ನಿಮಗಿದು ತಿಳಿದಿರಲಿ | ಫೋನ್‌ ಮೂಲಕ ಕಳಿಸಿದ ಮೊತ್ತ ಮೊದಲ ಮೇಸೇಜ್‌ ಯಾವುದು ? ಕ್ರಿಸ್ಮಸ್‌ಗೂ ಈ ಮೆಸೇಜ್‌ಗೆ ಇರುವ ನಂಟು ಏನು?

ಇದು ಸ್ಮಾರ್ಟ್‌ಫೋನ್‌ ಕಾಲ. ಮೊಬೈಲ್‌ ಇಲ್ಲದಿದ್ದರೆ ಇಂದು ಯಾರ ಕೈ ಕಾಲು ಕೂಡಾ ಅಲುಗಾಡಲ್ಲ ಎಂದರೆ ತಪ್ಪಲ್ಲ. ಮೊದಲಿಗೆ ಸ್ಮಾರ್ಟ್‌ಫೋನ್‌ ಬಂದಾಗ ಫೋನ್‌ಗಿಂತಲೂ ಬಹಳ ಉಪಯೋಗಕ್ಕೆ ಬರುತ್ತಿದ್ದದ್ದು, ಮೆಸೇಜ್‌. ಒಂದು ಮೆಸೇಜ್‌ ಎಲ್ಲೆಲ್ಲಿ ಹೋಗುತ್ತೆ ಅಂದರೆ ಇದೊಂದು ಅದ್ಭುತ ತಂತ್ರಜ್ಞಾನ ಎಂದೇ ಹೇಳಬಹುದು. ಕೆಲವೇ ಕೆಲವು ಕ್ಷಣದಲ್ಲಿ ನಮ್ಮ ಮೆಸೇಜ್‌ ದೇಶ, ವಿದೇಶಗಳಿಗೆ ತಲುಪುತ್ತೆ. ಅಂದ ಹಾಗೆ ನಿಮಗಿದು ಗೊತ್ತೇ ? ಈ ಟೆಕ್ಸ್ಟ್‌ ಮೆಸೇಜ್‌ ಗೂ ಕ್ರಿಸ್ಮಸ್‌ಗೂ ಸಂಬಂಧವಿದೆ. ಕ್ರಿಸ್ಮಸ್‌ಗೆ ಇನ್ನು ಕೆಲವೇ ಕೆಲವು ದಿನಗಳಿವೆ. ಈಗಾಗಲೇ ಈ ಸಂಭ್ರಮಾಚಾರಣೆಯನ್ನು ಕಣ್ತುಂಬಿಕೊಳ್ಳಲು ಜನ ಈಗಲೇ ಎಲ್ಲಾ ತಯಾರಿ ಮಾಡುತ್ತಿದ್ದಾರೆ. ಇಲ್ಲಿ ನಾವು ಈಗ ಈ ಟೆಕ್ಸ್ಟ್‌ ಮೆಸೇಜ್‌ ಹಾಗೂ ಕ್ರಿಸ್ಮಸ್‌ ಸಂಬಂಧದ ಬಗ್ಗೆ ಇರುವ ನಂಟಿನ ವಿಷಯದ ಬಗ್ಗೆ ತಿಳಿಯೋಣ.

 

ಸುಮಾರು 30 ವರ್ಷಗಳ ಹಿಂದೆ ಮೊದಲ ಬಾರಿ ಪಠ್ಯ ಸಂದೇಶವನ್ನು ಕಳುಹಿಸಲಾಗಿತ್ತು. 1992ರಲ್ಲಿ ಮೊದಲ ಬಾರಿ ವಿಶ್ವ (World) ದ ಮೊದಲ ಪಠ್ಯ ಎಸ್ ಎಂಎಸ್ ಅನ್ನು ವೊಡಾಫೋನ್ (Vodafone) ಉದ್ಯೋಗಿಯೊಬ್ಬರು ಇನ್ನೊಬ್ಬ ಉದ್ಯೋಗಿಗೆ ಕಳುಹಿಸಿದ್ದರು. 1992ರ ಡಿಸೆಂಬರ್ 3ರಂದು ಅವರು ಎಸ್ ಎಂಎಸ್ ಕಳುಹಿಸಿದ್ದರು.

