ಬೆಳ್ತಂಗಡಿ । ಕಿಸ್ ಆಂಡ್ ಹಗ್​ ಭಾಗಿಯಾದ ಹುಡುಗ ಕೊನೆಗೂ ಕಾಲೇಜಿನಿಂದ ಸಸ್ಪೆ೦ಡ್, ‘ ಸಮಾನ ನ್ಯಾಯ ‘ ಒದಗಿಸಿ ಕೊಟ್ಟ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮ !

ಮಂಗಳೂರು : ಕರಾವಳಿ ಭಾಗದಲ್ಲಿ ಇತ್ತೀಚೆಗೆ ಈ ಲವ್‌ಜಿಹಾದ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಈ ನೈತಿಕ/ ಅನೈತಿಕ ಪೊಲೀಸ್‌ ಗಿರಿ ನಡೆಯುವ ಘಟನೆಗಳು ನಡೆಯುತ್ತಲೇ ಇದೆ. ಈ ಘಟನೆಗಳಿಗೆ ಈಗ ಇನ್ನೊಂದು ಪ್ರಕರಣ ಸೇರಿದೆ. ಹೌದು, ಬೆಳ್ತಂಗಡಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಲವ್‌ ಜಿಹಾದ್‌ ನಂತಹ ಘಟನೆಗಳು ನಡೆಯುತಿದ್ದು, ಇದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳು ಲಭ್ಯವಾಗಿದ್ದು, ದೂರುಗಳು ಕೇಳಿ ಬರುತ್ತಿತ್ತು.

ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ಮಾಜಿ ಶಾಸಕ ವಸಂತ್ ಬಂಗೇರಾ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದ ವೇಳೆ ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿ ಹಾಗೂ ಹಿಂದೂ ವಿದ್ಯಾರ್ಥಿನಿ ಹಗ್ ಮಾಡಿ ಕಿಸ್ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ‌ಯಾಗುತ್ತಿದೆ.

ಅದರಲ್ಲೂ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸೇರಿದ ಕಾಲೇಜಿನಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು ಬೇಸರದ ಸಂಗತಿಯೇ ಸರಿ. ಪ್ರತಿಷ್ಠಿತ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿ ಹಿಂದೂ ಯುವತಿಗೆ ರಾಜಾರೋಷವಾಗಿ ರಸ್ತೆಯಲ್ಲಿ ಹಗ್, ಕಿಸ್‌ ಮಾಡಿದ್ದು ನಂತರ ಈ ಪ್ರಕರಣ ಕಾಲೇಜಿನ ಆಡಳಿತ ಮಂಡಳಿಗೂ ಹೋಗಿದ್ದು, ಕೊನೆಗೆ ಹುಡುಗಿಯ ಪೋಷಕರನ್ನು ಕರೆತರಲಾಗಿದ್ದು, ಆಕೆ ಹೊರ ಊರಿನವಳಾಗಿದ್ದರಿಂದ ಆಕೆಯನ್ನು ಆಕೆಯ ಪೋಷಕರು ಕರೆದುಕೊಂಡು ಹೋಗಿದ್ದು, ನಂತರ ಆಕೆಯನ್ನು ಕಾಲೇಜಿನಿಂದ ಸಸ್ಪೆಂಡ್ ಕೂಡಾ ಮಾಡಲಾಗಿತ್ತು.

ಆದರೆ ಈ ಕೃತ್ಯ ಎಸಗಿದ ಅಶ್ವಿರ್ ಎನ್ನುವ ವಿದ್ಯಾರ್ಥಿಯನ್ನು ಮಾತ್ರ ನಿನ್ನೆ ಸಂಜೆಯವರೆಗೆ ಡಿಬಾರ್‌ ಮಾಡಿರಲಿಲ್ಲ. ವಿದ್ಯಾರ್ಥಿನಿಯನ್ನು ಡಿಬಾರ್‌ ಮಾಡಿದ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಏಕೆ ಡಿಬಾರ್‌ ಮಾಡಿಲ್ಲ ಎಂದು ಮಾಧ್ಯಮದಲ್ಲಿ ಬಂದ ಬಳಿಕ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತು ಈ ವಿದ್ಯಾರ್ಥಿಯನ್ನು ನಂತರ ಕಾಲೇಜಿನಿಂದ ಸಸ್ಪೆಂಡ್ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ.

