ಭಾರತದಲ್ಲಿರುವ ಅದ್ಭುತ ಪ್ಲೇಸ್ ಗಳ ರಹಸ್ಯಗಳಿವು!
ಅದೇಷ್ಟೋ ಜನರಿಗೆ ಟ್ರಿಪ್ ಹೋಗೋ ಅಂತ ಕ್ರೇಜ್ ತುಂಬಾ ಇರುತ್ತೆ. ಭಾರತದಲ್ಲಿ ಅದೆಷ್ಟೋ ಸ್ಥಳಗಳಿಗೆ ನೀವು ಭೇಟಿ ನೀಡಿರಬಹುದು. ಆದರೆ ಆ ಸ್ಥಳಗಳ ಒಂದಷ್ಟು ರಹಸ್ಯಗಳು ನಿಮಗೆ ಗೊತ್ತಿರೋದು ಅನುಮಾನ. ಇದರ ಬಗ್ಗೆ ಸಂಕ್ಷೆಪ್ತ ವಿವರಣೆ ಕೊಡುತ್ತೇವೆ ನೋಡಿ.
ಲೇಹ್ ಲಡಾಕ್ :- ಎಸ್, ಇಲ್ಲಿಗಂತು ಅನೇಕ ಜನರಿಗೆ ಬೈಕ್ ಅಲ್ಲಿ ಹೋಗೋ ಕ್ರೇಜ್ ಇರುತ್ತೆ. ಇಲ್ಲಿಗೆ ಹೋಗೋ ಒಂದು ರಸ್ತೆ ಕಿರಿದಾಗಿದ್ದು, ಮೇಲ್ಮುಖವಾಗಿ ಗಾಡಿಯನ್ನು ಹತ್ತಿಸುವಾಗ ಗಾಡಿ ಆಫ್ ಆದರೂ ಕೂಡ ಗಂಟೆಗೆ 20ಕಿ ಮೀ ವೇಗದಲ್ಲಿ ಗಾಡಿ ಚಲಿಸುತ್ತದೆ. ಆದರಿಂದ ಈ ಬೆಟ್ಟವನ್ನು ಮ್ಯಾಗ್ನೆಟಿಕ್ ಹಿಲ್ ಅಂತ ಕರೆಯಲಾಗುತ್ತದೆ.
ಕೂಲದಾರ ಗ್ರಾಮ:- ರಾಜಸ್ಥಾನದಲ್ಲಿ ಒಮ್ಮೆ ಪಾಲಿವಾಲಿ ಬ್ರಾಹ್ಮಣರು, ಕುಲಾಧಾರ ಮತ್ತು ಇತರ 83 ಹತ್ತಿರದ ಹಳ್ಳಿಗಳ ನಿವಾಸಿಗಳು ವಾಸಿಸುತ್ತಿದ್ದರು. ಆದರೆ 1825 ರಲ್ಲಿ ಒಂದು ರಾತ್ರಿ ಕಾರಣವಿಲ್ಲದೆ ಪ್ರತಿಯೊಬ್ಬರೂ ಕಣ್ಮರೆಯಾದರು. ಆದರೂ ಇಲ್ಲಿ ಎಲ್ಲಾ ಕಟ್ಟಡಗಳು ಹಾಗೆ ಇವೆ.
ಭಂಗರ್ ಕೋಟೆ:- ಇದೊಂದು ವಿಚಿತ್ರವಾದ ಕೋಟೆ ಅಂತ ಹೇಳಬಹುದು. ಯಾಕಂದ್ರೆ ಇದನ್ನು ದೆವ್ವಗಳ ಗುಹೆ ಅಂತ ಕರೆಯಲಾಗುತ್ತದೆ. 17ನೆಯ ಶತಮಾನದಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಿರ್ಮಿಸಲಾಯಿತು.
ರೂಪ್ಕುಂಡ್:- ಇದು ಅತಿ ಎತ್ತರದ ಸರೋವರವಾಗಿದೆ. ಇಲ್ಲಿ ಟ್ರಕ್ಕಿಂಗ್ ಪ್ಲೇಸ್ ಕೂಡ ಇದೆ. ತುಂಬಾ ಅದ್ಭುತ ವಾಗಿದೆ. ಎಂದಿಗೂ ಚಳಿ ಚಳಿಯಾಗಿರುವ ಈ ಸ್ಥಳ ಫೆಂಡ್ಸ್ ಜೊತೆ ಟ್ರಿಪ್ ಹೋಗೋಕೆ ಬೆಸ್ಟ್ ಆಗಿದೆ.
