ಮಂಗಳೂರಿಗರೇ ಇಲ್ಲಿ ಕೇಳಿ | ಬಂತು ನೋಡಿ, ವಿಶೇಷ ರೈಲು | ಯಾವಾಗ, ವೇಳಾಪಟ್ಟಿ ಇಲ್ಲಿದೆ

Share the Article

ವರ್ಷ ಕೊನೆಯಲ್ಲಿ ನಿಮಗಾಗಿ ವಿಶೇಷ ರೈಲು ವ್ಯವಸ್ಥೆ ತರಲಾಗಿದೆ. ಸದ್ಯ ಜನರು ದೂರದ ಪ್ರಯಾಣ ಇದ್ದಾಗ ರೈಲು ಸಂಚಾರವನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಅಗ್ಗದ ದರದಲ್ಲಿ ಬೇಗನೆ ಪ್ರಯಾಣ ಮಾಡಲು ರೈಲು ಪ್ರಯಾಣ ಸೂಕ್ತವಾಗಿದೆ . ಅದಲ್ಲದೆ ಎರಡು ವರ್ಷಗಳಿಂದ ಮಹಾಮಾರಿ ಕೊರೊನಾ ಕಾರಣದಿಂದ ಕ್ರಿಸ್‌ಮಸ್‌ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯೂ ಕೂಡ ಕಡಿಮೆಯಿತ್ತು. ಕ್ರಿಸ್‌ಮಸ್‌ ಆಚರಣೆಗೆ ಸಾಮಾನ್ಯವಾಗಿ ಜನರು ಬೇರೆ ಕಡೆಗೆ ಪ್ರವಾಸ ಮಾಡಲು ಯೋಜನೆ ರೂಪಿಸಿರುತ್ತಾರೆ. ಆದ್ದರಿಂದ ಕ್ರಿಸ್‌ಮಸ್‌ ಉತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಗೊಳಿಸಲು ಮಂಗಳೂರು ಜಂಕ್ಷನ್‌ ಹಾಗೂ ಗುಜರಾತ್‌ನ ಉಧ್ನಾ ಮಧ್ಯೆ ವಿಶೇಷ ರೈಲುಗಳನ್ನು ಓಡಿಸಲು ಕೊಂಕಣ ರೈಲ್ವೆ ನಿರ್ಧಾರ ಮಾಡಿದೆ.

ವಿಶೇಷ ರೈಲಿನ ಸಂಖ್ಯೆ ಮತ್ತು ಸಂಚರಿಸುವ ಮಾರ್ಗ :

  • ವಿಶೇಷ ರೈಲು ನಂಬರ್‌ 09057 :
    ಉಧ್ನಾದಿಂದ ಡಿಸೆಂಬರ್‌ 21, 25, 28 ಹಾಗೂ ಜನವರಿ 1ರಂದು (ಬುಧ, ಭಾನುವಾರ) ರಾತ್ರಿ 8ಕ್ಕೆ ಹೊರಟು ಮಂಗಳೂರು ಜಂಕ್ಷನ್‌ಗೆ ಮರುದಿನ ಸಂಜೆ 6:30ಕ್ಕೆ ತಲುಪಲಿದೆ.
  • ವಿಶೇಷ ನಂಬರ್ 09058:
    ಮಂಗಳೂರು ಜಂಕ್ಷನ್‌ – ಉಧ್ನಾ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್‌ 22, 26, 29 ಹಾಗೂ ಜನವರಿ 2ರಂದು (ಗುರು, ಸೋಮವಾರ) ಹೊರಟು ಮರುದಿನ ರಾತ್ರಿ 7:25ಕ್ಕೆ ಉಧ್ನಾ ತಲುಪಲಿದೆ. ಒಟ್ಟು ನಾಲ್ಕು ಸೇವೆಗಳಿರುತ್ತವೆ.

ಪಾಟ್ನಾ ಬೆಂಗಳೂರು ನಡುವೆ ವಿಶೇಷ ರೈಲು, ವೇಳಾಪಟ್ಟಿ ಇಂತಿವೆ :

  • ವಲ್ಸಡ್‌, ವಾಪಿ, ಫಾಲ್ಗರ್, ವಸಾೖ ರೋಡ್‌, ಪನ್ವೇಲ್‌, ರೋಹ, ಖೇಡ್‌, ಚಿಪ್ಳೂಣ, ಸಂಗಮೇಶ್ವರ ರೋಡ್‌, ರತ್ನಾಗಿರಿ, ಕಂಕಾವಿಲಿ, ಸಿಂಧೂದುರ್ಗ, ಕುಡಾಳ್‌, ಸಾವಂತವಾಡಿ ರೋಡ್‌, ತಿವಿಂ, ಕರ್ಮಾಲಿ, ಮಡಗಾಂವ್‌, ಕಾಣಕೋಥ, ಕಾರವಾರ, ಅಂಕೋಲಾ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ/ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಮತ್ತು ಸುರತ್ಕಲ್‌ಗ‌ಳಲ್ಲಿ ಈ ವಿಶೇಷ ರೈಲು ನಿಲುಗಡೆ ಆಗಲಿದೆ. ಈ ವಿಶೇಷ ರೈಲು 2 ಟಯರ್‌ ಎಸಿ ಸೇರಿದಂತೆ ಒಟ್ಟು 24 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೀದರ್‌ ಮೂಲಕ 2 ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ:

ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿತ್ತು. ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದ್ದು, ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ. ನೈಋತ್ಯ ರೈಲ್ವೆ ಈ ಕುರಿತು ಆದೇಶ ಹೊರಡಿಸಿದೆ. ಇವುಗಳಲ್ಲಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಿಂದ ಸಂಚಾರ ನಡೆಸುವ ಹಲವು ರೈಲುಗಳು ಸೇರಿವೆ. ರೈಲು ಪ್ರಯಾಣಿಕರು ಈ ರೈಲುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮುಖ್ಯವಾಗಿ ವಿಶೇಷ ರೈಲು ಸೇವೆಯ ವಿಸ್ತರಣೆ
ಮಾ. 26ರ ವರೆಗೂ ಮಾಡಲಾಗಿದೆ.

  • ರೈಲು ನಂಬರ್ 07355 ಹುಬ್ಬಳ್ಳಿ-ರಾಮೇಶ್ವರಂ ವಾರಕ್ಕೊಮ್ಮೆ ಸಂಚಾರ ನಡೆಸುವ ವಿಶೇಷ ರೈಲು ಸೇವೆಯನ್ನು ಮಾರ್ಚ್ 25ರ ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲು ಸೇವೆ ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿತ್ತು.
  • ರೈಲು ನಂಬರ್ 07356 ರಾಮೇಶ್ವರಂ-ಹುಬ್ಬಳ್ಳಿ ರೈಲು ಸಂಚಾರ ಮಾರ್ಚ್ 26ರ ತನಕ ವಿಸ್ತರಣೆ ಮಾಡಲಾಗಿದೆ.

ಮಾ. 31ರ ತನಕ ರೈಲು ಸೇವೆ ವಿಸ್ತರಣೆಯಾಗಿ ವಿಶೇಷ ರೈಲು ತಲುಪುವ ಮಾರ್ಗಗಳು:

ರೈಲು ಸಂಖ್ಯೆ 06545: ಯಶವಂತಪುರ-ವಿಜಯಪುರ ಪ್ರತಿ ದಿನದ ವಿಶೇಷ ರೈಲು ಸೇವೆಯನ್ನು ಮಾರ್ಚ್ 31ರ ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲು ಸೇವೆ ಸಹ ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿತ್ತು.

  • ರೈಲು ಸಂಖ್ಯೆ 06546 : ವಿಜಯಪುರ-ಯಶವಂತಪುರ ರೈಲಿನ ಸೇವೆಯನ್ನು ಸಹ ಏಪ್ರಿಲ್ 1ರ ತನಕ ವಿಸ್ತರಿಸಲಾಗಿದೆ.
  • ರೈಲು ಸಂಖ್ಯೆ 06223 ಶಿವಮೊಗ್ಗ ಟೌನ್- ಎಂಜಿಆರ್ ಚೆನ್ನೈ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲನ್ನು 2023ರ ಮಾರ್ಚ್ 28ರ ತನಕ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 27ಕ್ಕೆ ರೈಲು ಸಂಚಾರ ಅಂತ್ಯಗೊಳ್ಳಬೇಕಿತ್ತು.
  • ರೈಲು ಸಂಖ್ಯೆ 06224 ಎಂಜಿಆರ್‌ ಚೆನ್ನೈ- ಶಿವಮೊಗ್ಗ ಟೌನ್ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲನ್ನು 29/3/2023ರ ತನಕ ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 28ಕ್ಕೆ ರೈಲು ಸಂಚಾರ ಸ್ಥಗಿತವಾಗಬೇಕಿತ್ತು.

ಸದ್ಯ ಈ ರೈಲು ಸೇವೆಗಳನ್ನು ಮುಂದಿನ ಆದೇಶದ ತನಕ ವಿಸ್ತರಣೆ ಮಾಡಲಾಗಿದೆ. ಬಳಿಕ ರೈಲ್ವೆ ಇಲಾಖೆ ಸೇವೆ ವಿಸ್ತರಣೆ ಮಾಡುವ ಕುರಿತು ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ ಎನ್ನುವ ಮಾಹಿತಿ ತಿಳಿಸಲಾಗಿದೆ .

Leave A Reply