ಸಾರ್ವಜನಿಕರೇ ಗಮನಿಸಿ | ಕೊರೊನಾ ಹಾವಳಿ ಪ್ರಕರಣ | ಹೊಸವರ್ಷಾಚರಣೆಗೆ ಬ್ರೇಕ್‌

ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಹೌದು!!.ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗುವ ಸಾಧ್ಯತೆ ಎದುರಾಗಿದ್ದು, ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿದೆ.

ಈ ಹಿಂದೆ ಅನೇಕ ಮಂದಿಯನ್ನು ಬಲಿ ಪಡೆದುಕೊಂಡ ಮಹಾಮಾರಿ ಕೋವಿಡ್ ಇದೀಗ, ಜಾಗತಿಕ ಮಟ್ಟದಲ್ಲಿ ಕೊರೊನಾ ಹರಡುತ್ತಿದ್ದು, ಅದರ ವೇಗವನ್ನು ಏರಿಸಿಕೊಳ್ಳುತ್ತಿದೆ. ಈ ಹಿನ್ನೆಲೆ ಕರ್ನಾಟಕ ಸರ್ಕಾರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಚೀನಾ ಮಹಾಮಾರಿ ಕೊರೊನಾ ವೈರಸ್ (Corona Virus) ಮತ್ತೆ ತನ್ನ ಆರ್ಭಟ ತೋರುವ ಭೀತಿ ಎದುರಾಗಿದೆ. ಈ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (Government) ಅಲರ್ಟ್​ ಆಗಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಮೂವರಿಗೆ ಓಮಿಕ್ರಾನ್ ಸೋಂಕು (Omicron) ತಗಲಿದ್ದು ಸೋಂಕು ದೃಢಪಟ್ಟಿದೆ.ಚೀನಾ ಮತ್ತು ಜಪಾನ್​ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದು, ಈ ನಿಟ್ಟಿನಲ್ಲಿ ಬೂಸ್ಟರ್ ಡೋಸ್ ನೀಡುವುದರ ಬಗ್ಗೆ ಕ್ರಮವಹಿಸಬೇಕಿದೆ ಎಂದು ಈ ವೇಳೆ ಸಚಿವರಾದ ಸುಧಾಕರ್ ಹೇಳಿದ್ದಾರೆ.

ಗುಜರಾತ್​​ನ ಇಬ್ಬರು ಹಾಗೂ ಒಡಿಶಾದ ಓರ್ವರಿಗೆ ಓಮಿಕ್ರಾನ ಸೋಂಕು ತಗಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇವರ ಜೊತೆ ಸಂಪರ್ಕದಲ್ಲಿದ್ದವರನ್ನೂ ಕೂಡ ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ಈ ಆತಂಕದ ವಾತಾವರಣದ ಹಿನ್ನೆಲೆ ಬೆಂಗಳೂರು ನಗರಕ್ಕೆ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ International Passengers) ಕೋವಿಡ್ ಟೆಸ್ಟ್​ (COVID Test) ಕಡ್ಡಾಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister K Sudhakar) ಮಾಹಿತಿ ನೀಡಿದ್ದಾರೆ.ಈ ನಿಯಮಗಳು ಜಾರಿಗೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮಾಹಿತಿ ನೀಡುತ್ತೇನೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

2022ರ ಆರಂಭದಲ್ಲಿ ಆತಂಕದಲ್ಲಿಯೇ ಹೊಸ ವರ್ಷದ ಆಚರಣೆ ಮಾಡಲಾಗಿದ್ದು, ಇದೀಗ ಮತ್ತೆ ಕೋವಿಡ್ ಹಾವಳಿ ಶುರುವಾಗಿದ್ದು, ಕೊರೊನಾ ಹಿನ್ನೆಲೆ ಬೆಂಗಳೂರಿನಲ್ಲಿ ಅದ್ಧೂರಿ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳಲಿದೆಯೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇದರ ಜೊತೆಗೆ ಹೊಸ ವರ್ಷದ ಆಚರಣೆಗೆ ಷರತ್ತು ಬದ್ಧ ಅನುಮತಿ ನೀಡುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಹೀಗಾಗಿ, ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೋವಿಡ್ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಕೈಗೊಳ್ಳಬೇಕಾದ ಕಟ್ಟೆಚ್ಚರದ ಬಗ್ಗೆ ಆರೋಗ್ಯ ಇಲಾಖೆ ಜೊತೆ ಸಿಎಂ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಬುಧವಾರ ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ, ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ದೇಶದಲ್ಲಿ ಕೋವಿಡ್‌ ವ್ಯಾಪಿಸದಂತೆ ಚೀನಾದಿಂದ ಬರುವ ಪ್ರಯಾಣಿಕರನ್ನ ಕಟ್ಟುನಿಟ್ಟಿನ ತಪಾಸಣೆಗೊಳಪಡಿಸಲಾಗುವ ಕುರಿತು ಚರ್ಚೆ ನಡೆಸಿದ್ದಾರೆ. ಸದ್ಯ ದೇಶದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ನಿನ್ನೆ ಸಭೆ ಮಾಡಿ ಮಹತ್ವ ವರದಿ ಆರೋಗ್ಯ ಇಲಾಖೆಗೆ ಸಲ್ಲಿಸಿದ್ದು, ರಾಜ್ಯದಲ್ಲಿ ಕೈಗೊಳ್ಳಬೇಕಾದ ಕಟ್ಟೆಚ್ಚರದ ಶಿಫಾರಸ್ಸುಗಳನ್ನು ತಾಂತ್ರಿಕ ಸಲಹಾ ಸಮಿತಿ ಮಾಡಿದೆ ಎನ್ನಲಾಗುತ್ತಿದೆ. ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿಯ ಜೊತೆಗೆ ನೆರೆ ದೇಶದಲ್ಲಿ ಆಗುತ್ತಿರುವ ಬದಲಾವಣೆ ಗಮನದಲ್ಲಿರಿಸಿ ಕೊವಿಡ್ ವರದಿ ತಯಾರಿಸಲಾಗಿದೆ.

Leave A Reply

Your email address will not be published.