಕ್ರಿಸ್‌ಮಸ್ (Christmus) ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇದೀಗ, ನೀವು ಕೂಡ ವಾಟ್ಸಪ್ನಲ್ಲಿ ಸ್ಪೆಷಲ್ ಆಗಿ ಆಚರಿಸಬಹುದು. ಅರೇ ಹೌದಾ?? ಅದು ಹೇಗೆ ಅಂತೀರಾ??
ಕೆಲವು ಆ್ಯಪ್ಗಳು ಹಬ್ಬದ ಸಂದರ್ಭದಲ್ಲಿ ಹೊಸ ಫೀಚರ್ಸ್ಗಳನ್ನು ಬಿಡುಗಡೆ ಮಾಡುತ್ತವೆ. ಅದೇ ರೀತಿ ಈ ಬಾರಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ವಾಟ್ಸಪ್ ಐಕಾನ್ನಲ್ಲಿ ಕ್ರಿಸ್‌ಮಸ್ ಟೋಪಿ ಹಾಕುವಂತಹ ಫೀಚರ್ಸ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಹೇಗೆ ಸೆಟ್ ಮಾಡುವುದು ಎಂಬ ಕುತೂಹಲಕಾರಿ ಸಂಗತಿ ನಾವು ಹೇಳ್ತೀವಿ ಕೇಳಿ!!
ವಾಟ್ಸಪ್ ಐಕಾನ್ನಲ್ಲಿ (Whatsapp Icon) ನೀವು ಕ್ರಿಸ್‌ಮಸ್ ಟೋಪಿಯನ್ನು ಹಾಕುವ ಮೂಲಕ ಈ ಬಾರಿ ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮಿಸಬಹುದಾಗಿದೆ. ಆದರೆ ವಾಟ್ಸಪ್ ಐಕಾನ್ಗೆ ಕ್ರಿಸ್‌ಮಸ್ ಟೋಪಿ ಹಾಕಲು ಕೆಲವೊಂದು ಸಿಂಪಲ್ ಟಿಪ್ಸ್ಗಳಿವೆ.
ವಾಟ್ಸಪ್ನಲ್ಲಿ ಇದುವರೆಗೆ ಹಲವಾರು ಫೀಚರ್ಸ್ಗಳು ಬಿಡುಗಡೆಯಾಗಿದೆ. ಆದರೆ ವಾಟ್ಸಪ್ ಐಕಾನ್ ಅನ್ನು ಕಸ್ಟಮೈಸ್ ಮಾಡುವಂತಹ ಫೀಚರ್ಸ್ ಇದುವರೆಗೆ ಬಿಡುಗಡೆ ಮಾಡಲಾಗಿಲ್ಲ. ಆದ್ದರಿಂದ ಈ ಐಕಾನ್ಗಳನ್ನು ಕಸ್ಟಮೈಸ್ ಮಾಡಬೇಕಾದರೆ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
ಆಂಡ್ರಾಯ್ಡ್ ಬಳಕೆದಾರರು ತಮ್ಮಲ್ಲಿರುವಂತ ಆ್ಯಪ್ಗಳ ಐಕಾನ್ಗಳನ್ನು ತಮಗೆ ಬೇಕಾದಂತೆ ಬದಲಾಯಿಸಲು ಹಲವಾರು ಲಾಂಚರ್ಗಳು ಗೂಗಲ್ ಪ್ಲೇ ಸ್ಟೋರ್ನಿಂದ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಸದ್ಯ ಈ ಲಾಂಚರ್ಗಳಲ್ಲಿ ಬಹಳ ಖ್ಯಾತಿ ಗಳಿಸಿರುವ ಹಾಗೂ ಯೋಗ್ಯವಾಗಿರುವ ಆ್ಯಪ್ ನೋವಾ ಲಾಂಚರ್ ಆಗಿದ್ದು, ಈ ಆ್ಯಪ್ ಮೂಲಕ ವಾಟ್ಸಪ್ ಐಕಾನ್ ಅನ್ನು ಬಳಕೆದಾರರಿಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ. ಆದರೆ ಅದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಇದು ನಿಮ್ಮ ವಾಟ್ಸಪ್ ಐಕಾನ್ ಅನ್ನು ಕಸ್ಟಮೈಸ್ ಮಾಡಲಿರುವಂತಹ ಸ್ಪೆಷಲ್ ಫೀಚರ್ ಆಗಿದೆ.
ಮೊದಲಿಗೆ ನಿಮ್ಮ ವಾಟ್ಸಪ್ ಐಕಾನ್ನಲ್ಲಿ ಯಾವ ಚಿತ್ರವನ್ನು ಹಾಕಬೇಕು ಇಲ್ಲವೇ ಅದರಲ್ಲಿ ಯಾವುದೆಲ್ಲ ಡಿಸೈನ್ಗಳು ಬೇಕು ಎಂಬುದನ್ನು ಗಮನಿಸಬೇಕು. ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಬ್ರೌಸರ್ನಲ್ಲಿ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ನಿಮಗೆ ಬೇಕಾದ ಹಾಗೆ ಸೆಟ್ ಮಾಡಿಟ್ಟುಕೊಳ್ಳಬೇಕು.
ಡೌನ್‌ಲೋಡ್ ಮಾಡಿಟ್ಟುಕೊಂಡ ಬಳಿಕ ನೀವು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿರುವ ನೋವಾ ಆ್ಯಪ್ ಅನ್ನು ಓಪನ್ ಮಾಡಿಕೊಂಡು ಅದರಲ್ಲಿ ಕೇಳಲಾಗುವ ಷರತ್ತನ್ನು ಓದಿಕೊಂಡು ಸಮ್ಮತಿ ಸೂಚಿಸಬೇಕು. ವಾಟ್ಸಾಪ್ ಐಕಾನ್ ಬಳಿ ಬಂದು ಅದನ್ನು ಕೆಲವು ಸೆಕೆಂಡುಗಳ ಕಾಲ ಹಾಗೆ ಟ್ಯಾಪ್ ಮಾಡಿ ಹಿಡಿದಿಟ್ಟುಕೊಳ್ಳಬೇಕು.
ಈ ರೀತಿ ಹಿಡಿದಿಟ್ಟ ಮೇಲೆ ನಿಮಗೆ ಎಡಿಟ್ ಬಟನ್ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಬೇಕು. ಬಳಿಕ, ಈಗಾಗಲೇ ಡೌನ್‌ಲೋಡ್ ಮಾಡಲಾದ ಚಿತ್ರವನ್ನು ಆರಿಸಿಕೊಳ್ಳಬೇಕು. ಈ ಬಳಿಕ ನಿಮಗೆ ಬೇಕಾದ ಹೇಗೆ ಕಸ್ಟಮೈಸ್ ಮಾಡಿಕೊಳ್ಳಬೇಕು.
ನಿಮ್ಮ ವಾಟ್ಸಾಪ್ ಲೋಗೋ ಸುಂದರವಾಗಿ ಕಾಣುವುದನ್ನು ಗಮನಿಸಬಹುದು.ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ನಲ್ಲಿ ಪ್ರಸ್ತುತವಾಗಿ ಇರಬಹುದಾದ ಯಾವುದೇ ಆ್ಯಪ್ನ ಐಕಾನ್ ಅನ್ನು ಕೂಡ ಕಸ್ಟಮೈಸ್ ಮಾಡಿಕೊಳ್ಳಬಹುದಾಗಿದೆ.