ಮದುವೆ ಮಂಟಪದಲ್ಲೇ ಕಂಟ್ರೋಲ್‌ ತಪ್ಪಿದ ವಧು | ಪತಿಯ ಎದುರು ಮಾಡೇ ಬಿಟ್ಳು ಈ ಕೆಲಸ

ಇತ್ತೀಚೆಗೆ ಹಲವು ಮದುವೆ ಸಮಾರಂಭಗಳ ವೀಡಿಯೋ ಸಖತ್ ಆಗಿ ವೈರಲ್ ಆಗುತ್ತೆ. ಕೆಲವೊಂದು ಮನರಂಜನೆ ನೀಡಿದರೆ ಕೆಲವೊಂದು ದುಃಖ ನೀಡುತ್ತೆ. ಆದರೆ ಇಲ್ಲಿ ನಾವು ಹೇಳೋಕೆ ಹೊರಟಿರೋದು ವಧು ಹಾಗೂ ಪ್ರಿಯಕರನ ಮತ್ತೆ ಮಿಲನದ ವೀಡಿಯೋ. ಅಯ್ಯೋ ಇದೇನು? ಅಂತೀರಾ…ವಿಷಯ ಇಲ್ಲಿದೆ.

ವೈರಲ್ ಆಗಿರೋ ಈ ವೀಡಿಯೋದಲ್ಲಿ ವಧುವಿನ ವರ ಕೂಡ ಕಾಣಿಸಿಕೊಂಡಿದ್ದಾನೆ. ವಿಡಿಯೋ ನೋಡಿದರೆ ನೀವೂ ಕೂಡ ಒಂದು ಕ್ಷಣ ಶಾಕ್ ಆಗುವಿರಿ. ಏಕೆಂದರೆ, ಕುಟುಂಬ ಸದಸ್ಯರು ಹಾಗೂ ಪತಿಯ ಎದುರೇ ವಧು ಯಾವ ರೀತಿ ತನ್ನ ಪ್ರಿಯಕರನಿಗೆ ಆಂಟಿಕೊಂಡಿದ್ದಾಳೆ ಎಂದರೆ, ಅವರನ್ನು ಬೇರ್ಪಡಿಸಲು ಹರಸಾಹಸವೇ ಪಡಬೇಕಾದ ಸ್ಥಿತಿ ಬಂದೊದಗಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಶಾಕ್ ಜೊತೆಗೆ ಆಶ್ಚರ್ಯಚಕಿತರಾಗಿದ್ದಾರೆ. ಮದುವೆಯಲ್ಲಿ ಡ್ಯಾನ್ಸ್ ನಡೆಯುತ್ತಿರುವುದನ್ನು ವೀಡಿಯೋದಲ್ಲಿ ನೀವು ನೋಡಬಹುದು. ಒಂದು ಹಿಂದಿ ಹಾಡಿಗೆ ವಧು ಮತ್ತು ಅವಳ ಪ್ರೇಮಿ ನೃತ್ಯ ಮಾಡುತ್ತಿರುತ್ತಾರೆ. ಪ್ರಿಯಕರ ಬಹಳ ಫೀಲಿಂಗ್ ನಲ್ಲಿ ಡ್ಯಾನ್ಸ್ ಮಾಡ್ತಿದ್ದರೆ ಇತ್ತ ಕಡೆ ವಧು ಕೂಡಾ ಅವನ ಹೆಜ್ಜೆಗೆ ಹೆಜ್ಜೆ ಹಾಕಿದ್ದಾಳೆ. ಹಾಗೇ ವರ ಒಂದು ಬದಿಯಲ್ಲಿ ಸುಮ್ಮನೆ ನಿಂತಿದ್ದಾನೆ.

ಮೊದಮೊದಲು ವಧುವಿನ ಜೊತೆ ಡ್ಯಾನ್ಸ್ ಮಾಡುತ್ತಿರುವ ಯುವಕ ಆಕೆಯ ಪ್ರಿಯಕರ ಎಂಬುದು ಜನರಿಗೆ ತಿಳಿದಿರಲಿಲ್ಲ. ಇದೇ ಕಾರಣದಿಂದ ಎಲ್ಲರೂ ಕೂಡ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಾರೆ. ಆದರೆ, ‘ತುಜೊ ಹಿ ದುಲ್ಲಾ ಬನೌಂಗಿ’ ಹಾಡು ಡಿಜೆಯಲ್ಲಿ ಪ್ಲೇ ಆಗಲು ಪ್ರಾರಂಭವಾಯಿತೋ ವಧು ತನ್ನ ಮೇಲಿನ ನಿಯಂತ್ರಣ ಕಳೆದುಕೊಂಡು ತಬ್ಬಿಕೊಂಡು ನೃತ್ಯ ಮಾಡುತ್ತಾಳೆ. ಈ ಕ್ಷಣದಲ್ಲಿ ಅಲ್ಲಿ ನೆರೆದವರಿಗೆ ಗೊತ್ತಾಗುತ್ತೆ ಅಷ್ಟೊಂದು ಇಮೋಷನಲ್ ಆಗಿ ಡ್ಯಾನ್ಸ್ ಮಾಡುತ್ತಿದ್ದ ಯುವಕ ವಧುವಿನ ಪ್ರಿಯಕರ ಎಂದು.

ತಕ್ಷಣ, ಮನೆಯವರು ಇಬ್ಬರನ್ನೂ ದೂರ ಮಾಡಲು ಕೂಡಲೇ ಪ್ರಯತ್ನ ಮಾಡುತ್ತಾರೆ. ಆದರೆ, ಸಾಕಷ್ಟು ಪ್ರಯತ್ನಗಳ ನಂತರವೂ ವಧುವನ್ನು ತನ್ನ ಪ್ರೇಮಿಯಿಂದ ಬೇರ್ಪಡಿಸಲು ಅಲ್ಲಿದ್ದವರಿಗೆ ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, ವರ ತುಂಬಾ ಕೋಪಗೊಂಡು, ಅವನು ಅಲ್ಲಿಂದ ಹೊರಟು ಹೋಗುತ್ತಾನೆ. ಅಂದಹಾಗೆ ಈ ವೀಡಿಯೋದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಕೂಡ ಗೊತ್ತಿಲ್ಲ. ಮೂರು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ವಿಡಿಯೋ ವೈರಲ್ ಆಗುತ್ತಿರುವುದಂತೂ ಖಂಡಿತ ಸತ್ಯ.

https://twitter.com/JaikyYadav16/status/1603381345975119872?ref_src=twsrc%5Etfw%7Ctwcamp%5Etweetembed%7Ctwterm%5E1603381345975119872%7Ctwgr%5E1f05424138e5136dd674922fc9f3122f5b6e0b66%7Ctwcon%5Es1_c10&ref_url=http%3A%2F%2Fapi-news.dailyhunt.in%2F

Leave A Reply

Your email address will not be published.