ಸದ್ಯ ಕಾಲೇಜು ಆಡಳಿತ ಮಂಡಳಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಚರ್ಚೆ ಮಾಡುತ್ತಿರುವವರ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದೆ. ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದಾಗಿ ಆಡಳಿತ ಮಂಡಳಿ ದೂರಿನಲ್ಲಿ ಉಲ್ಲೇಖಿಸಿದೆ ಎನ್ನಲಾಗಿದೆ. ಮೊದಲೇ ದಕ್ಷಿಣ ಕನ್ನಡ ಕೋಮು ವಿಷಯದಲ್ಲಿ ಸೂಕ್ಷ್ಮ ಪ್ರದೇಶ. ಇಲ್ಲಿ ಎಲ್ಲರನ್ನೂ ಒಳ್ಳೆಯವರೆಂದು ನಂಬುವ ಹಿಂದೂ ಹುಡುಗಿಯರ ತಲೆಕೆಡಿಸಿ ಲವ್ ಜಿಹಾದ್ ಮಾಡಲಾಗುತ್ತಿದೆ ಎನ್ನುವ ಕೂಗು ಅತ್ತ ಹಿಂದೂಪರ ಸಂಘಟನೆಗಳಿಂದ ನಿರಂತರವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ದೇಶಾದ್ಯಂತ ಹಿಂದೂ ಹುಡುಗಿಯರ ಮಾರಣ ಹೋಮ ನಡೀತಿದೆ. ದೆಹಲಿಯ ಶ್ರದ್ಧಾ ವಾಕರ್ ಒಂದು ಸಣ್ಣ ಉದಾಹರಣೆ ಅಷ್ಟೇ.

ಹೀಗಿರುವಾಗ ಅನ್ಯ ಕೋಮಿನ ಜೋಡಿಗಳ ನಡೆಗಳಿಗೆ ಸಹಜವಾಗಿ ವಿರೋಧ ಕಂಡು ಬಂದಿದೆ ಎನ್ನಬಹುದು. ವಿದ್ಯಾ ಮಂದಿರಗಳಲ್ಲಿ ಇನ್ನೂ ಪಿಯುಸಿ ಓದುತ್ತಿರುವ ಹುಡುಗರು ಹಗ್ ಕಿಸ್ ಮಾಡುತ್ತಿದ್ದಾರೆ, ಅದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದ ಆಡಳಿತ ಮಂಡಳಿ ಈಗ ಕೊನೆಗೆ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಚರ್ಚೆಗೆ ಹೊರಟವರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆಡಳಿತ ಮಂಡಳಿಯ ಅತ್ಯಂತ ಬೇಜಾವಾಬ್ದಾರಿಯ ನಡೆ ಎಂದು ವಿಶ್ಲೇಷಿಸಲೇ ಬೇಕಾಗಿದೆ. ಅಲ್ಲಿ ಇಂತಹಾ ಹಲವು ಘಟನೆಗಳು ನಡೆದರೂ ಅದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದ ಆಡಳಿತ ಮಂಡಳಿಯ ಮೇಲೆ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎನ್ನುವುದು ಸಾರ್ವತ್ರಿಕವಾಗಿ ಕೇಳಿಬರುತ್ತಿರುವ ಮಾತು.

ಸ್ಪಷ್ಟ ಸಾಕ್ಷಿಗಳು ಇದ್ದರೂ ಇನ್ನೊಬ್ಬರ ಮೇಲೆ ಗೂಬೆ ಕೂರಿಸಲು ಹೊರಟ ಆಡಳಿತ ಮಂಡಳಿ ಪ್ರಾಜ್ಞರಾಗಿ ಕುಳಿತು ಯೋಚಿಸಬೇಕು : ಸಮಾಜದ ಮನಸ್ಸು ಕದಡಬಲ್ಲ ಇಂತಹಾ ಘಟನೆಗಳು ನಡೆದಾಗ ಧರ್ಮಾತೀತವಾಗಿ ನಿಂತು ನಿರ್ಧಾರ ತೆಗೆದುಕೊಳ್ಳುವಂತಾಗಲಿ ಎನ್ನುವುದು ಇವತ್ತಿನ ನಿರೀಕ್ಷೆ. ಬೆಳ್ತಂಗಡಿಯ ಕಿಸ್ ಆಂಡ್ ಹಗ್​ ಭಾಗಿಯಾದ ಹುಡುಗಿಯನ್ನು ಸಸ್ಪೆನ್ಡ್ ಮಾಡಿದಂತೆ ಹುಡುಗನನ್ನ ಕೂಡಾ ಕಾಲೇಜಿನಿಂದ ಸಸ್ಪೆ೦ಡ್ ಮಾಡಿಸಿ ಕೊನೆಗೂ ‘ ಸಮಾನ ನ್ಯಾಯ ‘ ಒದಗಿಸಿ ಕೊಡುವಲ್ಲಿ ಸೋಷಿಯಲ್ ಮೀಡಿಯಾ ಮತ್ತು ಮಾಧ್ಯಮಗಳು ನಿರಂತರವಾಗಿ ಕೆಲಸ ಮಾಡಿವೆ.

Leave A Reply

Your email address will not be published.