Gas Cylinder Price: 2023 ಏಪ್ರಿಲ್ 1ರಿಂದ ಗ್ಯಾಸ್ ಸಿಲಿಂಡರ್​ಗೆ 500 ರೂ | ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್‌

ಗ್ಯಾಸ್‌ ವಿತರಣಾ ಮತ್ತು ದರದಲ್ಲಿ ಇಲ್ಲೊಂದು ಸರಕಾರ ಅಲ್ಲಿನ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಹೌದು, ಮುಂದಿನ ವರ್ಷ ಏಪ್ರಿಲ್ 1ರ ನಂತರ ಬಿಪಿಎಲ್ (BPL) ಕುಟುಂಬಗಳಿಗೆ ತಲಾ 500 ರೂಪಾಯಿಯಂತೆ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ (gas cylinder) ನೀಡುತ್ತೇವೆ ಎಂದು ರಾಜಸ್ಥಾನ ಸರ್ಕಾರ ಘೋಷಣೆ ಮಾಡಿದೆ ಎಂದು ANI ತಿಳಿಸಿದೆ. ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸುವ ಮೂಲಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದರು, ಬಿಪಿಎಲ್​ ಕುಟುಂಬಗಳಿಗೆ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುವುದಾಗಿ ಹೇಳಿದರು.

 

ಸರ್ಕಾರದ ಕಲ್ಯಾಣ ಯೋಜನೆಗಳಿಂದ ಯಾರೂ ವಂಚಿತರಾಗಬಾರದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಮತ್ತು ಉಜ್ವಲ ಯೋಜನೆಗೆ ಅಡಿಯಲ್ಲಿ ಅಡುಗೆ ಅನಿಲ ಪಡೆಯುತ್ತಿರುವ ಜನರಿಗೆ ರಾಜಸ್ಥಾನ ಸರ್ಕಾರ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. ಅವರು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಈ ಘೋಷಣೆ ಮಾಡಿದ್ದಾರೆ.

ನಾನು ಮುಂದಿನ ತಿಂಗಳು ಬಜೆಟ್‌ಗೆ ಸಿದ್ಧತೆ ನಡೆಸುತ್ತಿದ್ದೇನೆ. ಈ ಸಮಯದಲ್ಲಿ ನಿಮ್ಮ ಮುಂದೆ ಈ ಘೋಷಣೆಯನ್ನು ಇಡುತ್ತಿದ್ದೇನೆ. ಉಜ್ವಲ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಬಡವರಿಗೆ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದರು. ಆದರೆ ಈಗ ಆ ಸಿಲಿಂಡರ್ ಖಾಲಿಯಾಗಿದೆ, ಏಕೆಂದರೆ ಸಿಲಿಂಡರ್ ದರಗಳು ಈಗ 400ರಿಂದ 1,040 ರೂ.ಗೆ ಹೆಚ್ಚಾಗಿದೆ ಗೆಹ್ಲೋಟ್ ಹೇಳಿದರು. ನಾವು ವರ್ಷಕ್ಕೆ 12 ಸಿಲಿಂಡರ್‌ಗಳನ್ನು ನೀಡುತ್ತೇವೆ ಗೆಹ್ಲೋಟ್ ಹೇಳಿದರು.

Leave A Reply

Your email address will not be published.