ಜನರೇ ನಿಮಗೊಂದು ಗುಡ್ ನ್ಯೂಸ್ | ಬರೋಬ್ಬರಿ 107 ಔಷಧಗಳ ಬೆಲೆ ಇಳಿಕೆ ಮಾಡಿದ NPPA
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ.
ಹೌದು!!..ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಒಂದಲ್ಲ ಎರಡಲ್ಲ ಬರೋಬ್ಬರಿ 107 ಔಷಧಗಳ ಬೆಲೆಯನ್ನು ಮಿತಿಗೊಳಿಸಿರುವುದರಿಂದ ದೇಶಾದ್ಯಂತದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಹೀಗಾಗಿ, ಪ್ಯಾರಸಿಟಮಾಲ್’ನಿಂದ ಹಿಡಿದು ಕ್ಯಾನ್ಸರ್ ಔಷಧಿಗಳು ಕೂಡ ಅಗ್ಗದ ಬೆಲೆಯಲ್ಲಿ ಜನತೆಯ ಕೈಗೆ ಎಟಕುವ ದರದಲ್ಲಿ ಲಭ್ಯವಾಗಲಿದೆ.
ಈ ವರ್ಷ ಎರಡನೇ ಬಾರಿಗೆ ಪ್ಯಾರಸಿಟಮಾಲ್ ಸೇರಿ ಇತರ ಅಗತ್ಯ ಔಷಧಿಗಳಲ್ಲಿ ಕುಸಿತ ಕಂಡಿದ್ದು, ಆದರೂ ಕೂಡ ಮಾಂಟೆಲುಕಾಸ್ಟ್ ಮತ್ತು ಮೆಟ್ಫಾರ್ಮಿನ್’ನಂತಹ ಕೆಲವು ಔಷಧಿಗಳ ಬೆಲೆಗಳನ್ನು ಏರಿಕೆ ಮಾಡಲಾಗಿದೆ.
ಬೆಲೆಗಳನ್ನು ಪರಿಷ್ಕರಿಸಿದ 107 ಔಷಧಗಳ ಪಟ್ಟಿಯನ್ನು ಎನ್ಪಿಪಿಎ ಮಂಗಳವಾರ ಬಿಡುಗಡೆ ಮಾಡಿದೆ. ಇನ್ನು ಪ್ಯಾರಸಿಟಮಾಲ್, ಅಮೋಕ್ಸಿಸಿಲಿನ್, ರಬೆಪ್ರಜೋಲ್ ಮತ್ತು ಮೆಟ್ಫಾರ್ಮಿನ್’ನಂತಹ ಇತರ ಪ್ರಮುಖ ಔಷಧಿಗಳು ಸೇರಿಕೊಂಡಿವೆ.
ಪ್ಯಾರಸಿಟಮಾಲ್, ಮಾಕ್ಸಿಸಿಲಿನ್ ಮತ್ತು ಪೊಟ್ಯಾಸಿಯಮ್ ಕ್ಲಾವುಲಾನೇಟ್ ನಂತಹ ಔಷಧಗಳಲ್ಲದೆ, ಕ್ಯಾನ್ಸರ್ ಔಷಧಗಳ ಬೆಲೆಗಳನ್ನ ಸಹ ಎನ್ಪಿಪಿಎ ಇಳಿಸಿದೆ. ಸರ್ಕಾರವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಬೆಲೆಯನ್ನು ಶೇಕಡಾ 40 ರಷ್ಟು ಮಿತಿಗೊಳಿಸಿದೆ. ಕ್ಯಾನ್ಸರ್ ಜೊತೆಗೆ, ಜ್ವರ, ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಬೆಲೆಗಳನ್ನು ಸಹ ಶೇಕಡಾ 40 ರಷ್ಟು ಕಡಿಮೆ ಮಾಡಲಾಗಿದೆ.
ಅನೇಕ ಔಷಧಿಗಳನ್ನು ಗ್ರಾಹಕರು ಮತ್ತು ರೋಗಿಗಳು ನಿಯಮಿತವಾಗಿ ಬಳಸುತ್ತಿದ್ದಾರೆ. ಪ್ರತಿ ಟ್ಯಾಬ್ಲೆಟ್’ಗೆ 2.3 ರೂ.ಗೆ ಮಾರಾಟವಾಗುತ್ತಿದ್ದ ಪ್ಯಾರಾಸಿಟಮಾಲ್ (65ಒ ಮಿಗ್ರಾಂ) ಅನ್ನು ಈಗ ಪ್ರತಿ ಟ್ಯಾಬ್ಲೆಟ್’ಗೆ 1.8 ರೂ.ಗೆ ಇಳಿಸಲಾಗಿದೆ. ಇದೇ ರೀತಿ, ಅಮೋಕ್ಸಿಸಿಲಿನ್ ಮತ್ತು ಪೊಟ್ಯಾಸಿಯಮ್ ಕ್ಲಾವುಲೇಟ್ ಬೆಲೆ ಕೂಡ ಪ್ರತಿ ಮಾತ್ರೆಗೆ 22.3 ರೂ.ಗಳಿಂದ 16.8 ರೂ.ಗೆ ಇಳಿಕೆ ಕಂಡಿದೆ. ಪ್ಯಾರಾಸಿಟಮಾಲ್, ಇತರ ಅಗತ್ಯ ಔಷಧಿಗಳು NPPA 127 ಔಷಧಗಳ ಬೆಲೆಗಳನ್ನೂ ನಿಗದಿಪಡಿಸುವುದರಿಂದ ಬೆಲೆ ಅಗ್ಗವಾಗಲಿದೆ.
ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ (AIOCD) ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಟೈಮ್ಸ್ ಆಫ್ ಇಂಡಿಯಾಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಇದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ, ಪ್ಯಾರಾಸಿಟಮಾಲ್’ನಂತಹ ಕೆಲವು ಔಷಧಿಗಳು ಈಗಾಗಲೇ ಇಳಿಕೆ ಕಂಡಿದೆ. ಔಷಧೀಯ ಪದಾರ್ಥಗಳ (API) ಬೆಲೆ ಏರಿಕೆಯಾಗುತ್ತಿರುವುದರಿಂದ, ತಯಾರಕರಿಗೆ ಬೆಲೆಗಳನ್ನೂ ಮತ್ತಷ್ಟು ಕಡಿತಗೊಳಿಸಲು ಕಡಿಮೆ ಅವಕಾಶವಿದ್ದು, ಭವಿಷ್ಯದಲ್ಲಿ ಸರಬರಾಜಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಂದಾಜಿಸಿದ್ದಾರೆ.