ಹೈಡ್ ಅಂಡ್ ಸಿಕ್ ಬೀಚ್ :- ಕಣ್ಣ ಮುಚ್ಚಾಲೆ ಸಮುದ್ರವು ಸಖತ್ ಫೇಮಸ್. ಒರಿಸ್ಸಾದಲ್ಲಿರುವ ಈ ಬೀಚ್ ಆಗಾಗ ಕಣ್ಮರೆ ಆಗುತ್ತೆ ಅಂತೆ. ಸುಮಾರು 5 ಕಿ.ಮೀ ವರೆಗೂ ಅಲೆ ಬಂದು ಹೋಗುತ್ತೆ ಅಂತ ಹೇಳಿನ ಸ್ಥಳಿಯರು ಹೇಳುತ್ತಾರೆ. ನಂತರ ಅದಾದ ಮೇಲೆ ತನ್ನ ಜಾಗವನ್ನು ಖಾಲಿ ಮಾಡುತ್ತೆ. ಹೀಗಾಗಿ ಕಣ್ಣ ಮುಚ್ಚಾಲೆ ಬೀಚ್ ಅಂತ ಹೇಳಲಾಗುತ್ತೆ.
ಬ್ಯಾರೆನ್ ದ್ವೀಪ:- ಇಲ್ಲಿ ಯಾವ ಜನರೂ ವಾಸ ಮಾಡುವುದಿಲ್ಲ. ಇದು ಪೋರ್ಟ್ ಬ್ಲೇರ್ ನಿಂದ ಈಶಾನ್ಯಕ್ಕೆ ಸುಮಾರು 135ಕೀ ಮೀ ದೂರದಲ್ಲಿ ಅಂಡಮಾನ್ ಸಮುದ್ರದಲ್ಲಿ ಇದೆ.
ನ್ಯೂ ಲಕ್ಕಿ ರೆಸ್ಟೋರೆಂಟ್:- ಈ ರೆಸ್ಟೋರೆಂಟ್ ಬಗ್ಗೆ ಕೇಳಿದರೆ ನಿಮಗಂತೂ ವಿಚಿತ್ರ ಅಂತ ಅನ್ಸುತ್ತೆ. ಯಾಕಂದ್ರೆ ಇದು ಅಹಮದ್ ಬಾದ್ ನ ಲಾಲ್ ದರ್ವಾಜ ಪ್ರದೇಶದಲ್ಲಿದೆ. ಈ ಹೋಟೆಲ್ನಲ್ಲಿ ಶವ ಪಟ್ಟಿಗೆ ಪಕ್ಕ ಊಟ ಮಾಡೋದು ಭಯಾನಕವಾದಂತಹ ಅನುಭವ ನೀಡುತ್ತೆ. ಆದ್ರೆ ಇಲ್ಲಿಗೆ ಬರುವ ಜನರಿಗೆ ಅದೇನು ಫೀಲ್ ಆಗಲ್ಲ. ಶವ ಪೆಟ್ಟಿಗೆ ಪಕ್ಕನೆ ಕುಳಿತುಕೊಂಡು ಆರಾಮಾಗಿ ಊಟ ಮಾಡುತ್ತಾರೆ.
ಜಲ್ ಮಹಲ್, ಜೈಪುರ:- 300 ವರ್ಷಗಳ ಹಿಂದೆ ತನ್ನ ವಿಶ್ರಾಂತಿಗಾಗಿ ಓರ್ವ ರಾಜ ನಿರ್ಮಿಸಿದ ಕೋಟೆ ಇದು. 18ನೇ ಶತಮಾನದಲ್ಲಿ ಈ ನಗರವನ್ನು ಪ್ರವಾಹದಿಂದ ರಕ್ಷಿಸಲು ಸುತ್ತಮುತ್ತಲಿನ ಎರಡು ಬೆಟ್ಟಗಳ ನಡುವೆ ಅಣೆಕಟ್ಟನ್ನು ನಿರ್ಮಿಸಲು ಅಮೇರ್ ರಾಜ ನಿರ್ಧರಿಸಿದಾಗ, ಅರಮನೆಯ ಸುತ್ತಲಿನ ತಗ್ಗು ನೀರಿನಿಂದ ತುಂಬಲು ಪ್ರಾರಂಭಿಸಿತು.