ಪಠ್ಯ ಎಸ್ ಎಂಎಸ್ ಗೂ ಕ್ರಿಸ್ಮಸ್ ಗೂ ಏನು ನಂಟು ಅಂದ್ರೆ, ವೋಡಾಫೋನ್ ಉದ್ಯೋಗಿ ಕ್ರಿಸ್ಮಸ್ ಸಂದರ್ಭದಲ್ಲಿಯೇ ಈ ಸಂದೇಶ ಕಳುಹಿಸಿದ್ದರು. ಅದು ಕೂಡಾ ಕ್ರಿಸ್ಮಸ್ ಶುಭಕೋರಿ ಸಂದೇಶ ಕಳುಹಿಸಿದ್ದರು. ಮೆರ್ರಿ ಕ್ರಿಸ್ಮಸ್ ಎಂದು ಅವರು ಸಂದೇಶ ಕಳುಹಿಸಿದ್ದರು. ವಿಶ್ವದ ಮೊದಲ ಪಠ್ಯ ಸಂದೇಶವನ್ನು ಬ್ರಿಟಿಷ್ ಪ್ರೋಗ್ರಾಮರ್ ನೀಲ್ ಪ್ಯಾಪ್‌ವರ್ತ್ (Neil Papworth) ಮಾಡಿದ್ದರು. ನೀಲ್ ಗೆ ಆಗ 22 ವರ್ಷ ವಯಸ್ಸಾಗಿತ್ತು. ಲಂಡನ್ ನಿವಾಸಿಯಾಗಿದ್ದ ನೀಲ್ ಆಗ ವೊಡಾಫೋನ್ ನಲ್ಲಿ ಟೆಸ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಈ ಪಠ್ಯ ಎಸ್ ಎಂಎಸ್ ಅನ್ನು ತಮ್ಮ ಇನ್ನೊಬ್ಬ ಪಾಲುದಾರ ರಿಚರ್ಡ್ ಜಾರ್ವಿಸ್‌ಗೆ ಕಳುಹಿಸಿದ್ದರು.

ಮೊದಲ ಬಾರಿ ನೀಲ್ ಪ್ಯಾಪ್‌ವರ್ತ್, ಕೇವಲ 15 ಅಕ್ಷರಗಳ ಎಸ್ ಎಂಎಸ್ ಕಳುಹಿಸಿದ್ದರು. ಅದರಲ್ಲಿ ಮೆರ್ರಿ ಕ್ರಿಸ್ಮಸ್ ಎಂದು ಬರೆಯಲಾಗಿತ್ತು. ಅದರ ನಂತರ ಕ್ರಮೇಣ ಸಂದೇಶಗಳ ಸೇವೆ ಹೆಚ್ಚಾಯಿತು.

ಅಂದ ಹಾಗೆ ಮೊಬೈಲ್‌ ದಿಗ್ಗಜ ನೋಕಿಯಾ (Nokia), ಎಸ್ ಎಂಎಸ್ ಸೇವೆ ಪ್ರತಿಯೊಬ್ಬರಿಗೆ ಸಿಗುವ ಹಾಗೆ ಮಾಡಿತು. ನೋಕಿಯಾ ಜಿಎಸ್ಎಂ ಹ್ಯಾಂಡ್‌ಸೆಟ್ ಪ್ರಾರಂಭಿಸುವ ಮೂಲಕ ಎಸ್ಎಂಎಸ್ ರವಾನೆ ಮಾಡುವ ಸೇವೆ ಶುರು ಮಾಡಿತು. ಎಸ್‌ಎಂಎಸ್‌ ಜಗತ್ತಿನಲ್ಲಿ ಕ್ರಾಂತಿಯೇ ಉಂಟಾಯಿತು. 1998 ರ ಸಮಯದಲ್ಲಿ ಒಂದು ತಿಂಗಳಲ್ಲಿ ನಾಲ್ಕು ಸಂದೇಶಗಳನ್ನು ಕಳುಹಿಸಲಾಗ್ತಿತ್ತು. 2010 ರಲ್ಲಿ ಪ್ರಪಂಚದಾದ್ಯಂತ 6.1 ಟ್ರಿಲಿಯನ್ ಸಂದೇಶಗಳನ್ನು ಕಳುಹಿಸಲಾಗಿದೆ. ಅಂದರೆ, ಒಂದು ಸೆಕೆಂಡಿನಲ್ಲಿ ಸರಾಸರಿ 1,93,000 ಸಂದೇಶಗಳನ್ನು ಕಳುಹಿಸಲಾಗಿದೆ. ಈ ವರ್ಷ ಅಂದ್ರೆ 2022ರಲ್ಲಿ ಪ್ರತಿ ದಿನ ಸುಮಾರು 23 ಬಿಲಿಯನ್ ಸಂದೇಶಗಳನ್ನು ಕಳುಹಿಸಲಾಗುತ್ತದೆ.

Leave A Reply

Your email address will not be published.