ಜ.1 ರಿಂದ ಶಾಲೆಗಳಿಗೆ ಚಳಿಗಾಲದ ರಜೆ!

ಶಿಕ್ಷಣ ನಿರ್ದೇಶನಾಲಯ ಶಾಲಾ ಮಕ್ಕಳಿಗೆ ಸಂಬಂಧಿಸಿದ ಮಹತ್ವದ ಸೂಚನೆ ನೀಡಿದೆ. ಹೌದು!! ಚಳಿಗಾಲದ ರಜೆಯ ಸಲುವಾಗಿ ದೆಹಲಿಯ ಎಲ್ಲ ಸರ್ಕಾರಿ ಶಾಲೆಗಳು ಜನವರಿ 1 ರಿಂದ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತವೆ ಎಂಬುದಾಗಿ ಶಿಕ್ಷಣ ನಿರ್ದೇಶನಾಲಯ ಗುರುವಾರ ಆದೇಶ ಹೊರಡಿಸಿದೆ.

 

“ಚಳಿಗಾಲದ ಹಿನ್ನೆಲೆ ಶಿಕ್ಷಣ ನಿರ್ದೇಶನಾಲಯದ ಅಡಿ ಬರುವ ಎಲ್ಲಾ ಸರ್ಕಾರಿ ಶಾಲೆಗಳು ಜನವರಿ 1, 2023 ರಿಂದ ಜನವರಿ 15, 2023 ರವರೆಗೆ ರಜೆ ಇದ್ದು, ಆದರೆ, ಪಠ್ಯಕ್ರಮಗಳನ್ನು ಪರಿಷ್ಕರಿಸಲು ಜೊತೆಗೆ ವಿದ್ಯಾರ್ಥಿಗಳ ಕಲಿಕಾ ಮಟ್ಟದ ಶೈಕ್ಷಣಿಕ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ 9 ನೇ ತರಗತಿಯಿಂದ 12 ನೇ ತರಗತಿಯವರಿಗೆ ಪರಿಹಾರ ತರಗತಿಗಳನ್ನು ನಡೆಸಲಾಗುತ್ತದೆ ” ಎಂದು ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.

ಹಾಗಾಗಿ, ಈ ತರಗತಿಗಳು ಜನವರಿ 2 ರಿಂದ ಜನವರಿ 14 ರವರೆಗೆ ನಡೆಯಲಿದ್ದು, ಪರಿಹಾರ ತರಗತಿಗಳನ್ನು ಪರೀಕ್ಷೆಯನ್ನು ಕೇಂದ್ರೀಕರಿಸಿ ಆ ದೃಷ್ಟಿಕೋನದಿಂದ ನಡೆಸಲಾಗುತ್ತದೆ.

ಇದರ ಜೊತೆಗೆ ಎರಡು ಪಾಳಿಯಲ್ಲಿ ತರಗತಿಗಳು ನಡೆಯಲಿದ್ದು, ಈ ವೇಳೆ ಸ್ಥಳಾವಕಾಶದ ಕೊರತೆ ಉಂಟಾದರೆ, ಸಂಜೆ ಪಾಳಿಯ ಶಾಲೆಗಳ ಮುಖ್ಯಸ್ಥರು ಸಂಬಂಧಪಟ್ಟ ಶಿಕ್ಷಣದ ಉಪ ನಿರ್ದೇಶಕರನ್ನು (ಡಿಡಿಇ) ಸಂಪರ್ಕಿಸಲು ಸೂಚಿಸಲಾಗಿದೆ. ಜಿಲ್ಲೆ ಮತ್ತು ಶಾಲೆಗೆ ಅನುಸಾರವಾಗಿ ಸಂಜೆ ಸಮಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

Leave A Reply

Your email address will not be published.