ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ | PM Kisan 13ನೇ ಕಂತಿಗೂ ಮುನ್ನವೇ ಮತ್ತೊಂದು ಶುಭ ಸುದ್ದಿ

ರೈತ ನಮ್ಮ ದೇಶದ ಬೆನ್ನೆಲುಬು. ಹೌದು ಪ್ರಸ್ತುತ ಸರ್ಕಾರ ರೈತರಿಗೆ ಸಹಾಯ ಮಾಡಿದಷ್ಟು ಮುಂದೆ ರೈತರು ಅದರ ಹತ್ತು ಪಟ್ಟಿನಷ್ಟು ದೇಶಕ್ಕೆ ನೆರವಾಗುತ್ತಾರೆ. ಹೌದು ಆದ್ದರಿಂದ ಇದೀಗ ರೈತರ ನೆರವಿಗೆ ಮುಂದಾಗಿದೆ. ಸದ್ಯ ಸರ್ಕಾರದ ಈ ರೈತರ ಪ್ರಯೋಜನಕಾರಿ ಯೋಜನೆಯಲ್ಲಿ ಆಯ್ಕೆಯಾಗುವ ಯಾವುದೇ ರೈತಬಾಂಧವನಿಗೆ ಇದರಿಂದ ಎರಡು ರೀತಿಯಲ್ಲಿ ಲಾಭವಾಗಲಿದೆ. ಮೊದಲನೆಯದು ಪಿಎಂ ಕಿಸಾನ್ ಸಮಾನ್ ನಿಧಿ ರೂಪದಲ್ಲಿ ಮತ್ತು ಎರಡನೆಯದು ಬೀಜಗಳ ಮೇಲಿನ ಸಬ್ಸಿಡಿ ರೂಪದಲ್ಲಿ ಅಂದರೆ ಉತ್ತಮ ಗುಣಮಟ್ಟದ ಬೀಜಗಳನ್ನು ರೈತರಿಂದಲೇ ರೈತರಿಗೆ ತಲುಪಿಸುವ ಉದ್ದೇಶ ಕೃಷಿ ಇಲಾಖೆ ಹೊಂದಿದೆ. ಸರ್ಕಾರದ ವತಿಯಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಶೇ.90 ರಷ್ಟು ಸಬ್ಸಿಡಿ ಮೂಲಕ ವಿತರಿಸಲಾಗುತ್ತಿದೆ..

ಈಗಾಗಲೇ ಸೆಪ್ಟೆಂಬರ್‌ನಲ್ಲಿ, ಪಿಎಂ ಕಿಸಾನ್‌ನ 12 ನೇ ಕಂತನ್ನು ಸರ್ಕಾರವು ರೈತರ ಖಾತೆಗೆ ವರ್ಗಾಯಿಸಿತ್ತು ಎಂಬುದು ಇಲ್ಲಿ ಗಮನಾರ್ಹ. 13ನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಸಿಗಬೇಕಿದೆ. 13ನೇ ಕಂತಿನ ಹಣ ಜನವರಿ 26ರೊಳಗೆ ರೈತರ ಖಾತೆಗೆ ಬರಲಿದೆ ಎಂದು ಮೂಲಗಳು ಹೇಳಿವೆ. ಆದರೆ ಇದಕ್ಕೂ ಮುನ್ನವೇ ಬಿಹಾರದ ನಿತೀಶ್ ಸರ್ಕಾರ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ. ಹೌದು ರೈತರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದ ಬಿಹಾರ ಸರ್ಕಾರ, ಉತ್ತಮ ಗುಣಮಟ್ಟದ ಬೀಜಗಳ ಮೇಲೆ ಭಾರಿ ಸಬ್ಸಿಡಿ ನೀಡುವುದಾಗಿ ಹೇಳಿದೆ .

ನಿತೀಶ್ ಸರ್ಕಾರವು ‘ಮುಖ್ಯಮಂತ್ರಿಗಳ ತ್ವರಿತ ಬೀಜ ವಿತರಣೆ ಯೋಜನೆ’ ಅಡಿಯಲ್ಲಿ ರೈತರಿಗೆ ಈ ಸೌಲಭ್ಯವನ್ನು ನೀಡುತ್ತಿದೆ. ಗುಣಮಟ್ಟದ ಬೀಜಗಳನ್ನು ರೈತರಿಂದ ರೈತರಿಗೆ ತಲುಪಿಸುವುದು ರಾಜ್ಯ ಕೃಷಿ ಇಲಾಖೆಯ ಉದ್ದೇಶವಾಗಿದೆ. ರೈತರಿಗೆ ಸರಕಾರದಿಂದ ಉತ್ತಮ ಗುಣಮಟ್ಟದ ಬೀಜಗಳ ಮೇಲೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

ಈ ಯೋಜನೆಯ ಪ್ರಕಾರ, ಅರ್ಧ ಎಕರೆ ಭೂಮಿಗೆ ಭತ್ತ ಮತ್ತು ಗೋಧಿ ಬೀಜಗಳ ವೆಚ್ಚದಲ್ಲಿ ಪ್ರತಿ ಕೆಜಿಗೆ ಶೇ.90 ರಷ್ಟು ಅಥವಾ ಗರಿಷ್ಠ 40 ರೂ.ಗಳ ಸಹಾಯಧನವನ್ನು ನೀಡಲಾಗುತ್ತಿದೆ. ಇದೇ ವೇಳೆ, ಕಾಲು ಎಕರೆ ಜಮೀನಿನಲ್ಲಿ ದ್ವಿದಳ ಧಾನ್ಯಗಳ ಬೆಳೆಗೆ ಬೆಲೆಯ ಮೇಲೆ ಕೆಜಿಗೆ 108 ರೂ ಸಹಾಯಧನ ನೀಡುವ ಯೋಜನೆಯನ್ನು ಹೊಂದಲಾಗಿದೆ. ಈ ಮಾಹಿತಿಯನ್ನು ಬಿಹಾರ ಸರ್ಕಾರ ಟ್ವೀಟ್ ಮಾಡುವ ಮೂಲಕ ನೀಡಿದೆ.

ಮುಖ್ಯಮಂತ್ರಿ ತ್ವರಿತ ಬೀಜ ವಿತರಣೆ ಯೋಜನೆಯಡಿ ಆಯ್ಕೆಯಾದ ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತ ಮತ್ತು ಗೋಧಿ ಬೀಜಗಳನ್ನು ಒದಗಿಸಲಾಗುವುದು ಎನ್ನಲಾಗಿದೆ. ಯೋಜನೆಯಲ್ಲಿ ರೈತರ ಆಯ್ಕೆಯನ್ನು ಅರ್ಹತೆಯ ಆಧಾರದ ಮೇಲೆ ನಡೆಸಲಾಗುವುದು ಎಂದೂ ಕೂಡ ಹೇಳಲಾಗಿದೆ.

ನೀವು ಸಹ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ, ಮೊದಲು ನೀವು ಆನ್‌ಲೈನ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಇನ್ನು ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು 18001801551 ಸಂಖ್ಯೆಗೆ ಕರೆ ಮಾಡುವ ಮೂಲಕ ಪಡೆದುಕೊಳ್ಳಬಹುದು.

Leave A Reply

Your email address will not be published.