ಬೆಳಂದೂರು : ಅತ್ತೆ ,ಅತ್ತಿಗೆಯಿಂದ ಮಹಿಳೆಗೆ ವರದಕ್ಷಿಣೆ ಕಿರುಕುಳ ,ಜೀವ ಬೆದರಿಕೆ ,ಕತ್ತಿಯಿಂದ ಹಲ್ಲೆ-ಆರೋಪ

Share the Article

ಕಡಬದಲ್ಲಿ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿ ಅತ್ತೆ ಮತ್ತು ಅತ್ತಿಗೆ ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿ ಆರೋಪಿಸಿದ್ದಾರೆ.

ಬೆಳಂದೂರು ಗ್ರಾಮದ ಅಮೈ ನಿವಾಸಿ ಕುಲದೀಪ್ ಅವರ ಪತ್ನಿ ಸರಸ್ವತಿ ಎಂಬವರ ಮೇಲೆ ಕುಲದೀಪ್ ಅವರ ತಾಯಿ ಬಾಲಕಿ ಮತ್ತು ಅಕ್ಕ ಯಶೋಧಾ ಅವರು ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ ಜೀವ ಬೆದರಿಕೆಯೊಡ್ಡಿ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಸರಸ್ವತಿ ಆರೋಪಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಸರಸ್ವತಿ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

Leave A Reply