ಮೇಕಪ್ ಗೆ ಖರ್ಚು ಮಾಡಲು ಹಣ ಕೊಡದ ಗಂಡ | ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ ಹೆಂಡತಿ

Share the Article

ಯಾವ ಹೆಣ್ಣಿಗೆ ಮೇಕಪ್ ಮಾಡೋದು ಇಷ್ಟವಿಲ್ಲ ಹೇಳಿ? ಎಲ್ಲರೂ ಇಷ್ಟ ಪಡುತ್ತಾರೆ. ಅಲ್ವಾ? ಆದರೆ ಗಂಡಸರು ಅಂತಹ ಒಂದು ಬ್ಯೂಟಿ ಕೇರ್ ಮಾಡಲ್. ಜಾಸ್ತಿ ಎಂದರೆ ಸಲೂನ್ ಗೆ ಹೋಗಿ ಹೇರ್ ಸ್ಟೈಲ್ ಮಾಡಿಕೊಂಡು ಬರುತ್ತಾರೆ.

ಮಹಿಳೆಯರಿಗೂ ಮೇಕಪ್‌ಗೂ ಅವಿನಾಭಾವ ಸಂಬಂಧ ಅಂತ ಹೇಳಿದ್ರೆ ತಪ್ಪಾಗೋಲ್ಲ ಬಿಡಿ. ಕೆಲವರಂತೂ ವಿತೌಟ್ ಮೇಕಪ್ ಮನೆಯಿಂದ ಕಾಲೇ ಇಡಲ್ಲ. ಆದರೆ ಈಗ ಇದೇ ಕಾರಣಕ್ಕೆ ಗಂಡ‌ ಹೆಂಡತಿಯ ಸಂಸಾರ ಹಾಳಾಗಿದೆ ಎಂದರೆ ನಂಬುತ್ತೀರಾ? ನಂಬಬೇಕು. ‘ತನ್ನ ಪತಿ ಬ್ಯೂಟಿಪಾರ್ಲ‌್ರಗೆ ಹೋಗಲು ಎಷ್ಟು ಕೇಳಿದ್ರೂ ಹಣ ನೀಡ್ತಾ ಇಲ್ಲ ಎಂಬ ಕಾರಣದಿಂದಾಗಿ ಡಿವೋರ್ಸ್ ಅಪ್ಲೈ ಮಾಡಿದ್ದಾರೆ.

ಈ ಮಹಿಳೆಯ ಪತಿ ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಮದುವೆ ಆದ ಹೊಸತರಲ್ಲಿ ಈ ದಂಪತಿಗಳು ಚೆನ್ನಾಗಿಯೇ ಇದ್ದರು. ಲವಲವಿಕೆಯಿಂದ, ಖುಷಿಖುಷಿಯಾಗಿ ಇದ್ದರು. ಆದರೆ 3 ವರ್ಷಗಳ ಹಿಂದೆ ಇವರಿಬ್ಬರ ನಡುವೆ ಜೋರಾದ ಜಗಳವಾಯ್ತು. ಇದಾದ ನಂತರದಲ್ಲಿ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಾ ಇದ್ದರು. ದಂಪತಿಗಳಿಗೆ ಇನ್ನೂ ಮಕ್ಕಳು ಆಗಿಲ್ಲ. ಒಟ್ಟಿಗೆ ಇದ್ರೆ ಜಗಳವಾಗುತ್ತೆ ನನಗೆ ಬೇಕಾದ ಯಾವ ವಸ್ತುಗಳನ್ನು ತೆಗೆಸಿಕೊಡುವುದಿಲ್ಲ ಎಂದು ಮಹಿಳೆ ಹೇಳುತ್ತಾಳೆ.

ಈ ಮೇಕಪ್ ವಿಷಯದಿಂದಾಗಿಯೇ ವಿಚ್ಛೇದನವನ್ನು ಕೋರ್ಟ್‌ಗೆ ಅಪ್ಲೈ ಮಾಡಿದ್ದಾರೆ. ಈಗ ಇವರನ್ನು ನ್ಯಾಯಾಲಯದಲ್ಲಿ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ.
ಈ ಒಂದು ಕ್ಷುಲ್ಲಕ ಕಾರಣಗಳಿಂದ ಒಂದು ದಾಂಪತ್ಯ ಜೀವನವೇ ಬೇರೆಯಾಗೋ ಮಟ್ಟಕ್ಕೆ ಹೋಗಿದೆ.

Leave A Reply