ಶಿವರಾಜ್​ ಕುಮಾರ್ ಅಭಿನಯದ ವೇದ ಸಿನಿಮಾ ರಿಲೀಸ್​ಗೆ ಡೇಟ್​ ಫಿಕ್ಸ್​!

ಕರುನಾಡ ಚಕ್ರವರ್ತಿ ಶಿವರಾಜ್​ ಕುಮಾರ್ ಅಭಿನಯದ ವೇದ ಸಿನಿಮಾದಲ್ಲಿ ಶಿವರಾಜ್​ ಕುಮಾರ್ ಪಾತ್ರದ ಗತ್ತು ಬೇರೆ ಇದೆ. ಸಿನಿಮಾದಲ್ಲಿ ಶಿವಣ್ಣ ರೊಚ್ಚಿಗೆದಿದ್ದಾರೆ. ಅನ್ಯಾಯದ ವಿರುದ್ಧ ಮಚ್ಚು ಎತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಟಕ್ಕೆ ಇಳಿದಿದ್ದಾರೆ. ಹಾಗಂತ ಸಿನಿಮಾ ತಂಡ ಹೇಳಿಕೊಂಡಿಲ್ಲ. ಚಿತ್ರದ ಟ್ರೈಲರ್ ನೋಡಿದ್ರೆ ಸಾಕು. ಇದೆಲ್ಲದರ ಮಾಹಿತಿ ಸಿಕ್ಕು ಬಿಡುತ್ತದೆ.
1960 ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ. ಈ ಕಥೆಯಲ್ಲಿ ಮಹಿಳೆಯರ ದಂಡು ದೊಡ್ಡದಿದೆ. ಹೆಣ್ಣುಮಕ್ಕಳೇ ಸ್ಟ್ರಾಂಗ್​ ಗುರು ಅನ್ನೋ ಸತ್ಯವೂ ಇಲ್ಲೂ ಸಾಬೀತಾದಂತಿದೆ. ಇದನ್ನ ಮಹಿಳಾ ಪ್ರಧಾನ ಸಿನಿಮಾ ಅಂದ್ರೆ ತಪ್ಪೇ ಇಲ್ವೇನೋ ಅನ್ನೋ ಹಾಗೇನೆ ಟ್ರೈಲರ್ ಇದೆ.
ಡಿಸೆಂಬರ್-23 ರಂದು ವೇದ ಸಿನಿಮಾ ರಿಲೀಸ್ 
ಇವರಲ್ಲದೇ ಶ್ವೇತಾ ಚಂಗಪ್ಪ ಕೂಡ ಇಲ್ಲಿ ಆಕ್ರೋಶಭರಿತ ಪಾರೋ ಹೆಸರಿನ ಪಾತ್ರವನ್ನೆ ನಿರ್ವಹಿಸಿದ್ದಾರೆ. ಚಿತ್ರದ ಈ ಪ್ರಮುಖ ಪಾತ್ರದ ಜೊತೆಗೆ ವೀಣಾ ಪೊನ್ನಪ್ಪ ರಮಾ ಹೆಸರಿನ ಪೊಲೀಸ್ ಪಾತ್ರದಲ್ಲಿಯೇ ಅಬ್ಬರಿಸಿದ್ದಾರೆ. ಹೀಗೆ ವೇದ ಸಿನಿಮಾ ಒಂದು ಹೋರಾಟದ ಕಥೆಯಂತೆ ಕಾಣುತ್ತಿದೆ.

 

ಚಿತ್ರಕ್ಕೆ ಪೂರಕ ಅನ್ನೋ ಹಾಗೆ ಚಿತ್ರದ ಶಕ್ತಿಯನ್ನ ಇನ್ನಷ್ಟು ಹೆಚ್ಚಿಸೋ ಕೆಲಸವನ್ನ ಅರ್ಜುನ್ ಜನ್ಯ ಸಂಗೀತ ಇಲ್ಲಿ ಮಾಡಿದೆ. ಪ್ರತಿ ಪಾತ್ರದ ಶಕ್ತಿಯನ್ನ ಇಲ್ಲಿ ಅರ್ಜುನ್ ಜನ್ಯ ಸಂಗೀತ ವೈಬ್ರೇಷನ್ ಕ್ರಿಯೇಟ್ ಮಾಡಿದೆ. ಡೈರೆಕ್ಟರ್ ಎ.ಹರ್ಷಾ ಇಲ್ಲಿ ಒಂದ್ ಅದ್ಭುತ ಕಥೆಯನ್ನ ಅಷ್ಟೇ ಅದ್ಭುತವಾಗಿಯೇ ಕಟ್ಟಿಕೊಟ್ಟಿದ್ದಾರೆ.

Leave A Reply

Your email address will not be published.