ನವೀನ್ ಕಾಮಧೇನು ಅಪಹರಣ ಪ್ರಕರಣ | ತಾಯಿಯೊಂದಿಗೆ ಮಗನನ್ನು ಕಳುಹಿಸಲು ಹೈಕೋರ್ಟ್ ಆದೇಶ

Share the Article

ಸುಳ್ಯ : ಬೆಳ್ಳಾರೆಯ ಯುವ ಉದ್ಯಮಿ ಕಾಮಧೇನು ಜುವೆಲ್ಲರ್ಸ್ ಮಾಲಕ ನವೀನ್ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಬಲಾತ್ಕಾರವಾಗಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ನೀಡಿದ ದೂರಿನಂತೆ ನವೀನ್ ತಂದೆ ಕಾಮಧೇನು ಮಾಧವ ಗೌಡ, ಅತ್ತೆ ದಿವ್ಯಪ್ರಭ ಚಿಲ್ಲಡ್ಕ, ಪತ್ನಿ ಸ್ಪಂದನ ಸೇರಿದಂತೆ 6 ಮಂದಿಯ ಮೇಲೆ ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನವೀನ್ ಅವರ ತಾಯಿ ನೀರಜಾಕ್ಷಿಯವರು ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಮಗನನ್ನು ತನಗೆ ಒಪ್ಪಿಸುವಂತೆ ಮನವಿ ಮಾಡಿದ್ದರು. ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ನವೀನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೋಲೀಸ್ ಇಲಾಖೆಗೆ ಆದೇಶ ಮಾಡಿದ್ದು, ಆಸ್ಪತ್ರೆಗೆ ದಾಖಲುಗೊಳಿಸಿರುವುದಾಗಿ ಪೋಲೀಸರು ಹೈಕೋರ್ಟಿಗೆ ವರದಿ ನೀಡಿದ್ದರು.

ಈ ಬಗ್ಗೆ ವಿಚಾರಿಸಲು ಆಸ್ಪತ್ರೆಗೆ ವಕೀಲರನ್ನು ಕಳುಹಿಸಿ ವರದಿ ಪಡೆದುಕೊಂಡ ಹೈಕೋರ್ಟ್ ನವೀನರನ್ನು ತಾಯಿಯ ವಶಕ್ಕೆ ನ್ಯಾಯಾಲಯ ಒಪ್ಪಿಸಲು ಆದೇಶಿಸಿದೆ. ಹಾಗೂ ಮಂಗಳವಾರದ ವರೆಗೆ ಬೆಂಗಳೂರಲ್ಲಿ ಇರುವಂತೆಯೂ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

Leave A Reply