ಡಿ ಬಾಸ್‌ ದರ್ಶನ್‌ಗೆ ಚಪ್ಪಲಿ ಎಸೆತ | ಶಿವಣ್ಣನಿಂದ ಬಂತು ಪ್ರತಿಕ್ರಿಯೆ | ವೀಡಿಯೋ ಇಲ್ಲಿದೆ

Share the Article

ಕ್ರಾಂತಿ ಸಿನಿಮಾದ ಎರಡನೇ ಹಾಡಿನ ಬಿಡುಗಡೆ ಸಮಾರಂದ ಸಮಯದಲ್ಲಿ ನಡೆದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದ್ದು. ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ಡಿ ಬಾಸ್‌ ಅಭಿಮಾನಿಗಳು ಅಪ್ಪು ಅಭಿಮಾನಿಗಳ ವಿರುದ್ಧ ಕಿಡಿಕಾರಿದ್ದರು. ಈ ಕಾರ್ಯಕ್ರಮದ ಆಯೋಜನೆ ಮಾಡುವ ಸಮಯದಲ್ಲಿ ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಶುರುವಾಗಿತ್ತು. ನಂತರ ದರ್ಶನ್‌ಗೆ ಯಾರೋ ಕಿಡಿಗೇಡಿಗಳು ಚಪ್ಪಲಿ ಎಸೆದಿದ್ದು ಬಹಳ ವಿವಾದವಾಯಿತು.

ನಟ ದರ್ಶನ್‌ ಅವರು ಹೊಸಪೇಟೆಗೆ ಬಂದು ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದು ಇದಾದ ನಂತರ ಪರಿಸ್ಥಿತಿ ಕೊಂಚ ತಿಳಿಯಾಗಿತ್ತು. ಕ್ರಾಂತಿ ಚಿತ್ರದ ಎರಡನೇ ಸಾಂಗ್‌ ಬೊಂಬೆ ಬೊಂಬೆ ಹಾಡು ರಿಲೀಸ್‌ ಕಾರ್ಯಕ್ರಮ ಸರಾಗವಾಗಿ ಆರಂಭವಾಯಿತು. ಅನಂತರ ನಡೆದಿದ್ದು ಈ ಚಪ್ಪಲಿ ಎಸೆತ. ನಂತರ ಅಪ್ಪು ಅಭಿಮಾನಿಗಳು ಹಾಗೂ ಡಿ ಬಾಸ್‌ ಅಭಿಮಾನಿಗಳು ನಡುವೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ಮಾತು ಕೇಳಿ ಬರತೊಡಗಿತು.

ಇದರ ಬೆನ್ನಲ್ಲೇ ರಾಜ್‌ ಕುಟುಂಬದ ಅಭಿಮಾನಿಗಳು ಈ ರೀತಿ ಮಾಡಲ್ಲ, ಯಾರೋ ಕಿಡಿಗೇಡಿಗಳು ಈ ಕೆಲಸ ಮಾಡಿದ್ದಾರೆ ಎಂದು ಶಿವರಾಜ್‌ಕುಮಾರ್‌, ರಾಘಣ್ಣ ಮತ್ತು ಅಪ್ಪು ಫ್ಯಾನ್ಸ್ ವಾದಿಸುತ್ತಿದ್ದಾರೆ. ಈ ಕುರಿತಾಗಿ ಶಿವರಾಜ್‌ಕುಮಾರ್ ಅವರ ಬಳಿ ಕೆಲ ಅಭಿಮಾನಿಗಳು ದಯವಿಟ್ಟು ಇದರ ಕುರಿತು ಮಾತನಾಡಿ ಎಂದು ಮನವಿ ಮಾಡಿದ್ದರು. ಈ ಬೆನ್ನಲ್ಲೇ ಶಿವರಾಜ್‌ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

“ನಿನ್ನೆ ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ನಡೆದ ಕೃತ್ಯ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಈ ರೀತಿಯ ಅಮಾನವೀಯ ಘಟನೆ ಒಂದೇ ಮನೆಯವರಂತಿರುವ ಎಲ್ಲರಿಗೂ ನೋವುಂಟು ಮಾಡುತ್ತದೆ. ಮನುಷ್ಯತ್ವ ಮರೆತು ಯಾರೂ ಈ ರೀತಿಯ ಕೃತ್ಯಗಳನ್ನು ನಡೆಸಬಾರದು ಎಂದು ವಿನಂತಿಸುತ್ತೇನೆ. ಅಭಿಮಾನದಿಂದ ಪ್ರೀತಿಯನ್ನು ತೋರಿ; ದ್ವೇಷ ಅಗೌರವವನ್ನಲ್ಲ” ಎಂದು ಶಿವಣ್ಣ ಹೇಳಿದ್ದಾರೆ.

Leave A Reply