Ration Card : ಪಡಿತರ ಚೀಟಿದಾರರೇ ಗಮನಿಸಿ | ಅಕ್ರಮ ತಡೆಗೆ ಸರಕಾರದಿಂದ ಮಹತ್ವದ ಕ್ರಮ

Share the Article

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಪಡಿತರ ಚೀಟಿದಾರರಿಗೆ ಯೋಜನೆಯಡಿ ಸರ್ಕಾರ ಪ್ರತಿ ತಿಂಗಳು ಅನ್ನಭಾಗ್ಯ ನ್ಯಾಯಬೆಲೆ ಪಡಿತರ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುತ್ತದೆ.

ಈ ನಡುವೆ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮವಾಗಿ ಜೊತೆಗೆ ಅನಾಮಧೇಯ ಹೆಸರಲ್ಲಿ ಕೂಡ ಕಾನೂನುಬಾಹಿರವಾಗಿ ಪಡಿತರ ವಹಿವಾಟು ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಮೇರಾ ರೇಷನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ 1.15 ಕೋಟಿ ಬಿಪಿಎಲ್, 23. 96 ಲಕ್ಷ ಎಪಿಎಲ್, 10.90 ಲಕ್ಷ ಅಂತ್ಯೋದಯ ಪಡಿತರ ಚೀಟಿದಾರರು ಸೇರಿ ಸುಮಾರು 1.50 ಕೋಟಿ ರೇಷನ್ ಕಾರ್ಡ್ ದಾರರು ಇದ್ದಾರೆ.

ಕೆಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಸರಿನಲ್ಲಿ ಅನಾಮಿಕ ವ್ಯಕ್ತಿಗಳು, ಪರವಾನಿಗೆ ನವೀಕರಣ ಆಗದ ನ್ಯಾಯಬೆಲೆ ಅಂಗಡಿಗಳು, ಕನ್ಸೂಮರ್ ಕ್ರೆಡಿಟ್ ಸೊಸೈಟಿಗಳು ಪ್ರತಿ ತಿಂಗಳು ಪಡಿತರ ಧಾನ್ಯ ಪಡೆಯುತ್ತಿದ್ದು, ಆಹಾರ ಭದ್ರತಾ ಯೋಜನೆಯಡಿ ದೊಡ್ಡ ಮಟ್ಟದ ಅವ್ಯವಹಾರ ಸರಾಗವಾಗಿ ನಡೆಯುತ್ತಿದೆ.

ಹೀಗಾಗಿ, ಆಹಾರ ಇಲಾಖೆಯಿಂದ ವಂಚನೆ ತಡೆಗೆ ಮತ್ತು ಪಾರದರ್ಶಕವಾಗಿ ಪಡಿತರ ಹಂಚಿಕೆ ಮಾಡುವ ಉದ್ದೇಶದಿಂದ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲ ನ್ಯಾಯಬೆಲೆ ಅಂಗಡಿಗಳ ವಿವರವನ್ನು ಅಪ್ಲೋಡ್ ಮಾಡುವಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗಿದೆ.

ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೇರಾ ರೇಷನ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಪಡಿತರ ಚೀಟಿಯ ಸಂಖ್ಯೆ ನಮೂದಿಸಿದಲ್ಲಿ ಪಡಿತರ ಹಂಚಿಕೆ ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಾಗಲಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೇರಾ ರೇಷನ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಈ ಮೂಲಕ ಕೋರಲಾದ ಮಾಹಿತಿಗಳನ್ನು ದಾಖಲಿಸಬೇಕಾಗಿದೆ.

ಭಾರತ ಅಹಾರ ನಿಗಮದ ಗೋದಾಮಗಳಿಂದ ಸಗಟು ಮಳಿಗೆಗಳಿಗೆ ಆಹಾರ ಧಾನ್ಯಗಳನ್ನು ಸರಕು ಲಾರಿಯಲ್ಲಿ ಸಾಗಿಸುವ ವೇಳೆ ಕಳ್ಳತನ, ಅಕ್ರಮ ದಾಸ್ತಾನು,ಹೆಚ್ಚುವರಿ ದಾಸ್ತಾನು ಸಂಗ್ರಹ ಮೊದಲಾದ ಅಕ್ರಮಗಳಿಗೆ ಇನ್ನೂ ಮುಂದೆ ಬ್ರೇಕ್ ಬೀಳಲಿದೆ.

Leave A Reply