ಕಡಬ : ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಆರೋಪ | ಉಪವಲಯ ಅರಣ್ಯಾಧಿಕಾರಿಯ ವಿರುದ್ದ ವಿ.ಹಿಂ.ಪ ದೂರು

Share the Article

ಕಡಬ: ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆಮಾಡಿರುವ ಆರೋಪದಲ್ಲಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರ ವಿರುದ್ಧ ಕಡಬ ವಿ.ಹಿಂ.ಪ, ಬಜರಂಗದಳ ಕಡಬ ಪೋಲಿಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಪುತ್ತೂರು ಅರಣ್ಯ ಇಲಾಖೆಯ ಕಛೇರಿಯ ಎದುರು ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಿಂದೂ ವಿರೋಧಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿ, ಸಾಮಾಜಿಕ ಶಾಂತಿ ಕದಡಿದ ಬಗ್ಗೆ ಕಡಬ ವಿ.ಹಿಂ.ಪ.ನ ಕಾವ್ಯದರ್ಶಿ ಪ್ರಮೋದ್ ರೈ ನಂದುಗುರಿ ಅವರು ದೂರು ನೀಡಿದ್ದಾರೆ.

ಅವರು ನೀಡಿರುವ ದೂರಿನಲ್ಲಿ, ಭಜನೆ ಎಂಬುದು ಜನ ಸಾಮಾನ್ಯರ ಭಕ್ತಿ ಮಾರ್ಗ, ಜನಸಾಮಾನ್ಯರು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿರುವ ಈ ಭಜನೆಯ ಬಗ್ಗೆ ದಿನಾಂಕ: 20-12-2022ರಂದು ಸರಕಾರಿ ಅಧಿಕಾರಿ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಪಾಡುವಂತಹ ವ್ಯಕ್ತಿಯಾದ ಸಂಜೀವ ಪೂಜಾರಿ ಇವರು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣವಾದಲ್ಲಿ ಅವಹೇಳನಕಾರಿಯಾಗಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ವ್ಯಕ್ತಿ ಹಿಂದೆಯೂ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು ಒಬ್ಬ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಾ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದು ಇವರ ವಿರುದ್ಧ ಪ್ರಕರಣ ದಾಖಲಿಸಬೇಕು ಅಲ್ಲದೆ ಕರ್ತವ್ಯದಿಂದ ವಜಾ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

Leave A Reply